ಒಂದು ವೇಳೆ ಸೌತ್ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ಸೋತರೆ, ಇಂಗ್ಲೆಂಡ್ ತಂಡಕ್ಕೆ ಸೆಮಿಫೈನಲ್ಗೇರಲು ಅವಕಾಶ ಹೆಚ್ಚಾಗಲಿದೆ. ಅದರಂತೆ ಮುಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಗೆದ್ದರೆ, ಆತಿಥೇಯ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ನಿಂದ ಹೊರಬೀಳಲಿದೆ. ಹೀಗಾಗಿ ಮುಂದಿನ ಮ್ಯಾಚ್ ವಿಂಡೀಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.