IND vs BAN: 6 ತಂಡಗಳ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ರೋಹಿತ್ ಶರ್ಮಾ..!
T20 World Cup 2024, Rohit Sharma: ಈ ಪಂದ್ಯದಲ್ಲಿ ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್ ಗಳಿಸಿದರು. ಅವರ ಈ ಚುಟುಕು ಇನ್ನಿಂಗ್ಸ್ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಸೇರಿದ್ದವು. ಪಂದ್ಯದಲ್ಲಿ ಸಿಡಿಸಿದ ಏಕೈಕ ಸಿಕ್ಸರ್ನೊಂದಿಗೆ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 50 ಸಿಕ್ಸರ್‌ಗಳನ್ನು ಪೂರೈಸಿದರು. ಈ ಮೂಲಕ ಅಪರೂಪದ ದಾಖಲೆಯನ್ನೂ ನಿರ್ಮಿಸಿದರು.