T20 World Cup 2024: ಟಿ20 ವಿಶ್ವಕಪ್ ಸೆಮಿಫೈನಲ್ ವೇಳಾಪಟ್ಟಿ

|

Updated on: Jun 25, 2024 | 5:07 PM

T20 World Cup 2024: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿದಿದ್ದವು. ಆಸ್ಟ್ರೇಲಿಯಾ, ಪಾಕಿಸ್ತಾನ್, ಬಾಂಗ್ಲಾದೇಶ್, ಕೆನಡಾ, ಐರ್ಲೆಂಡ್, ನಮೀಬಿಯಾ, ನೇಪಾಳ, ನೆದರ್​ಲೆಂಡ್ಸ್, ನ್ಯೂಝಿಲೆಂಡ್, ಒಮಾನ್, ಪಪುವಾ ನ್ಯೂ ಗಿನಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ, ಉಗಾಂಡ, ಯುಎಸ್​ಎ, ವೆಸ್ಟ್ ಇಂಡೀಸ್​ ನಡುವಣ ಕದನದಲ್ಲಿ ಇದೀಗ ಭಾರತ, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಮಾತ್ರ ಉಳಿದಿವೆ.

1 / 5
T20 World Cup 2024: ಟಿ20 ವಿಶ್ವಕಪ್ ನಾಕೌಟ್ ಹಂತಕ್ಕೆ ಬಂದು ನಿಂತಿದೆ. 20 ತಂಡಗಳೊಂದಿಗೆ ಶುರುವಾದ ಟೂರ್ನಿಯು ಇದೀಗ 4 ತಂಡಗಳ ಕದನವಾಗಿ ಮಾರ್ಪಟ್ಟಿದೆ. ಅದರಂತೆ ನಾಕೌಟ್ ಹಂತದಲ್ಲಿ ಸೌತ್ ಆಫ್ರಿಕಾ, ಇಂಗ್ಲೆಂಡ್, ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಕಣಕ್ಕಿಳಿಯಲಿದೆ.

2 / 5
ಈ ಪಂದ್ಯಗಳಿಗೂ ವೆಸ್ಟ್ ಇಂಡೀಸ್​ನ ಕೆರಿಬಿಯನ್ ದ್ವೀಪಗಳ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ಮೊದಲ ಸೆಮಿ ಫೈನಲ್​ ಟ್ರಿನಿಡಾಟ್-ಟೊಬಾಗೊದಲ್ಲಿ ನಡೆದರೆ, ಎರಡನೇ ಪಂದ್ಯವು ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಜರುಗಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ...

3 / 5
ಸೌತ್ ಆಫ್ರಿಕಾ vs ಅಫ್ಘಾನಿಸ್ತಾನ್: ಜೂನ್ 27 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಟ್ರಿನಿಡಾಡ್​-ಟೊಬೊಗೊದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಯಿಂದ ಶುರುವಾಗಲಿದೆ.

4 / 5
ಭಾರತ vs ಇಂಗ್ಲೆಂಡ್: ಜೂನ್ 27 ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.

5 / 5
ಈ ಎರಡು ಸೆಮಿಫೈನಲ್​ನಲ್ಲಿ ಗೆಲ್ಲುವ ತಂಡಗಳು ಫೈನಲ್​ಗೆ ಪ್ರವೇಶಿಸಲಿದ್ದು, ಅದರಂತೆ ಜೂನ್ 29 ರಂದು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ 9ನೇ ಆವೃತ್ತಿಯ ಟಿ20 ವಿಶ್ವಕಪ್​ಗೆ ತೆರೆ ಬೀಳಲಿದೆ.

Published On - 5:03 pm, Tue, 25 June 24