T20 World Cup 2024: ಭಾರತ ತಂಡ ಮೋಸದಿಂದ ಗೆದ್ದಿದೆ: ಪಾಕ್ ಮಾಜಿ ನಾಯಕನ ಗಂಭೀರ ಆರೋಪ

T20 World Cup 2024: ಜೂನ್ 24 ರಂದು ನಡೆದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 205 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 181 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 24 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದೀಗ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೋಸದಾಟವಾಡಿದೆ ಎಂದು ಪಾಕ್ ಕ್ರಿಕೆಟಿಗ ಆರೋಪಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Jun 25, 2024 | 10:18 PM

T20 World Cup 2024: ಟಿ20 ವಿಶ್ವಕಪ್​ನ ಸೂಪರ್-8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಮೋಸದಿಂದ ಜಯಗಳಿಸಿದೆ ಎಂದು ಪಾಕಿಸ್ತಾನ್ ತಂಡದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ಆರೋಪಿಸಿದ್ದಾರೆ. ಪಂದ್ಯದ 15ನೇ ಓವರ್​ನಲ್ಲೇ ಚೆಂಡು ರಿವರ್ಸ್​ ಸ್ವಿಂಗ್ ಆಗುತ್ತಿದ್ದದ್ದು ಇದಕ್ಕೆ ಸಾಕ್ಷಿ ಎಂದು ಇಂಝಮಾಮ್ ಹೇಳಿದ್ದಾರೆ.

1 / 6
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದ ವೇಳೆ ನ್ಯೂಸ್ 24 ಚಾನೆಲ್​ನ ಚರ್ಚೆಯಲ್ಲಿ ಭಾಗವಹಿಸಿದ್ದ ಇಂಝಮಾಮ್ ಉಲ್ ಹಕ್, ಭಾರತ ತಂಡದ ಗೆಲುವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ತಂಡವು ಉತ್ತಮ ಬೌಲಿಂಗ್ ಮಾಡಲು ಸಾಧ್ಯವಾಗದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಉತ್ತಮ ದಾಳಿ ಸಂಘಟಿಸಿದ್ದರು.

2 / 6
ಬಾಲ್ ಟ್ಯಾಂಪರಿಂಗ್ ಮಾಡಿರುವ ಕಾರಣ ಇದು ಸಾಧ್ಯವಾಗಿದೆ ಎಂದು ಇಂಝಮಾಮ್ ಆರೋಪಿಸಿದ್ದಾರೆ. ಅರ್ಷದೀಪ್ ಸಿಂಗ್ ಎಸೆದ 15ನೇ ಓವರ್​ನಲ್ಲೇ ಚೆಂಡು ರಿವರ್ಸ್ ಸ್ವಿಂಗ್ ಪಡೆಯುತ್ತಿತ್ತು. 15ನೇ ಓವರ್​ನಲ್ಲಿ ಚೆಂಡು ರಿವರ್ಸ್ ಸ್ವಿಂಗ್ ಆಗಬೇಕಿದ್ದರೆ, 12ನೇ 13ನೇ ಓವರ್​ ವೇಳೆಯೇ ಚೆಂಡನ್ನು ಇದಕ್ಕಾಗಿ ಸಿದ್ಧಪಡಿಸಬೇಕಾಗಿರುತ್ತದೆ.

3 / 6
ಹೀಗೆ ಚೆಂಡನ್ನು ಯಾವುದಾರೂ ರೀತಿಯಲ್ಲಿ ವಿರೂಪಗೊಳಿಸಿದರೆ ಮಾತ್ರ ರಿವರ್ಸ್ ಸ್ವಿಂಗ್ ಆಗುತ್ತದೆ. ಹೀಗಾಗಿ ಭಾರತೀಯ ಬೌಲರ್​ಗಳು ಚೆಂಡನ್ನು ಟ್ಯಾಂಪರಿಂಗ್ ಮಾಡಿರುವ ಸಾಧ್ಯತೆಯಿದೆ. ಇದನ್ನೆಲ್ಲಾ ಅಂಪೈರ್ ಕಣ್ಣು ಬಿಟ್ಟು ಗಮನಿಸಬೇಕು ಎಂದು ಇಂಝಮಾಮ್ ಉಲ್ ಹಕ್ ಹೇಳಿದ್ದಾರೆ.

4 / 6
ಇಂಝಮಾಮ್ ಉಲ್ ಹಕ್ ಅವರ ಈ ಆರೋಪಕ್ಕೆ ಮಾಜಿ ಕ್ರಿಕೆಟಿಗ ಸಲೀಮ್ ಮಲಿಕ್ ಕೂಡ ಧ್ವನಿಗೂಡಿಸಿದ್ದಾರೆ. ಕೆಲವು ಉನ್ನತ ತಂಡಗಳ ವಿಷಯಕ್ಕೆ ಬಂದಾಗ ಅಧಿಕಾರಿಗಳು ಕಣ್ಣು ಮುಚ್ಚಿರುತ್ತಾರೆ. ಅಂತಹ ತಂಡಗಳಲ್ಲಿ ಭಾರತ ಕೂಡ ಒಂದು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಬೌಲರ್​ಗಳು ಬಾಲ್ ಟ್ಯಾಂಪರಿಂಗ್ ಮಾಡಿರುವ ಸಾಧ್ಯತೆಯಿದೆ ಎಂದು ಮಲಿಕ್ ಕೂಡ ಆರೋಪಿಸಿದ್ದಾರೆ.

5 / 6
ಇದೀಗ ಇಂಝಮಾಮ್ ಉಲ್ ಹಾಗೂ ಸಲೀಮ್ ಮಲಿಕ್ ಅವರ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಪರ ವಿರೋಧ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ಪಾಕ್ ತಂಡದ ಕಳ್ಳಾಟವನ್ನು ಪ್ರಸ್ತಾಪಿಸುವ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳು ಖಡಕ್ ತಿರುಗೇಟು ನೀಡುತ್ತಿದ್ದಾರೆ.

6 / 6
Follow us