T20 World Cup 2024: ಟಿ20 ವಿಶ್ವಕಪ್ ಭಾರತ ತಂಡದ ವೇಳಾಪಟ್ಟಿ ಇಲ್ಲಿದೆ

|

Updated on: May 18, 2024 | 1:55 PM

T20 World Cup 2024: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಒಟ್ಟು ನಾಲ್ಕು ಗ್ರೂಪ್​ಗಳಿವೆ. ಈ ಗ್ರೂಪ್​ಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-ಎ ನಲ್ಲಿದ್ದು, ಹೀಗಾಗಿ ಮೊದಲ ಸುತ್ತಿನಲ್ಲೇ ಇಂಡೊ-ಪಾಕ್ ಕದನವನ್ನು ವೀಕ್ಷಿಸಬಹುದು. ಇದರ ಜೊತೆಗೆ ಲೀಗ್ ಹಂತದಲ್ಲಿ ಭಾರತ ತಂಡವು ಯುಎಸ್​ಎ ಮತ್ತು ಕೆನಡಾ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ.

1 / 6
T20 World Cup 2024: ಬಹುನಿರೀಕ್ಷಿತ ಟಿ20 ವಿಶ್ವಕಪ್ ಜೂನ್ 2 ರಿಂದ ಶುರುವಾಗಲಿದೆ. ವೆಸ್ಟ್ ಇಂಡೀಸ್-ಯುಎಸ್​ಎ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದ್ದು, ಭಾರತ ತಂಡವು ಜೂನ್ 5 ರಂದು ತನ್ನ ಮೊದಲ ಪಂದ್ಯವನ್ನಾಡಲಿದೆ. ಅದರಂತೆ ಲೀಗ್​ ಹಂತದಲ್ಲಿ ಟೀಮ್ ಇಂಡಿಯಾ ಎದುರಿಸಲಿರುವ ತಂಡಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

2 / 6
ಜೂನ್ 5 (ಬುಧವಾರ) ಭಾರತ vs ಐರ್ಲೆಂಡ್: ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಜೂನ್ 5 ರಂದು ನಡೆಯಲಿರುವ ಈ ಪಂದ್ಯಕ್ಕೆ ನ್ಯೂಯಾರ್ಕ್​ನ ನಸ್ಸೌ ಸ್ಟೇಡಿಯಂ ಆತಿಥ್ಯವಹಿಸಲಿದೆ.

3 / 6
ಜೂನ್ 9 (ಭಾನುವಾರ) ಭಾರತ vs ಪಾಕಿಸ್ತಾನ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಜೂನ್ 9 ರಂದು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೂ ನ್ಯೂಯಾರ್ಕ್​ನ ನೂತನ ಕ್ರಿಕೆಟ್​ ಸ್ಟೇಡಿಯಂ ನಸ್ಸೌ ಇಂಟರ್​ನ್ಯಾಷನಲ್ ಗ್ರೌಂಡ್​ ಆತಿಥ್ಯವಹಿಸಲಿದೆ.

4 / 6
ಜೂನ್ 12 (ಬುಧವಾರ) ಭಾರತ vs ಯುಎಸ್​ಎ: ನ್ಯೂಯಾರ್ಕ್​ನ ನಸ್ಸೌ ಸ್ಟೇಡಿಯಂನಲ್ಲಿ ಜೂನ್ 12 ರಂದು ನಡೆಯಲಿರುವ ಟಿ20 ವಿಶ್ವಕಪ್​ ಪಂದ್ಯದಲ್ಲಿ ಭಾರತ ಮತ್ತು ಯುಎಸ್​ಎ ತಂಡಗಳು ಮುಖಾಮುಖಿಯಾಗಲಿದೆ.

5 / 6
ಜೂನ್ 15 (ಶನಿವಾರ) ಭಾರತ vs ಕೆನಡಾ: ಅಮೆರಿಕದ ಲಾಡರ್ಹಿಲ್​ನ ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ 33ನೇ ಪಂದ್ಯದಲ್ಲಿ ಭಾರತ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿದೆ.

6 / 6
ಈ ನಾಲ್ಕು ಲೀಗ್ ಪಂದ್ಯಗಳ ಬಳಿಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ 2 ತಂಡಗಳು ಸೂಪರ್-8 ಹಂತಕ್ಕೇರಲಿದೆ. ಆ ಬಳಿಕ 8 ತಂಡಗಳ ನಡುವೆ ಸೂಪರ್-8 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್​ಗೇರಲಿದೆ.

Published On - 1:55 pm, Sat, 18 May 24