T20 World Cup 2024: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತದ ಪಂದ್ಯ ಯಾವಾಗ, ಯಾರ ವಿರುದ್ಧ?

Updated on: May 17, 2024 | 3:58 PM

T20 World Cup 2024: ಇದೇ ಮೊದಲ ಬಾರಿಗೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ ನಡೆಯುತ್ತಿದೆ. ಲೀಗ್ ಹಂತ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿದ್ದು ಇದೀಗ ಐಸಿಸಿ, ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

1 / 6
ಜೂನ್ 1 ರಿಂದ ಐಸಿಸಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಮಿನಿ ವಿಶ್ವಕಪ್‌ಗಾಗಿ ಪಾಕಿಸ್ತಾನವನ್ನು ಹೊರತುಪಡಿಸಿ ಎಲ್ಲಾ ತಂಡಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಅಂದರೆ ಪಾಕಿಸ್ತಾನವನ್ನು ಹೊರತುಪಡಿಸಿ, 19 ತಂಡಗಳು ತಮ್ಮ ತಂಡವನ್ನು ಬಿಡುಗಡೆ ಮಾಡಿದೆ.

ಜೂನ್ 1 ರಿಂದ ಐಸಿಸಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಮಿನಿ ವಿಶ್ವಕಪ್‌ಗಾಗಿ ಪಾಕಿಸ್ತಾನವನ್ನು ಹೊರತುಪಡಿಸಿ ಎಲ್ಲಾ ತಂಡಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಅಂದರೆ ಪಾಕಿಸ್ತಾನವನ್ನು ಹೊರತುಪಡಿಸಿ, 19 ತಂಡಗಳು ತಮ್ಮ ತಂಡವನ್ನು ಬಿಡುಗಡೆ ಮಾಡಿದೆ.

2 / 6

ಇದೇ ಮೊದಲ ಬಾರಿಗೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ ನಡೆಯುತ್ತಿದೆ. ಲೀಗ್ ಹಂತ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿದ್ದು ಇದೀಗ ಐಸಿಸಿ, ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

3 / 6

ಮೇ 27 ರಿಂದ ಈ ಅಭ್ಯಾಸ ಪಂದ್ಯಗಳು ಆರಂಭವಾಗಲಿದ್ದು, ಈ ದಿನದಂದು 3 ಅಭ್ಯಾಸ ಪಂದ್ಯಗಳು ನಡೆಯಲ್ಲಿವೆ. ಮೇ 28 ರಂದು ಕೂಡ 3 ಪಂದ್ಯಗಳು ನಡೆಯಲಿದ್ದು, ಮೇ 29 ರಂದು 2 ಪಂದ್ಯಗಳು ನಡೆಯಲ್ಲಿವೆ.

4 / 6

ಮೇ 30 ರಂದು 5 ಪಂದ್ಯಗಳು ನಡೆಯಲಿದ್ದು, ಮೇ 31 ರಂದು ಕೂಡ 2 ಪಂದ್ಯಗಳು ನಡೆಯಲ್ಲಿವೆ. ಹಾಗೆಯೇ ಜೂನ್ 1 ರಂದು ಏಕೈಕ ಅಭ್ಯಾಸ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ.

5 / 6

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕೈಕ ಅಭ್ಯಾಸ ಪಂದ್ಯ ಅಮೆರಿಕದಲ್ಲಿ ನಡೆಯಲಿದೆ. ಈ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ 3 ತಂಡಗಳ ಹೆಸರಿಲ್ಲ. ಈ 3 ತಂಡಗಳಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಸೇರಿವೆ. ಇದಲ್ಲದೇ 17 ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡಲಿವೆ.

6 / 6

ಈ ಪಂದ್ಯಗಳು ತಲಾ 20 ಓವರ್‌ಗಳದ್ದಾಗಿದ್ದು, ಎಲ್ಲಾ 15 ಆಟಗಾರರು ಆಡುವ ಅವಕಾಶವನ್ನು ಪಡೆಯುತ್ತಾರೆ. ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್ 2024 ರ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಬೇಕಾಗಿದೆ, ಈ ಪಂದ್ಯವು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

Loading...
Unable to load recommendations.
Follow Us