ಹೀಗಾದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವೆ 3 ಬಾರಿ ಮುಖಾಮುಖಿ

Edited By:

Updated on: Nov 26, 2025 | 3:26 PM

T20 World Cup 2026: ಭಾರತೀಯ ಕ್ರಿಕೆಟ್ ಮಂಡಳಿ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜಂಟಿಯಾಗಿ ಆಯೋಜಿಸಲಿರುವ ಐಸಿಸಿ ಟಿ20 ವಿಶ್ವಕಪ್​ ಫೆಬ್ರವರಿ 7 ರಿಂದ ಶುರುವಾಗಲಿದೆ. 29 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 8 ರಂದು ಅಹಮದಬಾದ್ ಅಥವಾ ಕೊಲಂಬೊದ ಆರ್​ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.

1 / 5
T20 World Cup 2026 Schedule: ಟಿ20 ವಿಶ್ವಕಪ್​ 2026 ವೇಳಾಪಟ್ಟಿ ಪ್ರಕಟವಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ ಇಪ್ಪತ್ತು ತಂಡಗಳನ್ನು ನಾಲ್ಕು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ.

2 / 5
ಇತ್ತ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-1 ರಲ್ಲಿದ್ದು,  ಹೀಗಾಗಿ ಮೊದಲ ಸುತ್ತಿನಲ್ಲೇ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದೆ. ಅದರಂತೆ ಫೆಬ್ರವರಿ 15 ರಂದು ನಡೆಯಲಿರುವ ಟಿ20 ವಿಶ್ವಕಪ್​ನ 27ನೇ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಕಣಕ್ಕಿಳಿಯಲಿದೆ. ಈ ಪಂದ್ಯದ ಬಳಿಕ ಪಾಕಿಸ್ತಾನ್ ಹಾಗೂ ಟೀಮ್ ಇಂಡಿಯಾ ಸೂಪರ್-8 ಹಂತಕ್ಕೇರಿದರೆ ಮತ್ತೊಮ್ಮೆ ಎದುರು ಬದುರಾಗಲಿದೆ.

3 / 5
ಇನ್ನು ಸೂಪರ್-8 ಹಂತದಲ್ಲೂ ಎರಡು ತಂಡಗಳು ಅಂಕಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಂಡರೆ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಬಹುದು. ಅಂದರೆ ಸೂಪರ್-8 ಅಂಕ ಪಟ್ಟಿಯಲ್ಲಿ ಭಾರತ ತಂಡ ಮೊದಲ ಸ್ಥಾನ ಅಲಂಕರಿಸಿ, ಪಾಕಿಸ್ಥಾನ್ 4ನೇ ಸ್ಥಾನ ಪಡೆದರೆ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿದೆ.

4 / 5
ಒಂದು ವೇಳೆ ಉಭಯ ತಂಡಗಳು ಸೆಮಿಫೈನಲ್​ನಲ್ಲಿ ಬೇರೆ ತಂಡಗಳ ವಿರುದ್ಧ ಕಣಕ್ಕಿಳಿದು ಗೆದ್ದರೂ ಫೈನಲ್​ನಲ್ಲಿ ಮುಖಾಮುಖಿಯಾಗಲಿದೆ. ಅದರಂತೆ ಕೇವಲ 29 ದಿನಗಳ ನಡುವೆ ಭಾರತ-ಪಾಕಿಸ್ತಾನ್ ನಡುವಣ ಮೂರು ಹೈವೋಲ್ಟೇಜ್ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ದೊರಕಲಿದೆಯಾ ಕಾದು ನೋಡಬೇಕಿದೆ.

5 / 5
ಆದರೆ ಈ ಬಾರಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಶ್ರೀಲಂಕಾದಲ್ಲಿ ಎಂಬುದು ವಿಶೇಷ. ಅಂದರೆ ಪಾಕಿಸ್ತಾನ್ ತಂಡವು ಭಾರತದಲ್ಲಿ ಟೂರ್ನಿಯ ಆಡಲು ನಿರಾಕರಿಸಿದೆ. ಹೀಗಾಗಿ ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತಿದೆ. ಅದರಂತೆ ಇಂಡೊ-ಪಾಕ್ ಕದನಕ್ಕೆ ಈ ಬಾರಿ ಶ್ರೀಲಂಕಾದ ಆರ್​. ಪ್ರೇಮದಾಸ ಸ್ಟೇಡಿಯಂ ಆತಿಥ್ಯವಹಿಸಲಿದೆ.