ಕೊಹ್ಲಿ-ರೋಹಿತ್ ಟಿ20 ಕ್ರಿಕೆಟ್ ಆಡದಿರಲು ಕಾರಣ ಬಹಿರಂಗ: ರಹಸ್ಯ ಬಿಚ್ಚಿಟ್ಟ ಹಿಟ್​ಮ್ಯಾನ್

Rohit Sharma-Virat Kohli: ರೋಹಿತ್ ಹಾಗೂ ಕೊಹ್ಲಿ ಇನ್ಮುಂದೆ ಭಾರತ ಪರ ಟಿ20 ಯಲ್ಲಿ ಆಡುವುದಿಲ್ಲ ಎಂಬ ಸುದ್ದಿ ಕೂಡ ಹರಿದಾಡಿತು. ಯುವ ಆಟಗಾರರನ್ನು ಕಟ್ಟುವ ನಿಟ್ಟಿನಲ್ಲಿ ಇವರಿಗಿನ್ನು ತಂಡದಲ್ಲಿ ಅವಕಾಶ ಇಲ್ಲ ಎಂದು ಹೇಳಲಾಗಿತ್ತು. ಆದರೆ ವಾಸ್ತವ ಬೇರೆಯೇ ಇದೆ.

Vinay Bhat
|

Updated on: Aug 11, 2023 | 9:27 AM

ಭಾರತ ಕ್ರಿಕೆಟ್ ತಂಡ ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್​ನಿಂದ ಹೊರಬಿದ್ದ ಬಳಿಕ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈವರೆಗೆ ಯಾವುದೇ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿಲ್ಲ. ನವೆಂಬರ್ 10, 2022 ರಂದು, ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದ ನಂತರ ಇವರಿಬ್ಬರು ಟಿ20ಯಲ್ಲಿ ಆಡುತ್ತಿಲ್ಲ.

1 / 8
ರೋಹಿತ್ ಹಾಗೂ ಕೊಹ್ಲಿ ಇನ್ಮುಂದೆ ಭಾರತ ಪರ ಟಿ20 ಯಲ್ಲಿ ಆಡುವುದಿಲ್ಲ ಎಂಬ ಸುದ್ದಿ ಕೂಡ ಹರಿದಾಡಿತು. ಯುವ ಆಟಗಾರರನ್ನು ಕಟ್ಟುವ ನಿಟ್ಟಿನಲ್ಲಿ ಇವರಿಗಿನ್ನು ತಂಡದಲ್ಲಿ ಅವಕಾಶ ಇಲ್ಲ ಎಂದು ಹೇಳಲಾಗಿತ್ತು. ಆದರೆ ವಾಸ್ತವ ಬೇರೆಯೇ ಇದೆ. ಗುರುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ರೋಹಿತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

2 / 8
ನಾವು ಕೆಲವು ಪ್ರಯೋಗವನ್ನು ಮಾಡುತ್ತಿದ್ದೇವೆ. ಕಳೆದ ವರ್ಷವೂ ನಾವು ಅದೇ ಕೆಲಸವನ್ನು ಮಾಡಿದ್ದೇವೆ. 2022 ರಲ್ಲಿ ಟಿ20 ವಿಶ್ವಕಪ್ ಇತ್ತು. ಆದ್ದರಿಂದ ನಾವು ಏಕದಿನ ಕ್ರಿಕೆಟ್ ಆಡಲಿಲ್ಲ. ಈ ಬಾರಿ ಏಕದಿನ ವಿಶ್ವಕಪ್ ಇದೆ. ಹೀಗಾಗಿ ಒಡಿಐ ಕ್ರಿಕೆಟ್​ನತ್ತ ನಾವು ಹೆಚ್ಚು ಗಮನ ಹಿರುಸುತ್ತಿರುವುದರಿಂದ ಟಿ20 ಆಡುತ್ತಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

3 / 8
ನೀವು ಎಲ್ಲ ಮಾದರಿಯ ಕ್ರಿಕೆಟ್ ಆಡಿ ವಿಶ್ವಕಪ್‌ಗೆ ಸಿದ್ಧರಾಗಿರಲು ಸಾಧ್ಯವಿಲ್ಲ. ನಾವು ಈ ನಿರ್ಧಾರವನ್ನು ಎರಡು ವರ್ಷಗಳ ಹಿಂದೆಯೆ ತೆಗೆದುಕೊಂಡಿದ್ದೆವು. ಆಗಸ್ಟ್ 2022 ರಿಂದ ರವೀಂದ್ರ ಜಡೇಜಾ ಕೂಡ ಯಾವುದೇ ಟಿ20 ಪಂದ್ಯ ಆಡಿಲ್ಲ. ಅವರು ಕೂಡ ನಮ್ಮ ಪ್ಲಾನ್​ನಲ್ಲಿ ಇದ್ದಾರೆ ಎಂಬುದು ಹಿಟ್​ಮ್ಯಾನ್ ಮಾತು.

4 / 8
ಇದು ವಿಶ್ವಕಪ್ ವರ್ಷ. ನಾವು ಎಲ್ಲ ಆಟಗಾರರು ಫ್ರೆಶ್ ಆಗಿರಲು ಬಯಸುತ್ತೇವೆ. ಈಗಾಗಲೇ ನಾವು ತಂಡದಲ್ಲಿ ಹಲವು ಇಂಜುರಿಗಳನ್ನು ನೋಡಿದ್ದೇವೆ. ನಾನು ಕೂಡ ಈಗ ಇಂಜುರಿಯ ಭಯದಲ್ಲಿದ್ದೇನೆ. ನಾವು ಆಟಗಾರರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಿಸಿಸಿಐಯೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ - ರೋಹಿತ್ ಶರ್ಮಾ.

5 / 8
ನಮಗೆ ಆಟಗಾರರಿಗೆ ವಿಶ್ರಾಂತಿ ನೀಡಲು ಅವಕಾಶ ಸಿಕ್ಕಾಗಲೆಲ್ಲಾ ನಾವು ಅವರಿಗೆ ವಿಶ್ರಾಂತಿ ನೀಡುತ್ತೇವೆ. ಪ್ರಮುಖ ಟೂರ್ನಿಗಳನ್ನು ಯಾರೂ ತಪ್ಪಿಸಿಕೊಳ್ಳಬಾರದು. ಈಗಾಗಲೇ ನಮ್ಮ ಕೆಲ ಪ್ರಮುಖ ಆಟಗಾರರು ಕಳೆದ ಎರಡು ವರ್ಷಗಳಲ್ಲಿ ಕೆಲವು ದೊಡ್ಡ ಟೂರ್ನಿಗಳನ್ನು ತಪ್ಪಿಸಿಕೊಂಡಿದ್ದಾರೆ. ಅದು ಮುಂದುವರೆಯಬಾರದು ಎಂದು ರೋಹಿತ್ ಹೇಳಿದ್ದಾರೆ.

6 / 8
ನಮ್ಮ ನಾಲ್ಕನೇ ಕ್ರಮಾಂಕವು ಕೆಲವು ಸಮಯದಿಂದ ನಮಗೆ ತಲೆನೋವಾಗಿದೆ. ಯುವರಾಜ್ ಸಿಂಗ್ ನಂತರ ಯಾವುದೇ ಬ್ಯಾಟ್ಸ್‌ಮನ್​ಗೆ ಆ ಸ್ಥಾನವನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಆದರೆ ಶ್ರೇಯಸ್ ಅಯ್ಯರ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅವರ ಅಂಕಿಅಂಶಗಳು ಉತ್ತಮವಾಗಿವೆ - ರೋಹಿತ್ ಶರ್ಮಾ.

7 / 8
ಆದರೆ ಶ್ರೇಯಸ್ ಬೆನ್ನುನೋವಿನಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ತಂಡದಿಂದ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ. ಹೀಗಾಗಿ ಪ್ರಮುಖ ಪಂದ್ಯಾವಳಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ತನ್ನ ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಬೇಕಿದೆ ಎಂಬುದು ರೋಹಿತ್ ಶರ್ಮಾ ಮಾತು.

8 / 8
Follow us
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ

ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು

ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ