Tagenarine Chanderpaul: ಚೊಚ್ಚಲ ಇನಿಂಗ್ಸ್ನಲ್ಲೇ ಅರ್ಧಶತಕ ಬಾರಿಸಿ ಶುಭಾರಂಭ ಮಾಡಿದ ಖ್ಯಾತ ಕ್ರಿಕೆಟಿಗನ ಪುತ್ರ..!
TV9 Web | Updated By: ಝಾಹಿರ್ ಯೂಸುಫ್
Updated on:
Dec 03, 2022 | 7:54 PM
Australia vs West Indies 1st Test: 498 ರನ್ಗಳ ಟಾರ್ಗೆಟ್ ಪಡೆದಿರುವ ವೆಸ್ಟ್ ಇಂಡೀಸ್ ತಂಡವು 3 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿದೆ. ಇನ್ನೂ 306 ರನ್ಗಳ ಅವಶ್ಯಕತೆಯಿದ್ದು, ಅಂತಿಮ ದಿನದಾಟ ಬಾಕಿ ಇದೆ.
1 / 6
ಪರ್ತ್ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ನಡುವಣ ಮೊದಲ ಪಂದ್ಯದ ಮೂಲಕ 26 ವರ್ಷದ ಟಾಗೆನರೈನ್ ಚಂದ್ರಪಾಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಅದು ಕೂಡ ಚೊಚ್ಚಲ ಇನಿಂಗ್ಸ್ನಲ್ಲೇ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ.
2 / 6
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ (200) ಹಾಗೂ ಮಾರ್ನಸ್ ಲಾಬುಶೇನ್ (204) ಅವರ ದ್ವಿಶತಕದ ನೆರವಿನಿಂದ 598 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆ ಬಳಿಕ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಟಾಗೆನರೈನ್ ಚಂದ್ರಪಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.
3 / 6
ಮೊದಲ ಪಂದ್ಯದಲ್ಲೇ ವಿಂಡೀಸ್ ಪರ ಇನಿಂಗ್ಸ್ ಆರಂಭಿಸಿದ ಟ್ಯಾಗೆನರೈನ್ ಅವರ ಬ್ಯಾಟಿಂಗ್ ಶೈಲಿ ಕೆಲವರಿಗೆ ವೆಸ್ಟ್ ಇಂಡೀಸ್ನ ಮಾಜಿ ಖ್ಯಾತ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಅವರನ್ನು ನೆನಪಿಸಿತ್ತು. ಏಕೆಂದರೆ ಅದೇ ಬ್ಯಾಟಿಂಗ್ ಶೈಲಿ, ಅದೇ ರಕ್ಷಣಾತ್ಮಕ ಆಟ. ಕುತೂಹಲಕಾರಿ ಸಂಗತಿಯೆಂದರೆ ಇದೇ ಶಿವನಾರಾಯಣ್ ಚಂದ್ರಪಾಲ್ ಅವರ ಮಗನೇ ಈ ಟ್ಯಾಗೆನರೈನ್ ಚಂದ್ರಪಾಲ್.
4 / 6
ತಂದೆಯಂತೆ ಬ್ಯಾಟ್ ಬೀಸುವ ಮೂಲಕ ಗಮನ ಸೆಳೆದ ಟಾಗೆನರೈನ್ ಚಂದ್ರಪಾಲ್ ಮೊದಲ ಇನಿಂಗ್ಸ್ನಲ್ಲಿ 79 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ನೊಂದಿಗೆ 51 ರನ್ ಕಲೆಹಾಕಿದರು. ಈ ಮೂಲಕ ಅರ್ಧಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶುಭಾರಂಭ ಮಾಡಿದ್ದಾರೆ.
5 / 6
ಇದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದಾಗಿ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 283 ರನ್ಗಳಿಗೆ ಆಲೌಟ್ ಆಗಿದೆ. ಇನ್ನು 2ನೇ ಇನಿಂಗ್ಸ್ ಆಡಿರುವ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 187 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.
6 / 6
ಇದೀಗ 498 ರನ್ಗಳ ಟಾರ್ಗೆಟ್ ಪಡೆದಿರುವ ವೆಸ್ಟ್ ಇಂಡೀಸ್ ತಂಡವು 3 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿದೆ. ಇನ್ನೂ 306 ರನ್ಗಳ ಅವಶ್ಯಕತೆಯಿದ್ದು, ಅಂತಿಮ ದಿನದಾಟ ಬಾಕಿ ಇದೆ. ಹೀಗಾಗಿ ವಿಂಡೀಸ್-ಆಸೀಸ್ ನಡುವಣ ಈ ಪಂದ್ಯವು ಕೊನೆಯ ದಿನದಾಟದಲ್ಲಿ ರೋಚಕ ಹೋರಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.