IPL 2023: CSK ತಂಡದ ಮುಂದಿನ ನಾಯಕ ಯಾರೆಂಬ ಸುಳಿವು ನೀಡಿದ ಮೈಕೆಲ್ ಹಸ್ಸಿ
TV9kannada Web Team | Edited By: Zahir PY
Updated on: Dec 03, 2022 | 8:59 PM
IPL 2023: ಶಾಂತ ಸ್ವಭಾವ, ಆತನ ಗಮನಹರಿಸುವಿಕೆ ಹಾಗೂ ವ್ಯಕ್ತಿತ್ವದಿಂದ ಇತರರು ಅವನತ್ತ ಆಕರ್ಷಿತರಾಗುತ್ತಾರೆ. ಅಲ್ಲದೆ ಆತನೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ.
Dec 03, 2022 | 8:59 PM
ಮಹೇಂದ್ರ ಸಿಂಗ್ ಧೋನಿಯ ನಿರ್ಗಮನದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಾರು ಮುನ್ನಡೆಸುವವರು ಯಾರು? ಈ ಪ್ರಶ್ನೆಗೆ ಸಿಎಸ್ಕೆ ಕಳೆದ ಸೀಸನ್ನಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿತು.
1 / 7
ತಂಡದ ಹೊಸ ನಾಯಕನಾಗಿ ರವೀಂದ್ರ ಜಡೇಜಾ ಅವರನ್ನು ಆಯ್ಕೆಯಾಗಿದ್ದರು. ಅದರಂತೆ 5 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಜಡೇಜಾ ಗೆಲುವಿನ ರುಚಿ ನೋಡಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ.
2 / 7
ಇದೀಗ 41 ವರ್ಷದ ಧೋನಿ ನಿವೃತ್ತಿ ಅಂಚಿನಲ್ಲಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್ ಮೂಲಕ MSD ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿಯೇ ಸಿಎಸ್ಕೆ ತಂಡದ ಮುಂದಿನ ನಾಯಕ ಯಾರೆಂಬ ಪ್ರಶ್ನೆ ಮತ್ತೆ ಉದ್ಭವಿಸಿದೆ.
3 / 7
ಈ ಪ್ರಶ್ನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಉತ್ತರಿಸಿದ್ದಾರೆ. CSK ತಂಡದ ಭವಿಷ್ಯದ ಯೋಜನೆಗಳೇನು ಎಂಬುದರ ಬಗ್ಗೆ ನನಗೆ ಖಚಿತತೆ ಇಲ್ಲ. ಆದರೆ ಧೋನಿಯಂತಹ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ. ಹೀಗಾಗಿ ಅವರಿಗೆ ನಾಯಕತ್ವ ಒಲಿಯಲಿದೆ ಎಂದಿದ್ದಾರೆ ಹಸ್ಸಿ.
4 / 7
ಅಷ್ಟಕ್ಕೂ ಹಸ್ಸಿ ಧೋನಿಯಂತಹ ಆಟಗಾರ ಎಂದು ಹೆಸರಿಸಿದ್ದು ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು. ರುತುರಾಜ್ ಧೋನಿಯಂತೆ ಶಾಂತ ಸ್ವಭಾವದವರು. MSD ಯಂತೆ ಆತ ಕೂಡ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಗಾಯಕ್ವಾಡ್ ಕೂಡ ಶಾಂತವಾಗಿರುತ್ತಾರೆ.
5 / 7
ಶಾಂತ ಸ್ವಭಾವ, ಆತನ ಗಮನಹರಿಸುವಿಕೆ ಹಾಗೂ ವ್ಯಕ್ತಿತ್ವದಿಂದ ಇತರರು ಅವನತ್ತ ಆಕರ್ಷಿತರಾಗುತ್ತಾರೆ. ಅಲ್ಲದೆ ಆತನೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ ರುತುರಾಜ್ ಗಾಯಕ್ವಾಡ್ ಅತ್ಯುತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಹೀಗಾಗಿ ಧೋನಿಯ ಉತ್ತರಾಧಿಕಾರಿಯಾಗಿ ರುತುರಾಜ್ ಗಾಯಕ್ವಾಡ್ ನೇಮಕವಾಗಬಹುದು ಎಂದು ಮೈಕೆಲ್ ಹಸ್ಸಿ ತಿಳಿಸಿದ್ದಾರೆ.
6 / 7
ವಿಶೇಷ ಎಂದರೆ ರುತುರಾಜ್ ಗಾಯಕ್ವಾಡ್ ಈಗಾಗಲೇ ದೇಶೀಯ ಅಂಗಳದಲ್ಲಿ ನಾಯಕನಾಗಿ ಮಿಂಚಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿ, ವಿಜಯ್ ಹಜಾರೆ ಟೂರ್ನಿಗಳಲ್ಲಿ ಮಹಾರಾಷ್ಟ್ರ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅದರಲ್ಲೂ ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ರುತುರಾಜ್ ನಾಯಕತ್ವದ ಮಹಾರಾಷ್ಟ್ರ ತಂಡವು ಫೈನಲ್ ಆಡಿ ರನ್ನರ್ ಅಪ್ ಆಗಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಸಿಎಸ್ಕೆ ತಂಡದ ನಾಯಕನಾಗಿ 25 ವರ್ಷದ ರುತುರಾಜ್ ಗಾಯಕ್ವಾಡ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.