IPL 2023: RCB ಈ ನಾಲ್ವರು ಆಟಗಾರರ ಖರೀದಿಗೆ ಮುಂದಾಗಬಹುದು..!
TV9kannada Web Team | Edited By: Zahir PY
Updated on: Dec 03, 2022 | 10:23 PM
IPL 2023 RCB Kannada: ಶೆರ್ಫಾನ್ ರುದರ್ಫೋರ್ಡ್ ಹಾಗೂ ಜೇಸನ್ ಬೆಹ್ರೆನ್ಡಾರ್ಫ್ ಅವರನ್ನು ರಿಲೀಸ್ ಮಾಡಿರುವ ಕಾರಣ, ಇಬ್ಬರು ವಿದೇಶಿ ಆಟಗಾರರ ಖರೀದಿಗೆ ಮುಂದಾಗಲಿದೆ.
Dec 03, 2022 | 10:23 PM
ಐಪಿಎಲ್ ಮಿನಿ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದೇ ತಿಂಗಳ 23 ರಂದು ಕೊಚ್ಚಿನ್ನಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದೆ. ಇದಕ್ಕಾಗಿ ಈಗಾಗಲೇ 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.
1 / 8
ಇತ್ತ 18 ಆಟಗಾರರನ್ನು ಉಳಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಿನಿ ಹರಾಜಿನ ಮೂಲಕ ಒಟ್ಟು 7 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ ಇಬ್ಬರು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.
2 / 8
ಅಂದರೆ ಆರ್ಸಿಬಿ ತಂಡದಲ್ಲಿ ಈಗಾಗಲೇ 6 ವಿದೇಶಿ ಆಟಗಾರರಿದ್ದಾರೆ. ಹೀಗಾಗಿ ಮಿನಿ ಹರಾಜಿನ ಮೂಲಕ ಇಬ್ಬರು ವಿದೇಶಿ ಆಟಗಾರರು ಹಾಗೂ 5 ಭಾರತೀಯ ಆಟಗಾರರನ್ನು ಖರೀದಿಸಬಹುದು.
3 / 8
ಇಲ್ಲಿ ಆರ್ಸಿಬಿ ಶೆರ್ಫಾನ್ ರುದರ್ಫೋರ್ಡ್ ಹಾಗೂ ಜೇಸನ್ ಬೆಹ್ರೆನ್ಡಾರ್ಫ್ ಅವರನ್ನು ರಿಲೀಸ್ ಮಾಡಿರುವ ಕಾರಣ, ಇಬ್ಬರು ವಿದೇಶಿ ಆಟಗಾರರ ಖರೀದಿಗೆ ಮುಂದಾಗಲಿದೆ. ಅದರಲ್ಲೂ ಜೇಸನ್ ಬದಲಿಗೆ ಮತ್ತೋರ್ವ ವಿದೇಶಿ ವೇಗಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಖಚಿತ. ಅದರಂತೆ ಆರ್ಸಿಬಿ ತಂಡವು ಮಿನಿ ಹರಾಜಿನಲ್ಲಿ ಟಾರ್ಗೆಟ್ ಮಾಡುವ ಆಟಗಾರರ ಪಟ್ಟಿಯಲ್ಲಿ ಕೆಲ ಸ್ಟಾರ್ ಆಟಗಾರರ ವೇಗಿಯ ಹೆಸರು ಕೇಳಿ ಬರುತ್ತಿದೆ. ಅವರೆಂದರೆ...
4 / 8
ಜೋಶ್ವ ಲಿಟಲ್: ಐರ್ಲೆಂಡ್ನ ಎಡಗೈ ವೇಗಿ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 23 ವರ್ಷದ ಯುವ ವೇಗಿ ಇದುವರೆಗೆ 26 ಟಿ20 ಪಂದ್ಯಗಳಿಂದ 39 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಎಡಗೈ ವೇಗಿಯ ಆಯ್ಕೆಯಲ್ಲಿ ಆರ್ಸಿಬಿ ಜೋಶ್ವ ಖರೀದಿಗೆ ಮುಂದಾಗುವ ಸಾಧ್ಯತೆ ಹೆಚ್ಚು.
5 / 8
ಸ್ಯಾಮ್ ಕರನ್: ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕರನ್ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಶೆರ್ಫಾನ್ ರುದರ್ಫೋರ್ಡ್ ಅನ್ನು ಕೈ ಬಿಟ್ಟಿರುವ ಆರ್ಸಿಬಿ ಬದಲಿ ಆಲ್ರೌಂಡರ್ ಆಗಿ ಸ್ಯಾಮ್ ಕರನ್ ಅವರಿಗೆ ಬಿಡ್ ಮಾಡುವುದು ಖಚಿತ. ಈ ಬಾರಿ ಟಿ20 ವಿಶ್ವಕಪ್ನಲ್ಲಿ 13 ವಿಕೆಟ್ ಕಬಳಿಸಿ ಭರ್ಜರಿ ಪ್ರದರ್ಶನ ನೀಡಿರುವ ಸ್ಯಾಮ್ ಅವರನ್ನು ಖರೀದಿಗೆ ಇತರೆ ಫ್ರಾಂಚೈಸಿಗಳು ಕೂಡ ಪೈಪೋಟಿ ನೀಡಲಿದೆ. ಹೀಗಾಗಿ ಇಂಗ್ಲೆಂಡ್ ಆಲ್ರೌಂಡರ್ ಆರ್ಸಿಬಿಗೆ ಸಿಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
6 / 8
ಬೆನ್ ಸ್ಟೋಕ್ಸ್: ಈ ಬಾರಿಯ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಸ್ಟೋಕ್ಸ್ ಸದ್ಯ ಹೇಳಿಕೊಳ್ಳುವಂತಹ ಫಾರ್ಮ್ನಲ್ಲಿಲ್ಲ. ಇದಾಗ್ಯೂ ಯಾವುದೇ ಸಂದರ್ಭದಲ್ಲೂ ಆಲ್ರೌಂಡರ್ ಆಗಿ ಮಿಂಚಬಲ್ಲ ಆಟಗಾರನಾಗಿ ಸ್ಟೋಕ್ಸ್ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಆರ್ಸಿಬಿ ಆಲ್ರೌಂಡರ್ ಸ್ಥಾನದಲ್ಲಿ ಸ್ಟೋಕ್ಸ್ ಅವರ ಖರೀದಿಗೆ ಮುಂದಾಗಬಹುದು.
7 / 8
ಜೇಸನ್ ಹೋಲ್ಡರ್: ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ ಅವರ ಖರೀದಿಗೂ ಆರ್ಸಿಬಿ ಆಸಕ್ತಿ ತೋರಿಸಬಹುದು. ಏಕೆಂದರೆ ಸ್ಯಾಮ್ ಕರನ್ ಹಾಗೂ ಸ್ಟೋಕ್ಸ್ ಕೈ ತಪ್ಪಿದರೆ ಮುಂದಿರುವ ಅತ್ಯುತ್ತಮ ಆಯ್ಕೆ ಜೇಸನ್ ಹೋಲ್ಡರ್. ಹೀಗಾಗಿ ವಿಂಡೀಸ್ ಆಲ್ರೌಂಡರ್ ಖರೀದಿಗೂ ಆರ್ಸಿಬಿ ಹೆಚ್ಚಿನ ಪೈಪೋಟಿ ನಡೆಸಬಹುದು.