IND vs BAN: ಮೊದಲ ಏಕದಿನ: ವಿರಾಟ್ ಕೊಹ್ಲಿ ಜೊತೆ ರಜತ್ ಪಟಿದಾರ್ ಭರ್ಜರಿ ಅಭ್ಯಾಸ: ಫೋಟೋ ನೋಡಿ

TV9kannada Web Team

TV9kannada Web Team | Edited By: Vinay Bhat

Updated on: Dec 04, 2022 | 10:15 AM

India vs Bangladesh: ಭಾರತ ಕ್ರಿಕೆಟ್ ತಂಡದ ಬಾಂಗ್ಲಾದೇಶ ಪ್ರವಾಸಕ್ಕೆ ಇಂದು ಚಾಲನೆ ಸಿಗಲಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ಆಯೋಜನೆ ಮಾಡಲಾಗಿದ್ದು ಬೆಳಗ್ಗೆ 11 ಗಂಟೆಗೆ ಟಾಸ್ ಹಾಗೂ 11:30ಕ್ಕೆ ಮ್ಯಾಚ್ ಪ್ರಾರಂಭವಾಗಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

Dec 04, 2022 | 10:15 AM
ಭಾರತ ಕ್ರಿಕೆಟ್ ತಂಡದ ಬಾಂಗ್ಲಾದೇಶ ಪ್ರವಾಸಕ್ಕೆ ಇಂದು ಚಾಲನೆ ಸಿಗಲಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ಆಯೋಜನೆ ಮಾಡಲಾಗಿದ್ದು ಬೆಳಗ್ಗೆ 11 ಗಂಟೆಗೆ ಟಾಸ್ ಹಾಗೂ 11:30ಕ್ಕೆ ಮ್ಯಾಚ್ ಪ್ರಾರಂಭವಾಗಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

1 / 9
ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರು ಯುವ ಆಟಗಾರರೊಂದಿಗೆ ಕೂಡಿ ಅಭ್ಯಾಸ ನಡೆಸಸುತ್ತಿರುವುದು ಕಂಡುಬಂತು. ರಜತ್ ಪಟಿದಾರ್ ಜೊತೆ ಕೊಹ್ಲಿ ಮೈದಾನದಲ್ಲಿ ಬೆವರು ಹರಿಸಿದರು.

2 / 9
ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡುವ ರಜತ್ ಪಟಿದಾರ್ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಡುವ ಸಾಧ್ಯತೆ ಇದೆ. ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ಇವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

3 / 9
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸೋತ ಬಳಿಕ ಟೀಮ್ ಇಂಡಿಯಾ 50 ಓವರ್​ಗಳ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡಲು ಇದು ಉತ್ತಮ ವೇದಿಕೆಯಾಗಿದೆ. ಅಲ್ಲದೆ ಮುಂದಿನ ವರ್ಷ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್​ಗೂ ತಂಡ ಕಟ್ಟಲು ಈ ಸರಣಿ ಸಹಕಾರಿ ಆಗಲಿದೆ.

4 / 9
ರೋಹಿತ್ ಶರ್ಮಾ (Rohit Sharma) ನಾಯಕನಾಗಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇವರ ಜೊತೆಗೆ ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ (Virat Kohli), ಕೆಎಲ್ ರಾಹುಲ್ ಕೂಡ ತಂಡ ಸೇರಿಕೊಂಡಿದ್ದಾರೆ.

5 / 9
ನಾಯಕ ರೋಹಿತ್ ಶರ್ಮಾ ಅವರಿಗೆ ಪ್ಲೇಯಿಂಗ್ ಇಲೆವೆನ್​ನದ್ದೇ ದೊಡ್ಡ ಚಿಂತೆ ಆಗಿದೆ. ಮುಖ್ಯವಾಗಿ ಓಪನರ್​ಗಳು ಯಾರು ಎಂಬ ಗೊಂದಲ ಉಂಟಾಗಿದೆ. ರೋಹಿತ್​ಗೆ ಜೋಡಿಯಾಗಿ ಕಣಕ್ಕಿಳಿಯಲು ಮೂರು ಬ್ಯಾಟರ್​ಗಳು ತಯಾರಾಗಿದ್ದಾರೆ. ಶಿಖರ್ ಧವನ್, ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಪೈಕಿ ಯಾರಿಗೆ ಸ್ಥಾನ ಎಂಬುದು ಕುತೂಹಲ ಕೆರಳಿಸಿದೆ.

6 / 9
ಮಧ್ಯಮ ಕ್ರಮಾಂಕದಲ್ಲಿ ಕೂಡ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರಾಹುಲ್ ತ್ರಿಪಾಠಿ, ರಜತ್ ಪಟಿದಾರ್ ಎಂಬ ಅನೇಕ ಆಯ್ಕೆಗಳಿವೆ. ವಾಷಿಂಗ್ಟನ್ ಸುಂದರ್, ಶಹ್ಬಾಜ್ ಅಹ್ಮದ್ ಹಾಗೂ ಅಕ್ಷರ್ ಪಟೇಲ್ ಆಲ್ರೌಂಡರ್​ಗಳಾಗಿದ್ದಾರೆ.

7 / 9
ಹವಾಮಾನ ವರದಿಯ ಪ್ರಕಾರ ಪಂದ್ಯದ ದಿನದಂದು ಬಿಸಿಲು ಇರಲಿದ್ದು ಅಭಿಮಾನಿಗಳು ಇಡೀ ಪಂದ್ಯವನ್ನು ನೋಡುವುದಕ್ಕೆ ಯಾವುದೇ ಅಡೆತಡೆ ಇಲ್ಲ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ. ಸುಮಾರು ಆರು ತಿಂಗಳ ಬಳಿಕ ಈ ಪಿಚ್​ನಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಉಭಯ ತಂಡಗಳಿಗೆ ಸುಲಭವಂತು ಕಂಡಿತಾ ಇಲ್ಲ

8 / 9
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸನ್ ಲೈವ್ ಅಪ್ಲಿಕೇಶನ್‌ನಲ್ಲಿ ನೋಡಬಹುದು.

9 / 9

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada