Ellyse Perry: ಎಲ್ಲಿಸ್ ಪೆರ್ರಿಗೆ ಒಡೆದ ಗ್ಲಾಸ್ ಗಿಫ್ಟ್ ನೀಡಿದ ಟಾಟಾ
TV9 Web | Updated By: ಝಾಹಿರ್ ಯೂಸುಫ್
Updated on:
Mar 16, 2024 | 12:02 PM
WPL 2024: ವುಮೆನ್ಸ್ ಪ್ರೀಮಿಯರ್ ಲೀಗ್ನ 2ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಫೈನಲ್ಗೆ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಮೆಗ್ ಲ್ಯಾನಿಂಗ್ ಮುಂದಾಳತ್ವದ ಡೆಲ್ಲಿ ಪಡೆ ಸ್ಮೃತಿ ಮಂಧಾನ ನಾಯಕತ್ವದ ಆರ್ಸಿಬಿ ಬಳಗವನ್ನು ಎದುರಿಸಲಿದೆ.
1 / 5
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿಗೆ (Ellyse Perry) ಟಾಟಾ ಕಂಪೆನಿಯು ವಿಶೇಷ ಗಿಫ್ಟ್ ನೀಡಿದೆ. ಅದು ಕೂಡ ಒಡೆದ ಗ್ಲಾಸ್ ಎಂಬುದೇ ಇಲ್ಲಿ ವಿಶೇಷ.
2 / 5
ಹೌದು, ಮಾರ್ಚ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಲಾಂಗ್ ಆನ್ನತ್ತ ಬಾರಿಸಿದ್ದ ಈ ಚೆಂಡು ನೇರವಾಗಿ ಹೋಗಿ ಬಿದ್ದದ್ದು ಬೌಂಡರಿ ಲೈನ್ ಹತ್ತಿರ ನಿಲ್ಲಿಸಲಾಗಿದ್ದ ಟಾಟಾ ಪಂಚ್ ಕಾರಿನ ಕಿಟಕಿಗೆ.
3 / 5
80 ಮೀಟರ್ನ ಸಿಕ್ಸರ್ಗೆ ಟಾಟಾ ಕಾರಿನ ವಿಂಡೋ ಗ್ಲಾಸ್ ಒಡೆದು ಹೋಗಿತ್ತು. ಇದೀಗ ಅದೇ ಗ್ಲಾಸ್ ಅನ್ನು ಫ್ರೇಮ್ ಹಾಕಿ ಎಲ್ಲಿಸ್ ಪೆರ್ರಿಗೆ ಟಾಟಾ ಕಂಪೆನಿ ಗಿಫ್ಟ್ ನೀಡಿದೆ. ಈ ಮೂಲಕ ಪೆರ್ರಿಯ ಸ್ಮರಣೀಯ ಇನಿಂಗ್ಸ್ ಅನ್ನು 'ಒಡೆದ' ಗಾಜಿನೊಂದಿಗೆ ಟಾಟಾ ಮತ್ತಷ್ಟು ಸ್ಮರಣೀಯವಾಗಿಸಿದೆ.
4 / 5
ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಎಲ್ಲಿಸ್ ಪೆರ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ್ದ ಪೆರ್ರಿ, ಎಲಿಮಿನೇಟರ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಆರ್ಸಿಬಿ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಚೊಚ್ಚಲ ಬಾರಿ ಫೈನಲ್ಗೇರುವಂತೆ ಮಾಡಿದ್ದಾರೆ.
5 / 5
ಭಾನುವಾರ (ಮಾ.17) ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಉಭಯ ತಂಡಗಳು ಚೊಚ್ಚಲ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದು, ಅಂತಿಮವಾಗಿ ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದೆ ಕಾದು ನೋಡಬೇಕಿದೆ.