- Kannada News Photo gallery Cricket photos Team India began their preparation for the New Zealand game with a fun fielding session
India vs New Zealand: ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಬೆವರಿಳಿಸುತ್ತಿರುವ ಮೆಂಟರ್ ಧೋನಿ
IND vs NZ, T20 World Cup: ಗೆಲ್ಲಲೇ ಬೇಕಾದ ಪಂದ್ಯ ಆಗಿರುವುದರಿಂದ ಟೀಮ್ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಮೈದಾನದಲ್ಲಿ ಮೆಂಟರ್ ಎಂ. ಎಸ್ ಧೋನಿ ಪ್ಲೇಯರ್ಸ್ಗೆ ಖಡಕ್ ಆಗಿ ಅಭ್ಯಾಸ ನಡೆಸುತ್ತಿದ್ದು, ಜೊತೆಗೂಡಿ ಬೆವರು ಹರಿಸುತ್ತಿದ್ದಾರೆ.
Updated on: Oct 28, 2021 | 9:13 AM

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲಿನ ಆಘಾತ ಎದುರಿಸಿರುವ ಟೀಮ್ ಇಂಡಿಯಾದ ಸೆಮಿಫೈನಲ್ ಪ್ರವೇಶದ ಹಾದಿಯು ಕಠಿಣವೆನಿಸಿದೆ. ಈಗ ಅಕ್ಟೋಬರ್ 31, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಗೆಲ್ಲಲೇ ಬೇಕಾದ ಪಂದ್ಯ ಆಗಿರುವುದರಿಂದ ಟೀಮ್ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಮೈದಾನದಲ್ಲಿ ಮೆಂಟರ್ ಎಂ. ಎಸ್ ಧೋನಿ ಪ್ಲೇಯರ್ಸ್ಗೆ ಖಡಕ್ ಆಗಿ ಅಭ್ಯಾಸ ನಡೆಸುತ್ತಿದ್ದು, ಜೊತೆಗೂಡಿ ಬೆವರು ಹರಿಸುತ್ತಿದ್ದಾರೆ.

ಭಾರತ ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ. ಇದೇ ಸ್ಟೇಡಿಯಂನಲ್ಲಿ ಕೊಹ್ಲಿ ಪಡೆ ಪಾಕ್ ವಿರುದ್ಧ ಸೋತಿರುವುದು. ಹೀಗಾಗಿ ಪಿಚ್ ಬಗ್ಗೆ, ಅಲ್ಲಿನ ವಾತಾವರಣದ ಬಗ್ಗೆ ಚೆನ್ನಾಗಿ ಅರಿತಿರುವ ಟೀಮ್ ಇಂಡಿಯಾ ಸದ್ಯದ ಬಿಡುವಿನ ಸಮಯದಲ್ಲಿ ಗೇಮ್ ಪ್ಲಾನ್ ರೂಪಿಸಬೇಕಿದೆ.

ಹಾರ್ದಿಕ್ ಪಾಂಡ್ಯ ಫಿಟ್ನೆಸ್ ವಿಚಾರವಾಗಿ ಪ್ರಮುಖ ಅಪ್ಡೇಟ್ ಲಭ್ಯವಾಗಿದೆ. ಟೀಮ್ ಇಂಡಿಯಾದ ಪ್ರಮುಖ ಆಲ್ರೌಂಡರ್ ಫಿಟ್ನೆಸ್ನಲ್ಲಿ ಪಾಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಹಾರ್ದಿಕ್ ಪಾಂಡ್ಯ ನೆಟ್ನಲ್ಲಿ ಬೌಲಿಂಗ್ ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಗೆದ್ದ ತಂಡವು ಸೆಮಿಫೈನಲ್ಗೆ ಪ್ರವೇಶಿಸುವ ಸಾಧ್ಯತೆಯು ಹೆಚ್ಚಿದೆ. ಒಟ್ಟಿನಲ್ಲಿ ಕಿವೀಸ್ ವಿರುದ್ಧದ ಪಂದ್ಯವು ಕ್ವಾರ್ಟರ್ಫೈನಲ್ ಮಹತ್ವವನ್ನು ಪಡೆದುಕೊಂಡಿದೆ. ಹಾಗಾಗಿ ಕೇನ್ ವಿಲಿಯಮ್ಸನ್ ಪಡೆಯನ್ನು ಮೆಟ್ಟಿ ನಿಲ್ಲಲು ವಿರಾಟ್ ಕೊಹ್ಲಿ ಬಳಗವು ತನ್ನ ಶ್ರೇಷ್ಠ ಪ್ರದರ್ಶನವನ್ನೇ ನೀಡಬೇಕಿದೆ.

ಸೂಪರ್-12 ಹಂತದ ಎರಡನೇ ಗುಂಪಿನಲ್ಲಿ ಭಾರತ ಸೇರಿದಂತೆ ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಗಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳಿವೆ. ತಾರತಮ್ಯ ಮಾಡಿದಾಗ ಬಲಿಷ್ಠ ಎನಿಸಿಕೊಂಡಿರುವ ಭಾರತ ಗೆಲುವು ದಾಖಲಿಸುವುದು ಬಹುತೇಕ ಖಚಿತವೆನಿಸಿದೆ.

ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ ಸೇಡಿನ ಪಂದ್ಯಕೂಡ ಆಗಿದ್ದು, ಐಸಿಸಿ 2019 ಏಕದಿನ ವಿಶ್ವಕಪ್ನ ಸೆಮಿ ಫೈನಲ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೇನ್ ವಿಲಿಯಮ್ಸನ್, ಟಿಮ್ ಸೌಥೀ ಮತ್ತು ಟ್ರೆಂಟ್ ಬೌಲ್ಟ್ ಸ್ಟಾರ್ ಆಟಗಾರರಾಗಿದ್ದಾರೆ.
