
ಇಂದು ಪ್ರಪಂಚದಾದ್ಯಂತ ಹೊಸ ವರ್ಷವನ್ನು ಆಚರಿಸಲಾಗುತ್ತಿದೆ. ಭಾರತೀಯ ಕ್ರಿಕೆಟಿಗರೂ ಈ ಸಂಭ್ರಮದಲ್ಲಿ ಮುಳುಗಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾ ಯಾವುದೇ ಸರಣಿಯನ್ನು ಆಡುತ್ತಿಲ್ಲ. ಹೀಗಾಗಿ ಎಲ್ಲಾ ಕ್ರಿಕೆಟಿಗರು ತಮ್ಮ ಕುಟುಂಬದೊಂದಿಗೆ ಮೋಜು ಮಸ್ತಿಯಲ್ಲಿ ತೊಡಿಗಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಡೀ ಕುಟುಂಬದೊಂದಿಗೆ ದುಬೈನಲ್ಲಿದ್ದಾರೆ. ಕೊಹ್ಲಿ ತಮ್ಮ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾ ಅವರೊಂದಿಗೆ ದುಬೈನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ವಿರಾಟ್ ಕೊಹ್ಲಿ ಹೊರತಾಗಿ ಮಹೇಂದ್ರ ಸಿಂಗ್ ಧೋನಿ ಸದ್ಯ ದುಬೈನಲ್ಲಿದ್ದಾರೆ. ಕ್ರಿಸ್ಮಸ್ ಹಬ್ಬವನ್ನೂ ಇಲ್ಲೇ ಆಚರಿಸಿದ್ದ ಧೋನಿ, ಹೊಸ ವರ್ಷವನ್ನು ಇಲ್ಲೆ ಬರಮಾಡಿಕೊಂಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಮುಗಿದ ತಕ್ಷಣ, ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಕೂಡ ತಮ್ಮ ಕುಟುಂಬದೊಂದಿಗೆ ವಿದೇಶಕ್ಕೆ ಹಾರಿದ್ದಾರೆ. ಹಿಮದ ರಾಶಿಯಲ್ಲಿ ಮಿಂದೇಳುತ್ತಿರುವ ಫೋಟೋವನ್ನು ಪೂಜಾರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಕೂಡ ತಮ್ಮ ಕುಟುಂಬದೊಂದಿಗೆ ಕಾಶ್ಮೀರದಲ್ಲಿ ಹೊಸ ವರ್ಷವನ್ನು ಆಚರಿಸಿಕೊಂಡಿದ್ದಾರೆ.

ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಸದ್ಯ ಲಾಸ್ ಏಂಜಲೀಸ್ನಲ್ಲಿದ್ದು, ತಮ್ಮ ಪತ್ನಿ ಮತ್ತು ಮಗ ಓರಿಯನ್ ಕೀಸ್ ಅವರೊಂದಿಗೆ ವಿದೇಶದಲ್ಲಿ ತಮ್ಮ ಹೊಸ ವರ್ಷವನ್ನು ಆಚರಿಸಿಕೊಂಡಿದ್ದಾರೆ.
Published On - 3:02 pm, Sun, 1 January 23