Team India: ಆಟಗಾರರಿಗೆ ಗಾಯದ ಸಮಸ್ಯೆ: ಏಕದಿನ ವಿಶ್ವಕಪ್​ಗೆ ಟೀಮ್ ಇಂಡಿಯಾಗೆ ಹಿನ್ನಡೆ

Edited By:

Updated on: Mar 28, 2023 | 10:38 PM

Team India: ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಅವರ ಪರಿಸ್ಥಿತಿ ಕೂಡ ಉತ್ತಮವಾಗಿಲ್ಲ. ಕಳೆದ ಕೆಲ ತಿಂಗಳುಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಸದ್ಯಕ್ಕಂತು ಕಂಬ್ಯಾಕ್ ಮಾಡುವುದಿಲ್ಲ ಎಂಬುದು ಕೂಡ ಖಚಿತವಾಗಿದೆ.

1 / 9
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ಬಲಿಷ್ಠ ಪಡೆಯನ್ನು ಸಜ್ಜುಗೊಳಿಸಲು ಪ್ಲ್ಯಾನ್ ರೂಪಿಸಿದ್ದ ಟೀಮ್ ಇಂಡಿಯಾಗೆ ಆರಂಭದಲ್ಲೇ ಹಿನ್ನಡೆಯುಂಟಾಗಿದೆ. ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಏಕದಿನ ವಿಶ್ವಕಪ್​ಗಾಗಿ 20 ಆಟಗಾರರನ್ನು ಆಯ್ಕೆ ಮಾಡಿ ಉತ್ತಮ ತಂಡ ಕಟ್ಟುವ ಸೂಚನೆಯನ್ನು ಬಿಸಿಸಿಐ ನೀಡಿತ್ತು.

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ಬಲಿಷ್ಠ ಪಡೆಯನ್ನು ಸಜ್ಜುಗೊಳಿಸಲು ಪ್ಲ್ಯಾನ್ ರೂಪಿಸಿದ್ದ ಟೀಮ್ ಇಂಡಿಯಾಗೆ ಆರಂಭದಲ್ಲೇ ಹಿನ್ನಡೆಯುಂಟಾಗಿದೆ. ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಏಕದಿನ ವಿಶ್ವಕಪ್​ಗಾಗಿ 20 ಆಟಗಾರರನ್ನು ಆಯ್ಕೆ ಮಾಡಿ ಉತ್ತಮ ತಂಡ ಕಟ್ಟುವ ಸೂಚನೆಯನ್ನು ಬಿಸಿಸಿಐ ನೀಡಿತ್ತು.

2 / 9

ಆದರೆ ಇದೀಗ ಸ್ಟಾರ್ ಆಟಗಾರರ ಗಾಯದ ಸಮಸ್ಯೆ, ಪ್ರಮುಖ ಆಟಗಾರರ ಕಳಪೆ ಪ್ರದರ್ಶನದಿಂದಾಗಿ ಹೊಸ ಚಿಂತೆ ಶುರುವಾಗಿದೆ. ಏಕೆಂದರೆ ಈಗಾಗಲೇ ಭಾರತದ ಆಟಗಾರರು ಫಿಟ್​ನೆಸ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ.

3 / 9

ಡಿಸೆಂಬರ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಿಂದಾಗಿ ರಿಷಬ್ ಪಂತ್‌ ಏಕದಿನ ವಿಶ್ವಕಪ್ ಆಡುವುದು ಅನುಮಾನ. ಪ್ರಸ್ತುತ ಮಾಹಿತಿ ಪ್ರಕಾರ, ಅವರು ಐದಾರು ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿಯಲಿದ್ದಾರೆ.

4 / 9

ಮತ್ತೊಂದೆಡೆ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಅವರ ಪರಿಸ್ಥಿತಿ ಕೂಡ ಉತ್ತಮವಾಗಿಲ್ಲ. ಕಳೆದ ಕೆಲ ತಿಂಗಳುಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಸದ್ಯಕ್ಕಂತು ಕಂಬ್ಯಾಕ್ ಮಾಡುವುದಿಲ್ಲ ಎಂಬುದು ಕೂಡ ಖಚಿತವಾಗಿದೆ.

5 / 9

ಜಸ್​ಪ್ರೀತ್ ಬುಮ್ರಾ ತಮ್ಮ ಬೆನ್ನು ನೋವಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶಸ್ತ್ರಚಿಕಿತ್ಸೆಯ ಮೊರೆ ಹೋಗಲಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಅವರು 6 ತಿಂಗಳುಗಳು ಕಾಲ ಮೈದಾನದಿಂದ ಹೊರಗುಳಿಯಲಿದ್ದಾರೆ. ಇದಾಗ್ಯೂ ಅವರು ಏಕದಿನ ವಿಶ್ವಕಪ್ ಆಡುವುದರ ಬಗ್ಗೆ ಖಚಿತತೆ ಇಲ್ಲ.

6 / 9

ಇತ್ತ ಬೆನ್ನುನೋವಿನ ಸಮಸ್ಯೆಯಿಂದ ಕಂಗೆಟ್ಟಿರುವ ಶ್ರೇಯಸ್ ಅಯ್ಯರ್ ಕೂಡ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆದರೆ ಅವರು ಏಕದಿನ ವಿಶ್ವಕಪ್‌ನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ಅವರು ಬೆನ್ನಿನ ಶಸ್ತ್ರಚಿಕಿತ್ಸೆಯನ್ನು ಮುಂದೂಡುವ ಚಿಂತನೆಯಲ್ಲಿದ್ದಾರೆ ಎಂದು ವರದಿಯಾಗಿದೆ.

7 / 9

ಅಂದರೆ ಏಕದಿನ ವಿಶ್ವಕಪ್ ಆಡಲು ತಮ್ಮ ನೋವಿನ ಸಮಸ್ಯೆಯ ಶಸ್ತ್ರಚಿಕಿತ್ಸೆಯನ್ನು ಮುಂದೂಡುವ ಬಗ್ಗೆ ವೈದ್ಯರ ಜೊತೆ ಚರ್ಚಿಸಿದ್ದಾರೆ. ಒಂದು ವೇಳೆ ಅವರು ಶಸ್ತ್ರಚಿಕಿತ್ಸೆ ಮಾಡಿಸದೇ, ಏಕದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಂಡ ಬಳಿಕ ಮತ್ತದೇ ಸಮಸ್ಯೆ ಎದುರಾದರೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

8 / 9

ಏಕೆಂದರೆ 2021 ರ ಟಿ20 ವಿಶ್ವಕಪ್​ನಲ್ಲಿ ಬೌಲಿಂಗ್ ಮಾಡಲು ಸಂಪೂರ್ಣವಾಗಿ ಫಿಟ್​ನೆಸ್ ಹೊಂದಿಲ್ಲದಿದ್ದರೂ ಹಾರ್ದಿಕ್ ಪಾಂಡ್ಯರನ್ನು ಆಲ್​ರೌಂಡರ್​ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ಅವರು ಸಂಪೂರ್ಣ ಬೌಲಿಂಗ್ ಮಾಡದ ಕಾರಣ ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಿತ್ತು. ಇದೇ ಕಾರಣದಿಂದಾಗಿ ಶ್ರೇಯಸ್ ಅಯ್ಯರ್ ಅವರ ನಿರ್ಧಾರ ಕೂಡ ಇಲ್ಲಿ ಚರ್ಚೆಗೆ ಕಾರಣವಾಗಬಹುದು.

9 / 9

ಇನ್ನು ಐಪಿಎಲ್ ಕೂಡ ಆರಂಭವಾಗುತ್ತಿದ್ದು, ಈ ಜಿದ್ದಾಜಿದ್ದಿನ ಟೂರ್ನಿಯಲ್ಲಿ ಪ್ರಮುಖ ಆಟಗಾರರು ಗಾಯಗೊಂಡರೆ, ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗುವುದರಲ್ಲಿ ಸಂದೇಹವೇ ಇಲ್ಲ.

Loading...
Unable to load recommendations.
Follow Us