Ajit Agarkar: ನಾಯಕ, ಭವಿಷ್ಯದ ತಂಡ, ಐಸಿಸಿ ಈವೆಂಟ್ಸ್; ಅಗರ್ಕರ್ ಮುಂದಿವೆ ಸಾಲು ಸಾಲು ಸವಾಲುಗಳು..!

|

Updated on: Jul 05, 2023 | 8:47 AM

Ajit Agarkar New Chief Selector: ಸದ್ಯ ಭಾರತ ತಂಡದ ಮುಖ್ಯ ಆಯ್ಕೆಗಾರರಾಗಿರುವ ಅಗರ್ಕರ್​ ಅವರ ಮುಂದೆ ಸಾಲು ಸಾಲು ಸವಾಲುಗಳೇ ಎದುರಾಗಿವೆ.

1 / 7
ಭಾರತ ಪುರುಷರ ಕ್ರಿಕೆಟ್ ತಂಡದ ನೂತನ ಮುಖ್ಯ ಆಯ್ಕೆಗಾರರಾಗಿ ಅಜಿತ್ ಅಗರ್ಕರ್ ಆಯ್ಕೆಯಾಗಿದ್ದಾರೆ. ಸಾಕಷ್ಟು ವರ್ಷ ಟೀಂ ಇಂಡಿಯಾದಲ್ಲಿ ಆಡಿದ್ದ ಅಜಿತ್ ನಿವೃತ್ತಿಯ ಬಳಿಕ ಈ ಹಿಂದೆ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಹಾಯಕ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

2 / 7
ಸದ್ಯ ಭಾರತ ತಂಡದ ಮುಖ್ಯ ಆಯ್ಕೆಗಾರರಾಗಿರುವ ಅಗರ್ಕರ್​ ಅವರ ಮುಂದೆ ಸಾಲು ಸಾಲು ಸವಾಲುಗಳೇ ಎದುರಾಗಿವೆ. ಭವಿಷ್ಯದ ತಂಡ ಕಟ್ಟುವುದರಿಂದ ಹಿಡಿದು, ತಂಡಕ್ಕೆ ನೂತನ ನಾಯಕ ಸೇರಿದಂತೆ ಐಸಿಸಿ ಈವೆಂಟ್​ಗಳಿಗೆ ಬಲಿಷ್ಠ ಟೀಂ ಇಂಡಿಯಾವನ್ನು ಆಯ್ಕೆ ಮಾಡುವ ಜವಬ್ದಾರಿ ಅಗರ್ಕರ್ ಮೇಲಿದೆ. ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಅಗರ್ಕರ್ ಮುಂದಿರುವ ಪ್ರಮುಖ ಸವಾಲುಗಳು ಯಾವುವು ಎಂಬುದನ್ನು ನೋಡುವುದಾದರೆ..

3 / 7
ಟೀಂ ಇಂಡಿಯಾದ ಮುಂದಿನ ನಾಯಕನ ಆಯ್ಕೆ: ಅಗರ್ಕರ್ ಮುಂದಿರುವ ಪ್ರಮುಖ ಸವಾಲೆಂದರೆ ಭಾರತ ತಂಡಕ್ಕೆ ನಾಯಕನನ್ನು ಆಯ್ಕೆ ಮಾಡುವುದು. ಪ್ರಸ್ತುತ ತಂಡದ ನಾಯಕತ್ವ ನಿಭಾಯಿಸುತ್ತಿರುವ ರೋಹಿತ್ ಶರ್ಮಾಗೆ ವಯಸ್ಸಾಗುತ್ತಿದೆ. ಅವರ ವಯಸ್ಸು ಕೂಡ ಅವರ ಫಿಟ್ನೆಸ್ ಮತ್ತು ಫಾರ್ಮ್ ಮೇಲೆ ಪರಿಣಾಮ ಬೀರುತ್ತಿದೆ.  ಸದ್ಯ ರೋಹಿತ್ ಏಕದಿನ ವಿಶ್ವಕಪ್​ವರೆಗೂ ತಂಡವನ್ನು ಮುನ್ನಡೆಸಲಿದ್ದಾರೆ. ಆ ಬಳಿಕ ಭಾರತ ತಂಡಕ್ಕೆ ಭವಿಷ್ಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವುದು ಅಗರ್ಕರ್ ಕೆಲಸವಾಗಿದೆ.

4 / 7
ಆಟಗಾರರ ಕೆಲಸದ ಹೊರೆ: ಉತ್ತಮ ತಂಡ ಸಿದ್ಧವಾಗಬೇಕೆಂದರೆ ಆಟಗಾರರ ಕೆಲಸದ ಹೊರೆಯನ್ನು ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ.  ಮುಂಬರುವ ದಿನಗಳಲ್ಲಿ ಭಾರತ ಹಲವು ದೊಡ್ಡ ಸರಣಿಗಳು ಮತ್ತು ಟೂರ್ನಿಗಳನ್ನು ಆಡಬೇಕಿದೆ.  ಇಂತಹ ಪರಿಸ್ಥಿತಿಯಲ್ಲಿ ಆಟಗಾರರ ಕೆಲಸದ ಹೊರೆಯನ್ನು ನಿರ್ವಹಿಸುವುದು ಭಾರತ ತಂಡದ ನೂತನ ಮುಖ್ಯ ಆಯ್ಕೆದಾರರ ಮುಂದೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.  ವಾಸ್ತವವಾಗಿ, ಈ ಕೆಲಸದ ಹೊರೆಯನ್ನು ಸಮರ್ಥವಾಗಿ ನಿರ್ವಹಿಸಿದರೆ ಮಾತ್ರ, ಬಲವಾದ ಮತ್ತು ಫಿಟ್ ಟೀಂ ಇಂಡಿಯಾವನ್ನು ಕಟ್ಟಬಹುದಾಗಿದೆ.

5 / 7
ಟಿ20 ತಂಡವನ್ನು ಸಿದ್ಧಪಡಿಸುವುದು: ಈ ವರ್ಷ ಏಕದಿನ ವಿಶ್ವಕಪ್ ಇದ್ದರೆ, ಮುಂದಿನ ವರ್ಷ ಅಂದರೆ 2024 ರಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ.  ಹೀಗಾಗಿ ಚುಟುಕು ಸಮರಕ್ಕೆ ಬಲಿಷ್ಠ ತಂಡವನ್ನು ತಯಾರಿಸುವ ಮತ್ತು ಆಯ್ಕೆ ಮಾಡುವ ಸವಾಲು ಅಜಿತ್ ಅಗರ್ಕರ್ ಅವರ ಮುಂದಿದೆ.

6 / 7
ಟೀಂ ಇಂಡಿಯಾದಲ್ಲಿ ಬದಲಾವಣೆಯ ಪರ್ವ: ಭಾರತ ತಂಡದಲ್ಲಿ ಹಲವು ಆಟಗಾರರು ತಮ್ಮ ವೃತ್ತಿ ಜೀವನದ ಕೊನೆಯ ಹಂತದಲ್ಲಿದ್ದಾರೆ.  ಇಂತಹ ಪರಿಸ್ಥಿತಿಯಲ್ಲಿ ಸದ್ಯಕ್ಕಲ್ಲವಾದರೂ, ಏಕದಿನ ವಿಶ್ವಕಪ್ ನಂತರ ಟೀಂ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸಲು ಪ್ರಾರಂಭವಾಗಬಹುದು.  ಅಂದರೆ, ಹಿರಿಯ ಆಟಗಾರರನ್ನು ಬದಿಗೊತ್ತಿ, ಅವರ ಸ್ಥಾನದಲ್ಲಿ ಯುವ ಆಟಗಾರರಿಗೆ ಆ ಜವಾಬ್ದಾರಿಯನ್ನು ನೀಡಬೇಕಾಗುತ್ತದೆ. ಹೀಗಾಗಿ ಯುವ ಆಟಗಾರರೊಂದಿಗೆ ಭಾರತೀಯ ಕ್ರಿಕೆಟ್ ಅನ್ನು ಮುಂದೆ ಕೊಂಡೊಯ್ಯುವ ಜವಬ್ದಾರಿ ಅಗರ್ಕರ್ ಮೇಲಿದೆ.

7 / 7
ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್​ಗೆ ಬಲಿಷ್ಠ ತಂಡ: ಮುಖ್ಯ ಆಯ್ಕೆಗಾರರಾಗಿರುವ ಅಜಿತ್ ಅಗರ್ಕರ್ ಅವರ ಮುಂದಿರುವ ದೊಡ್ಡ ಸವಾಲೆಂದರೆ, ಎರಡು ಪ್ರಮುಖ ಟೂರ್ನಿಗಳಿಗೆ ತಂಡವನ್ನು ಆಯ್ಕೆ ಮಾಡುವುದು.  ಒಂದು ಏಷ್ಯಾಕಪ್ ಮತ್ತು ಇನ್ನೊಂದು ಏಕದಿನ ವಿಶ್ವಕಪ್.  ಅವರ ಆಯ್ಕೆಯಿಂದ ಮಾತ್ರ ಈ ಎರಡೂ ಟೂರ್ನಿಗಳಲ್ಲಿ ಭಾರತದ ಭವಿಷ್ಯ ನಿರ್ಧಾರವಾಗಲಿದೆ.

Published On - 8:45 am, Wed, 5 July 23