Updated on:Jul 05, 2023 | 5:02 PM
ಟೆಸ್ಟ್ ಕ್ರಿಕೆಟ್ನ ಬೆಸ್ಟ್ ಆಟಗಾರ ಯಾರೆಂದು ಕೇಳಿದರೆ ಹಲವು ಉತ್ತರಗಳು ಬರಬಹುದು. ಈ ಉತ್ತರಗಳಲ್ಲಿ ಕ್ರಿಕೆಟ್ ದಂತಕಥೆ ಸರ್. ಡಾನ್ ಬ್ರಾಡ್ಮ್ಯಾನ್ ಹೆಸರಂತು ಕಾಣ ಸಿಗಲಿದೆ. ಏಕೆಂದರೆ ಆಸ್ಟ್ರೇಲಿಯಾ ಪರ 52 ಟೆಸ್ಟ್ ಪಂದ್ಯಗಳನ್ನಾಡಿದ್ದ ಬ್ರಾಡ್ಮ್ಯಾನ್ 12 ದ್ವಿಶತಕ, 29 ಶತಕ ಹಾಗೂ 13 ಅರ್ಧಶತಗಳೊಂದಿಗೆ 6996 ರನ್ ಕಲೆಹಾಕಿದ್ದರು. ಹೀಗಾಗಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಬ್ರಾಡ್ಮ್ಯಾನ್ ಹೆಸರು ಮುಂಚೂಣಿಯಲ್ಲಿದೆ.
ಇನ್ನು ಪ್ರಸ್ತುತ ಬೆಸ್ಟ್ ಟೆಸ್ಟ್ ಕ್ರಿಕೆಟರ್ ಯಾರೆಂದು ಕೇಳಿದರೆ ಉತ್ತರಿಸುವುದು ತುಸು ಕಷ್ಟ. ಇದಾಗ್ಯೂ ಈ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್.
ಈ ಬಗ್ಗೆ ಸಂವಾದವೊಂದರಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ಪ್ರಸ್ತುತ ಟೆಸ್ಟ್ ಕ್ರಿಕೆಟ್ನ 5 ಅತ್ಯುತ್ತಮ ಆಟಗಾರರನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಅಶ್ವಿನ್ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಭಜ್ಜಿ ಹೆಸರಿಸಿದ ಟಾಪ್-5 ಟೆಸ್ಟ್ ಕ್ರಿಕೆಟಿಗರ ಪಟ್ಟಿ ಈ ಕೆಳಗಿನಂತಿದೆ...
1- ನಾಥನ್ ಲಿಯಾನ್ (ಆಸ್ಟ್ರೇಲಿಯಾ)
2- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
3- ರಿಷಭ್ ಪಂತ್ (ಭಾರತ)
4- ರವೀಂದ್ರ ಜಡೇಜಾ (ಭಾರತ)
5- ಬೆನ್ ಸ್ಟೋಕ್ಸ್ (ಭಾರತ)
Published On - 5:00 pm, Wed, 5 July 23