Team India New Jersey: ಹೊಸ ಜೆರ್ಸಿಯಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು..!
TV9 Web | Updated By: ಝಾಹಿರ್ ಯೂಸುಫ್
Updated on:
Jun 03, 2023 | 6:37 PM
Team India New Jersey: ಎಂಪಿಎಲ್ ಕಂಪೆನಿಯು ಭಾರತ ತಂಡ ಕಿಟ್ ಪ್ರಾಯೋಜಕರಾಗಿದ್ದರು. ಆದರೆ ಇತ್ತೀಚೆಗೆ ಎಂಪಿಎಲ್ ಪ್ರಾಯೋಜಕತ್ವ ಮುಕ್ತಾಯಗೊಂಡ ಹಿನ್ನಲೆ ಕಿಲ್ಲರ್ ಕಂಪೆನಿಗೆ ತಾತ್ಕಾಲಿಕ ಪ್ರಾಯೋಜಕತ್ವ ನೀಡಲಾಗಿತ್ತು.
1 / 11
Team India New Jersey: ಟೀಮ್ ಇಂಡಿಯಾದ ನೂತನ ಜೆರ್ಸಿ ಬಿಡುಗಡೆಯಾಗಿದೆ. ಅಡಿಡಾಸ್ ಕಂಪೆನಿಯ ಪ್ರಾಯೋಜಕತ್ವದಲ್ಲಿ ಮೂಡಿ ಬಂದಿರುವ ಹೊಸ ಜೆರ್ಸಿಯಲ್ಲಿ ಭಾರತೀಯ ಆಟಗಾರರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
2 / 11
ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಈ ಫೋಟೋಶೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
3 / 11
ಇನ್ನು ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಸಹ ಹೊಸ ಜೆರ್ಸಿಯಲ್ಲಿ ಮಿಂಚಿದ್ದಾರೆ.
4 / 11
ಅದರಂತೆ ಇನ್ಮುಂದೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಜೆರ್ಸಿ ಮೇಲೆ ನೀಲಿ ಬಣ್ಣದಲ್ಲಿ ಇಂಡಿಯಾ ಎಂಬ ಬರಹ ಕಾಣಿಸಿಕೊಳ್ಳಲಿದೆ. ಅಲ್ಲದೆ ಭುಜ ಭಾಗದಲ್ಲಿ ಅಡಿಡಾಸ್ ಕಂಪೆನಿಯ ಲೋಗೋವನ್ನು ಪ್ರತಿನಿಧಿಸುವ ಪಟ್ಟಿ ಕಂಡು ಬರಲಿದೆ.
5 / 11
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿತ್ ಔಟ್ ಕಾಲರ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಈ ಜೆರ್ಸಿಯನ್ನು ಕಡು ನೀಲಿ ಬಣ್ಣದಲ್ಲಿ ವಿನ್ಯಾಸಗೊಳಿಸಿರುವುದು ವಿಶೇಷ.
6 / 11
ಇನ್ನು ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವು ತಿಳಿ ನೀಲಿ ಜೆರ್ಸಿಯನ್ನು ಧರಿಸಲಿದೆ. ಈ ಜೆರ್ಸಿಯ ಭುಜ ಭಾಗದಲ್ಲಿ ಅಡಿಡಾಸ್ ಕಂಪೆನಿಯ ಲೋಗೋವನ್ನು ಪ್ರತಿನಿಧಿಸುವ ಬಿಳಿ ಪಟ್ಟಿಗಳನ್ನು ನೀಡಲಾಗಿದೆ.
7 / 11
ಇದಕ್ಕೂ ಮುನ್ನ ಎಂಪಿಎಲ್ ಕಂಪೆನಿಯು ಭಾರತ ತಂಡದ ಕಿಟ್ ಪ್ರಾಯೋಜಕರಾಗಿದ್ದರು. ಆದರೆ ಇತ್ತೀಚೆಗೆ ಎಂಪಿಎಲ್ ಪ್ರಾಯೋಜಕತ್ವ ಮುಕ್ತಾಯಗೊಂಡ ಹಿನ್ನಲೆ ಕಿಲ್ಲರ್ ಕಂಪೆನಿಗೆ ತಾತ್ಕಾಲಿಕ ಪ್ರಾಯೋಜಕತ್ವ ವಹಿಸಿಕೊಂಡಿತ್ತು.
8 / 11
ಇದೀಗ ಜೂನ್ 1 ರಿಂದ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರಾಗಿ ಅಡಿಡಾಸ್ ಕಂಪೆನಿ ಹೊಸ ಹೆಜ್ಜೆಯನ್ನಿಟ್ಟಿದೆ.
9 / 11
ಅದರ ಮೊದಲ ಭಾಗವಾಗಿ ಇದೀಗ ಮೂರು ಮಾದರಿಯ ಕ್ರಿಕೆಟ್ಗೆ ವಿಭಿನ್ನ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಇದಾಗ್ಯೂ ಏಕದಿನ ವಿಶ್ವಕಪ್ಗೆ ಭಾರತ ಏಕದಿನ ತಂಡದ ಜೆರ್ಸಿ ಬದಲಾಗಲಿದೆ.
10 / 11
ಸದ್ಯ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಓವಲ್ ಮೈದಾನದಲ್ಲಿ ಬುಧವಾರದಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲಿದೆ. ಹೀಗಾಗಿ 2013 ರ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ಟೀಮ್ ಇಂಡಿಯಾ ಮುಂದಿದೆ.
11 / 11
ಹೊಸ ಜೆರ್ಸಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
Published On - 6:29 pm, Sat, 3 June 23