ಭಾರತ ಕ್ರಿಕೆಟ್ ತಂಡದ ಆಟಗಾರರು ಟಿ20 ಯಿಂದ ಏಕದಿನ ಗುಂಗಿಗೆ ಮರಳುತ್ತಿದ್ದಾರೆ. ಮುಂದಿನ ವರ್ಷ 2023 ರಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇಲ್ಲಿಂದಲೇ ಯೋಜನೆ ರೂಪಿಸಬೇಕಿದೆ. ಇದರ ಮೊದಲ ಭಾಗವಾಗಿ ಟೀಮ್ ಇಂಡಿಯಾ ಬಾಂಗ್ಲಾದೇಶ ನಾಡಿಗೆ ಕಾಲಿಟ್ಟಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಈ ಸರಣಿಗಾಗಿ ಟೀಮ್ ಇಂಡಿಯಾ ಆಟಗಾರರು ಗುರುವಾರ ಢಾಕಾ ತಲುಪಪಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಭಾರತ ತಂಡದ ಇತರೆ ಆಟಗಾರರನ್ನು ಢಾಕಾದಲ್ಲಿ ಮಕ್ಕಳು ಹೂ ನೀಡುವ ಮೂಲಕ ಸ್ವಾಗತಿಸಿದರು. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶಿಖರ್ ಧವನ್, ವಾಷಿಂಗ್ಟನ್ ಸುಂದರ್ ಮತ್ತು ಇತರರು ಇಂದು ತಂಡವನ್ನು ಸೇರಿಕೊಳ್ಳಲಿದ್ದಾರೆ.
ಟೀಮ್ ಇಂಡಿಯಾ ಆಟಗಾರರು ಇಂದು ಢಾಕಾದಲ್ಲಿ ಮೊದಲ ಏಕದಿನ ಪಂದ್ಯಕ್ಕಾಗಿ ಅಭ್ಯಾಸ ಶುರು ಮಾಡಲಿದ್ದಾರೆ. ನವೆಂಬರ್ 4 ಭಾನುವಾರದಂದು ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ.
ಬಾಂಗ್ಲಾದೇಶ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಡಿಸೆಂಬರ್ 4 ರಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಡಿ. 7 ರಂದು ದ್ವಿತೀಯ ಏಕದಿನ ಮತ್ತು ತೃತೀಯ ಪಂದ್ಯ ಡಿಸೆಂಬರ್ 10ಕ್ಕೆ ಆಯೋಜಿಸಲಾಗಿದೆ.
ಮೂರೂ ಏಕದಿನ ಪಂದ್ಯ ಢಾಕಾದ ಬಾಂಗ್ಲಾದೇಶ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಬಳಿಕ ಚಿತ್ತಗಾಂಗ್ನಲ್ಲಿ ಜರುಗಲಿರುವ ಮೊದಲ ಟೆಸ್ಟ್ ಡಿಸೆಂಬರ್ 14-18ರ ವರೆಗೆ ಇರಲಿದೆ. ನಂತರ ಡಿಸೆಂಬರ್ 22-26 ಎರಡನೇ ಟೆಸ್ಟ್ ಇದ್ದು ಢಾಕಾದಲ್ಲಿ ಆಯೋಜಿಸಲಾಗಿದೆ.
ಇತ್ತ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ತಂಡಕ್ಕೆ ಆಘಾತ ಉಂಟಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ತಸ್ಕಿನ್ ಅಹ್ಮದ್ ಇಂಜುರಿಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಬೆನ್ನುನೋವಿನ ಕಾರಣದಿಂದಾಗಿ ತಾಸ್ಕಿನ್ ಹೊರಬಿದ್ದಿದ್ದಾಆರೆ. ಭಾರತ ವಿರುದ್ಧ ಅದ್ಭುತ ದಾಖಲೆ ಹೊಂದಿರುವ ತಸ್ಕಿನ್ ತಂಡದಿಂದ ಹೊರಗುಳಿದಿರುವುದು ಬಾಂಗ್ಲಾ ತಂಡಕ್ಕೆ ಹಿನ್ನಡೆಯುಂಟು ಮಾಡಿದೆ.
ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್ (ನಾಯಕ), ಲಿಟನ್ ದಾಸ್, ಅನಾಮುಲ್ ಹಕ್ ಬಿಜೋಯ್, ಶಕಿಬ್ ಅಲ್ ಹಸನ್, ಮುಷ್ಫೀಕುರ್ ರಹೀಮ್, ಅಫೀಫ್ ಹುಸೇನ್, ಯಾಸಿರ್ ಅಲಿ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್, ಎಬಾಡೋತ್ ಹುಸೇನ್, ನಸ್ಮದ್, ನಸ್ಮದ್, ನಸ್ಮದ್ ಶಾಂತೋ, ನೂರುಲ್ ಹಸನ್ ಸೋಹನ್.v
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶಹ್ಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್.
Published On - 8:05 am, Fri, 2 December 22