8-4, 4-3: ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಕಠಿಣ ಎದುರಾಳಿ ಯಾರು? ಇಲ್ಲಿದೆ ಮಾಹಿತಿ
TV9 Web | Updated By: ಝಾಹಿರ್ ಯೂಸುಫ್
Updated on:
Oct 02, 2023 | 4:30 PM
ICC World Cup 2023: ಈ ಬಾರಿಯ ವಿಶ್ವಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿರುವುದರಿಂದ ಪ್ರತಿ ತಂಡಗಳು ಲೀಗ್ ಹಂತದಲ್ಲಿ 9 ಪಂದ್ಯಗಳನ್ನಾಡಲಿದೆ. ಅಂದರೆ ಎಲ್ಲಾ ತಂಡಗಳ ವಿರುದ್ಧ ಒಂದೊಂದು ಪಂದ್ಯಗಳನ್ನಾಡಬೇಕಾಗುತ್ತದೆ. ಹೀಗಾಗಿಯೇ ಎಲ್ಲಾ ಬಲಿಷ್ಠ ತಂಡಗಳು ಟೀಮ್ ಇಂಡಿಯಾದ ಪ್ರಮುಖ ಎದುರಾಳಿ ಎನ್ನಬಹುದು.
1 / 12
ಏಕದಿನ ವಿಶ್ವಕಪ್ಗೆ ಕೌಂಟ್ ಡೌನ್ ಶುರುವಾಗಿದೆ. ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಕ್ರಿಕೆಟ್ ಮಹಾ ಸಮರದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
2 / 12
ಈ ಬಾರಿಯ ವಿಶ್ವಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿರುವುದರಿಂದ ಪ್ರತಿ ತಂಡಗಳು ಲೀಗ್ ಹಂತದಲ್ಲಿ 9 ಪಂದ್ಯಗಳನ್ನಾಡಲಿದೆ. ಅಂದರೆ ಎಲ್ಲಾ ತಂಡಗಳ ವಿರುದ್ಧ ಒಂದೊಂದು ಪಂದ್ಯಗಳನ್ನಾಡಬೇಕಾಗುತ್ತದೆ. ಹೀಗಾಗಿಯೇ ಎಲ್ಲಾ ಬಲಿಷ್ಠ ತಂಡಗಳು ಟೀಮ್ ಇಂಡಿಯಾದ ಪ್ರಮುಖ ಎದುರಾಳಿ ಎನ್ನಬಹುದು.
3 / 12
ಈ 9 ಟೀಮ್ಗಳಲ್ಲಿ ಕೆಲ ತಂಡಗಳಿಂದ ಟೀಮ್ ಇಂಡಿಯಾಗೆ ಕಠಿಣ ಸವಾಲು ಎದುರಾಗುವುದು ಖಚಿತ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು. ಹಾಗಿದ್ರೆ ವಿಶ್ವಕಪ್ನಲ್ಲಿನ ಭಾರತದ ಪ್ರಮುಖ ಎದುರಾಳಿಗಳು ಯಾರು ಎಂದು ನೋಡೋಣ...
4 / 12
1- ಆಸ್ಟ್ರೇಲಿಯಾ: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಈ ಬಾರಿಯ ವಿಶ್ವಕಪ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷ. ಅಂದರೆ ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ಕಠಿಣ ಎದುರಾಳಿಗಳಾಗಿ ಆಸ್ಟ್ರೇಲಿಯಾ ತಂಡವೇ ಗುರುತಿಸಿಕೊಂಡಿದೆ. ಏಕೆಂದರೆ ವಿಶ್ವಕಪ್ ಅಂಗಳದಲ್ಲಿ ಉಭಯ ತಂಡಗಳು 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡ ಗೆದ್ದಿರುವುದು ಕೇವಲ 4 ಬಾರಿ ಮಾತ್ರ. ಅಂದರೆ 8 ಪಂದ್ಯಗಳಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ.
5 / 12
2- ಇಂಗ್ಲೆಂಡ್: ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಒಟ್ಟು 8 ವಿಶ್ವಕಪ್ ಪಂದ್ಯಗಳನ್ನಾಡಿದೆ. ಈ ವೇಳೆ ಆಂಗ್ಲರು 4 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಭಾರತೀಯರು 3 ಬಾರಿ ಗೆದ್ದಿದ್ದಾರೆ. ಇನ್ನು ಈ ಪಂದ್ಯ ಟೈನಲ್ಲಿ ಅಂತ್ಯ ಕಂಡಿತ್ತು. ಹಾಗೆಯೇ ಕಳೆದ ಬಾರಿಯ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಟೀಮ್ ಇಂಡಿಯಾಗೆ ಸೋಲುಣಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಈ ಬಾರಿ ಕೂಡ ಆಂಗ್ಲರ ಪಡೆಯಿಂದ ಕಠಿಣ ಪೈಪೋಟಿಯನ್ನು ಎದುರಿಸಬಹುದು.
6 / 12
3- ನ್ಯೂಝಿಲೆಂಡ್: 2019 ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತಕ್ಕೆ ಸೋಲುಣಿಸಿ ನ್ಯೂಝಿಲೆಂಡ್ ಫೈನಲ್ಗೆ ಪ್ರವೇಶಿಸಿತ್ತು. ಅಲ್ಲದೆ ವಿಶ್ವಕಪ್ ಅಂಗಳದಲ್ಲಿ ಕಿವೀಸ್ ಪಡೆ ಮೇಲುಗೈ ಸಾಧಿಸುತ್ತಾ ಬಂದಿದೆ. ಏಕೆಂದರೆ ವಿಶ್ವಕಪ್ನಲ್ಲಿ ಉಭಯ ತಂಡಗಳು ಒಟ್ಟು 9 ಬಾರಿ ಮುಖಾಮುಖಿಯಾಗಿದ್ದು, ಈ ವೇಳೆ ನ್ಯೂಝಿಲೆಂಡ್ 5 ಬಾರಿ ಗೆಲುವು ದಾಖಲಿಸಿದೆ. ಇನ್ನು ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 3 ಬಾರಿ ಮಾತ್ರ. ಒಂದು ಪಂದ್ಯವು ರದ್ದಾಗಿತ್ತು. ಹಾಗಾಗಿ ಕಿವೀಸ್ ಬಳಗವನ್ನು ಕೂಡ ಟೀಮ್ ಇಂಡಿಯಾ ನಿರ್ಲಕ್ಷಿಸುವಂತಿಲ್ಲ.
7 / 12
4- ಸೌತ್ ಆಫ್ರಿಕಾ: ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧ 5 ವಿಶ್ವಕಪ್ ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ 2 ಪಂದ್ಯಗಳನ್ನು ಗೆದ್ದರೆ, ಸೌತ್ ಆಫ್ರಿಕಾ 3 ಮ್ಯಾಚ್ಗಳಲ್ಲಿ ಜಯ ಸಾಧಿಸಿತ್ತು. ಹೀಗಾಗಿ ಈ ಬಾರಿ ಕೂಡ ಹರಿಣರ ಪಡೆಯಿಂದ ಕಠಿಣ ಪೈಪೋಟಿ ಎದುರಾಗಬಹುದು.
8 / 12
5- ಶ್ರೀಲಂಕಾ: ಏಕದಿನ ವಿಶ್ವಕಪ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು 9 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಲಂಕಾ ಪಡೆ 4 ರಲ್ಲಿ ಜಯ ಸಾಧಿಸಿದರೆ, ಟೀಮ್ ಇಂಡಿಯಾ 4 ರಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಒಂದು ಪಂದ್ಯ ರದ್ದಾಗಿತ್ತು.
9 / 12
6- ಬಾಂಗ್ಲಾದೇಶ್: ಟೀಮ್ ಇಂಡಿಯಾ ಬಾಂಗ್ಲಾದೇಶ್ ತಂಡವನ್ನು ಏಕದಿನ ವಿಶ್ವಕಪ್ನಲ್ಲಿ 4 ಬಾರಿ ಎದುರಿಸಿದೆ. ಈ ವೇಳೆ 3 ಬಾರಿ ಭಾರತ ಗೆದ್ದರೆ, ಒಮ್ಮೆ ಟೀಮ್ ಇಂಡಿಯಾಗೆ ಸೋಲುಣಿಸುವಲ್ಲಿ ಬಾಂಗ್ಲಾ ಪಡೆ ಯಶಸ್ವಿಯಾಗಿತ್ತು.
10 / 12
7- ಅಫ್ಘಾನಿಸ್ತಾನ್: ಏಕದಿನ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ತಂಡ ಭಾರತದ ವಿರುದ್ಧ ಏಕೈಕ ಪಂದ್ಯವಾಡಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ.
11 / 12
8- ನೆದರ್ಲೆಂಡ್ಸ್: ಭಾರತ ತಂಡವು ಏಕದಿನ ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ 2 ಪಂದ್ಯಗಳನ್ನಾಡಿದ್ದು, ಈ ಎರಡೂ ಮ್ಯಾಚ್ಗಳಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ.
12 / 12
9- ಪಾಕಿಸ್ತಾನ್: ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿರುವುದು ಪಾಕಿಸ್ತಾನ್ ವಿರುದ್ಧ ಮಾತ್ರ. ಅಂದರೆ ಬಲಿಷ್ಠ ತಂಡಗಳಲ್ಲಿ ಗುರುತಿಸಿಕೊಂಡಿರುವ ಪಾಕ್ ವಿರುದ್ಧ ಭಾರತ ಇದುವರೆಗೆ 7 ವಿಶ್ವಕಪ್ ಪಂದ್ಯಗಳನ್ನಾಡಿದೆ. ಈ ಎಲ್ಲಾ ಪಂದ್ಯಗಳಲ್ಲೂ ಪಾಕಿಸ್ತಾನವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ. ಹೀಗಾಗಿ ಈ ಬಾರಿ ಕೂಡ ಬಾಬರ್ ಪಡೆ ವಿರುದ್ಧ ಭಾರತ ಗೆಲುವನ್ನು ನಿರೀಕ್ಷಿಸಬಹುದು.