ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾದ 36 ಆಟಗಾರರ ಪಟ್ಟಿ ರೆಡಿ
Champions Trophy 2025: ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಶುರುವಾಗಲಿದ್ದು, ಮಾರ್ಚ್ 9 ರವರೆಗೆ ನಡೆಯಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿದೆ ನಡೆಯಲಿದೆ. ಅದರಂತೆ ಎಲ್ಲಾ ಪಂದ್ಯಗಳು ಪಾಕ್ನಲ್ಲಿ ನಡೆದರೆ, ಟೀಮ್ ಇಂಡಿಯಾದ ಮ್ಯಾಚ್ಗಳು ದುಬೈನಲ್ಲಿ ಜರುಗಲಿದೆ. ಈ ಪಂದ್ಯಾವಳಿಗಾಗಿ ಇದೀಗ ಬಿಸಿಸಿಐ ಟೀಮ್ ಇಂಢಿಯಾ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ.
1 / 7
ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯ ಸಿದ್ಧತೆಗಳು ಶುರುವಾಗಿದೆ. ಫೆಬ್ರವರಿ 19 ರಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ ಭಾನುವಾರದೊಳಗೆ (ಜ.12) ಎಲ್ಲಾ ತಂಡಗಳನ್ನು ಘೋಷಿಸಬೇಕೆಂದು ಐಸಿಸಿ ಗಡುವು ವಿಧಿಸಿದೆ. ಈ ಗಡುವಿನ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ 36 ಆಟಗಾರರನ್ನು ಒಳಗೊಂಡಿರುವ ಸಂಭಾವ್ಯ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಟಗಾರರ ಸಂಪೂರ್ಣ ಮಾಹಿತಿ ಇಲ್ಲಿದೆ...
2 / 7
ಆರಂಭಿಕರು: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ. ಈ ಐವರು ಆರಂಭಿಕರ ಪಟ್ಟಿಯಿಂದ ಮೂವರು ಓಪನರ್ಗಳನ್ನು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡುವ ಸಾಧ್ಯತೆಯಿದೆ.
3 / 7
ಮಧ್ಯಮ ಕ್ರಮಾಂಕ ಬ್ಯಾಟರ್ಗಳು: ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರಿಯಾನ್ ಪರಾಗ್, ರಜತ್ ಪಾಟಿದಾರ್, ತಿಲಕ್ ವರ್ಮಾ, ಸಾಯಿ ಸುದರ್ಶನ್, ರಿಂಕು ಸಿಂಗ್.
4 / 7
ಆಲ್ರೌಂಡರ್ಗಳು: ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಿವಂ ದುಬೆ.
5 / 7
ಸ್ಪಿನ್ನರ್ಗಳು: ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಪೂರ್ಣ ಪ್ರಮಾಣದ ಸ್ಪಿನ್ನರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
6 / 7
ವೇಗದ ಬೌಲರ್ಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ.
7 / 7
ಈ 36 ಆಟಗಾರರ ಪಟ್ಟಿಯಿಂದ ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ 21 ಆಟಗಾರರು ಅವಕಾಶ ವಂಚಿತರಾಗುವುದು ಖಚಿತ. ಇದಾಗ್ಯೂ ಕೆಲ ಆಟಗಾರರನ್ನು ಮೀಸಲು ಆಟಗಾರರ ಪಟ್ಟಿಗೆ ಆಯ್ಕೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.