Test Cricket: ಸಂಡೆ ಸೆಂಚುರೀಸ್: ಒಂದೇ ದಿನ 4 ಶತಕಗಳು
TV9 Web | Updated By: ಝಾಹಿರ್ ಯೂಸುಫ್
Updated on:
Feb 05, 2024 | 8:30 AM
Test Cricket: ಭಾನುವಾರ ನಡೆದ 3 ಟೆಸ್ಟ್ ಪಂದ್ಯಗಳಲ್ಲಿ ನಾಲ್ವರು ಆಟಗಾರರು ಶತಕ ಬಾರಿಸಿ ಮಿಂಚಿದ್ದಾರೆ. ಈ ಶತಕಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಸಿಡಿಸಿದ ಸೆಂಚುರಿ ಕೂಡ ಇದೆ. ಹಾಗಿದ್ರೆ ಸೂಪರ್ ಸಂಡೆಯಂದು ಶತಕ ಬಾರಿಸಿರುವ ಉಳಿದ ಮೂವರು ಬ್ಯಾಟರ್ಗಳು ಯಾರೆಲ್ಲಾ ಎಂಬುದರ ಸಂಪೂರ್ಣ ಈ ಕೆಳಗೆ ನೀಡಲಾಗಿದೆ.
1 / 6
ಫೆಬ್ರವರಿ 4, 2024 ರಂದು ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕು ಶತಕಗಳು ಮೂಡಿಬಂದಿವೆ. ಅದು ಕೂಡ ಮೂರು ಟೆಸ್ಟ್ ಪಂದ್ಯಗಳಲ್ಲಿ ಎಂಬುದು ವಿಶೇಷ. ಅಂದರೆ ಇತ್ತ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯವಾಡುತ್ತಿದ್ದರೆ, ಅತ್ತ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ಟೆಸ್ಟ್ ಆಡುತ್ತಿದೆ.
2 / 6
ಹಾಗೆಯೇ ಅಫ್ಘಾನಿಸ್ತಾನ್ ಮತ್ತು ಶ್ರೀಲಂಕಾ ನಡುವೆ ಕೂಡ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಮೂರು ಪಂದ್ಯಗಳಿಂದ ಸೂಪರ್ ಸಂಡೆಯಂದೇ ಒಟ್ಟು 4 ಶತಕಗಳು ಮೂಡಿಬಂದಿವೆ. ಆ ಶತಕಗಳನ್ನು ಬಾರಿಸಿದ ಬ್ಯಾಟರ್ಗಳು ಯಾರೆಲ್ಲಾ ಎಂಬುದರ ಮಾಹಿತಿ ಇಲ್ಲಿದೆ...
3 / 6
1- ಇಬ್ರಾಹಿಂ ಝದ್ರಾನ್: ಕೊಲಂಬೊದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡದ ಯುವ ಬ್ಯಾಟರ್ ಇಬ್ರಾಹಿಂ ಝದ್ರಾನ್ ಚೊಚ್ಚಲ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಝದ್ರಾನ್ 217 ಎಸೆತಗಳಲ್ಲಿ 11 ಫೋರ್ಗಳೊಂದಿಗೆ ಅಜೇಯ 101 ರನ್ ಬಾರಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
4 / 6
2- ಕೇನ್ ವಿಲಿಯಮ್ಸನ್: ನ್ಯೂಝಿಲೆಂಡ್ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 289 ಎಸೆತಗಳನ್ನು ಎದುರಿಸಿದ ಕೇನ್ 16 ಫೋರ್ಗಳೊಂದಿಗೆ 118 ರನ್ ಬಾರಿಸಿದ್ದಾರೆ.
5 / 6
3- ರಚಿನ್ ರವೀಂದ್ರ: ನ್ಯೂಝಿಲೆಂಡ್ ತಂಡದ ಯುವ ಎಡಗೈ ದಾಂಡಿಗ ರಚಿನ್ ರವೀಂದ್ರ ಕೂಡ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ಮೊದಲ ದಿನದಾಟದಲ್ಲಿ 189 ಎಸೆತಗಳನ್ನು ಎದುರಿಸಿ 10 ಫೋರ್ ಹಾಗೂ 1 ಸಿಕ್ಸರ್ನೊಂದಿಗೆ ಚೊಚ್ಚಲ ಟೆಸ್ಟ್ ಶತಕ ಪೂರೈಸಿದ್ದಾರೆ.
6 / 6
4- ಶುಭ್ಮನ್ ಗಿಲ್: ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಆಟಗಾರ ಶುಭ್ಮನ್ ಗಿಲ್ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ 147 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 104 ರನ್ ಬಾರಿಸಿದ್ದಾರೆ.