Team India: ಅತೀ ವೇಗವಾಗಿ 200 ವಿಕೆಟ್ ಪಡೆದ ಟೀಮ್ ಇಂಡಿಯಾ ವೇಗದ ಬೌಲರ್ ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Dec 29, 2021 | 10:36 PM

Mohammed Shami: ಅಶ್ವಿನ್ 10248 ಎಸೆತಗಳ ಮೂಲಕ 200 ವಿಕೆಟ್​ ಕಬಳಿಸಿದರೆ, ಮೊಹಮ್ಮದ್ ಶಮಿ 9896 ಎಸೆತಗಳಲ್ಲಿ ಇನ್ನೂರು ವಿಕೆಟ್ ಪಡೆದು ಹೊಸ ದಾಖಲೆ ಬರೆದರು.

1 / 8
ಭಾರತ-ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ (Team India) 3 ವಿಕೆಟ್​ ನಷ್ಟಕ್ಕೆ 272 ರನ್​ಗಳಿಸಿತ್ತು. 2ನೇ ದಿನದಾಟವು ಮಳೆಗೆ ಅಹುತಿಯಾದರೆ, ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಕೇವಲ 55 ಸೇರಿಸುವಷ್ಟರಲ್ಲಿ ಸರ್ಪಪತನ ಕಂಡಿತು. ಅದರಂತೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 327 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಮೊಹಮ್ಮದ್ ಶಮಿ (Mohammed Shami) ಅವರ ಮಾರಕ ದಾಳಿಗೆ ತರಗೆಲೆಯಂತೆ ಉದುರಿದವು.

2 / 8
ಟೀಮ್ ಇಂಡಿಯಾ ಪರ ಕರಾರುವಾಕ್ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ 44 ರನ್​ಗೆ 5 ವಿಕೆಟ್ ಉರುಳಿಸಿ ಮಿಂಚಿದರು. ಇದರೊಂದಿಗೆ ಭಾರತದ ಪರ ಟೆಸ್ಟ್ ಕ್ರಿಕೆಟ್​ನಲ್ಲಿ 200 ವಿಕೆಟ್ ಪಡೆದ 11ನೇ ಬೌಲರ್ ಎಂಬ ದಾಖಲೆಯನ್ನು ಶಮಿ ಬರೆದರು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಅತೀ ಕಡಿಮೆ ಎಸೆತಗಳನ್ನು ಎಸೆದು 200 ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಇದೀಗ ಶಮಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನದಲ್ಲಿದ್ದರು.

3 / 8
ಅಶ್ವಿನ್ 10248 ಎಸೆತಗಳ ಮೂಲಕ 200 ವಿಕೆಟ್​ ಕಬಳಿಸಿದರೆ, ಮೊಹಮ್ಮದ್ ಶಮಿ 9896 ಎಸೆತಗಳಲ್ಲಿ ಇನ್ನೂರು ವಿಕೆಟ್ ಪಡೆದು ಹೊಸ ದಾಖಲೆ ಬರೆದರು. ಇದಾಗ್ಯೂ ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ 200 ವಿಕೆಟ್ ಪಡೆದ ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ. ಈ ದಾಖಲೆ ದಿ ಲೆಜೆಂಡ್ ಕಪಿಲ್ ದೇವ್ ಹೆಸರಿನಲ್ಲಿದೆ. ಹಾಗಿದ್ರೆ ಟೀಮ್ ಇಂಡಿಯಾ ಪರ ಅತೀ ಕಡಿಮೆ ಟೆಸ್ಟ್​ನಲ್ಲಿ 200 ವಿಕೆಟ್ ಪಡೆದ ಟಾಪ್ 5 ವೇಗದ ಬೌಲರುಗಳು ಯಾರೆಂದು ನೋಡೋಣ...

4 / 8
1- ಕಪಿಲ್ ದೇವ್: ಟೀಮ್ ಇಂಡಿಯಾ ದಂತಕಥೆ ಕಪಿಲ್ ದೇವ್ ಕೇವಲ 50 ಟೆಸ್ಟ್ ಪಂದ್ಯಗಳಿಂದ 200 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ.

5 / 8
2- ಜಾವಗಲ್ ಶ್ರೀನಾಥ್: ಮೈಸೂರು ಎಕ್ಸ್​ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ 54 ಟೆಸ್ಟ್ ಪಂದ್ಯಗಳಿಂದ 200 ವಿಕೆಟ್ ಉರುಳಿಸಿದ್ದರು.

6 / 8
3- ಮೊಹಮ್ಮದ್ ಶಮಿ: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ 200 ವಿಕೆಟ್ ಉರುಳಿಸಲು ತೆಗೆದುಕೊಂಡಿದ್ದು 55 ಪಂದ್ಯಗಳನ್ನು ಎಂಬುದು ವಿಶೇಷ.

7 / 8
4- ಜಹೀರ್ ಖಾನ್: ಟೀಮ್ ಇಂಡಿಯಾದ ಮಾಜಿ ಎಡಗೈ ವೇಗಿ ಜಹೀರ್ ಖಾನ್ 63 ಟೆಸ್ಟ್ ಪಂದ್ಯಗಳಿಂದ 200 ವಿಕೆಟ್ ಕಬಳಿಸಿದ್ದರು.

8 / 8
 5- ಇಶಾಂತ್ ಶರ್ಮಾ: ಪ್ರಸ್ತುತ ಟೀಮ್ ಇಂಡಿಯಾದ ವೇಗದ ಬೌಲರುಗಳಲ್ಲಿ ಒಬ್ಬರಾಗಿರುವ ಇಶಾಂತ್ ಶರ್ಮಾ ಕೂಡ 63 ಟೆಸ್ಟ್​ ಪಂದ್ಯಗಳಿಂದ 200 ವಿಕೆಟ್ ಪಡೆದಿದ್ದರು.

Published On - 3:34 pm, Wed, 29 December 21