
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಇದೀಗ ಮತ್ತೊಂದು ಲೀಗ್ ಕ್ರಿಕೆಟ್ನತ್ತ ಮುಖ ಮಾಡಿದೆ. ಆದರೆ ಈ ಬಾರಿ ಮುಖ ಮಾಡಿದ್ದು ಟಿ20 ಲೀಗ್ನತ್ತ ಅಲ್ಲ. ಬದಲಾಗಿ ದಿ ಹಂಡ್ರೆಡ್ ಲೀಗ್. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ 100 ಎಸೆತಗಳ ಟೂರ್ನಿ ದಿ ಹಂಡ್ರೆಡ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡವೊಂದನ್ನು ಖರೀದಿಸಿದೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ (ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್) ಓವಲ್ ಇನ್ವಿನ್ಸಿಬಲ್ ತಂಡದ ಶೇ. 49 ರಷ್ಟು ಪಾಲನ್ನು ಖರೀದಿಸಿದ್ದು, ಈ ಮೂಲಕ ದಿ ಹಂಡ್ರೆಡ್ ಲೀಗ್ಗೆ ಕಾಲಿಟ್ಟಿದೆ. ಹೀಗಾಗಿ ಮುಂಬರುವ ದಿ ಹಂಡ್ರೆಡ್ ಲೀಗ್ನಲ್ಲಿ ಓವಲ್ ಇನ್ವಿನ್ಸಿಬಲ್ ತಂಡವು MI ಓವಲ್ ತಂಡವಾಗಿ ಕಣಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ.

ಇತ್ತ ಓವಲ್ ಇನ್ವಿನ್ಸಿಬಲ್ ತಂಡದ ಬಹುಪಾಲನ್ನು ಖರೀದಿಸುವ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ 5ನೇ ತಂಡವನ್ನು ಸೇರಿಸಿಕೊಂಡಂತಾಗಿದೆ. ಅಂದರೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹೊರತುಪಡಿಸಿ, ಇನ್ನುಳಿದ ಲೀಗ್ಗಳಲ್ಲಿ 5 ತಂಡಗಳು ಕಣಕ್ಕಿಳಿಯುತ್ತಿವೆ. ಆ ತಂಡಗಳಾವುವು ಎಂದರೆ...

MI ವುಮೆನ್ಸ್: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಹಿಳಾ ತಂಡವನ್ನು ಹೊಂದಿದೆ. 2023 ರಿಂದ ಶುರುವಾಗಿರುವ ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವುಮೆನ್ಸ್ ತಂಡವು ಒಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

MI ನ್ಯೂಯಾರ್ಕ್: ಅಮೆರಿಕದಲ್ಲಿ ನಡೆಯುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು MI ನ್ಯೂಯಾರ್ಕ್ ಹೆಸರಿನ ತಂಡವನ್ನು ಹೊಂದಿದೆ.

MI ಕೇಪ್ ಟೌನ್: ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕತ್ವದ MI ಕೇಪ್ ಟೌನ್ ತಂಡವು ಕಣಕ್ಕಿಳಿಯುತ್ತಿದೆ.

MI ಎಮಿರೇಟ್ಸ್: ಯುಎಇನಲ್ಲಿ ಆಯೋಜಿಸಲಾಗುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು MI ಎಮಿರೇಟ್ಸ್ ತಂಡವನ್ನು ಹೊಂದಿದೆ.

ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಓವಲ್ ಇನ್ವಿನ್ಸಿಬಲ್ ತಂಡದ ಪಾಲನ್ನು ಖರೀದಿಸಿ ದಿ ಹಂಡ್ರೆಡ್ ಲೀಗ್ ಕ್ರಿಕೆಟ್ ಟೂರ್ನಿಗೆ ಲಗ್ಗೆಯಿಟ್ಟಿದೆ. ಈ ಮೂಲಕ ರಿಲಯನ್ಸ್ ಮಾಲೀಕತ್ವದ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ ಮುಂಬೈ ಇಂಡಿಯನ್ಸ್ ಸೇರಿದಂತೆ ಒಟ್ಟು 6 ತಂಡಗಳನ್ನು ಕಣಕ್ಕಿಳಿಸುತ್ತಿದೆ.
Published On - 12:05 pm, Sat, 1 February 25