T20 World Cup 2024: ಈ ಐವರು ದಿಗ್ಗಜ ಕ್ರಿಕೆಟಿಗರಿಗೆ ಇದು ಕೊನೆಯ ಟಿ20 ವಿಶ್ವಕಪ್..!

|

Updated on: May 30, 2024 | 6:10 PM

T20 World Cup 2024: 17ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ತೆರೆಬಿದ್ದಿದೆ. ಇದೀಗ ಎಲ್ಲರ ಕಣ್ಣು ಜೂನ್ 2ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಮೇಲೆ ನೆಟ್ಟಿದೆ. ಈ ಬಾರಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್​ನಲ್ಲಿ ಪಂದ್ಯಾವಳಿ ಆಯೋಜನೆಯಾಗುತ್ತಿದೆ. ಆದಾಗ್ಯೂ, ಟಿ20 ವಿಶ್ವಕಪ್ ನಂತರ ಈ ಸ್ವರೂಪದಿಂದ ಈ ಐವರು ದಿಗ್ಗಜ ಆಟಗಾರರು ನಿವೃತ್ತಿ ಘೋಷಿಸುವ ಸಾಧ್ಯತೆಗಳು ಹೆಚ್ಚಿವೆ.

1 / 6
17ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ತೆರೆಬಿದ್ದಿದೆ. ಇದೀಗ ಎಲ್ಲರ ಕಣ್ಣು ಜೂನ್ 2ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಮೇಲೆ ನೆಟ್ಟಿದೆ. ಈ ಬಾರಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್​ನಲ್ಲಿ ಪಂದ್ಯಾವಳಿ ಆಯೋಜನೆಯಾಗುತ್ತಿದೆ. ಆದಾಗ್ಯೂ, ಟಿ20 ವಿಶ್ವಕಪ್ ನಂತರ ಈ ಸ್ವರೂಪದಿಂದ ಈ ಐವರು ದಿಗ್ಗಜ ಆಟಗಾರರು ನಿವೃತ್ತಿ ಘೋಷಿಸುವ ಸಾಧ್ಯತೆಗಳು ಹೆಚ್ಚಿವೆ.

2 / 6
ರೋಹಿತ್ ಶರ್ಮಾ: 37 ವರ್ಷದ ರೋಹಿತ್ ಶರ್ಮಾಗೆ ಇದು ಕೊನೆಯ ಟಿ20 ವಿಶ್ವಕಪ್ ಎಂದು ಹೇಳಿದರೆ ತಪ್ಪಾಗಲಾರದು. ಇದಕ್ಕೆ ಅವರ ವಯಸ್ಸು ಪ್ರಮುಖ ಕಾರಣ ಎಂದು ಹೇಳಬಹುದು. ರೋಹಿತ್ ಟಿ20 ಹೊರತುಪಡಿಸಿ ಉಳಿದೆರಡು ಸ್ವರೂಪಗಳತ್ತ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ. ಶರ್ಮಾ ಭಾರತ ಪರ ಇದುವರೆಗೆ 151 ಟಿ20 ಪಂದ್ಯಗಳಲ್ಲಿ 3974 ರನ್ ಬಾರಿಸಿದ್ದಾರೆ.

3 / 6
ಶಕೀಬ್ ಅಲ್ ಹಸನ್: 2006 ರಿಂದ ಬಾಂಗ್ಲಾದೇಶ ಪರ ಕ್ರಿಕೆಟ್ ಆಡುತ್ತಿರುವ ಅನುಭವಿ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಕೂಡ 37 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೆಚ್ಚುತ್ತಿರುವ ವಯಸ್ಸಿನ ಕಾರಣ, ಅವರು ಈ ಮಾದರಿಯಿಂದ ನಿವೃತ್ತರಾಗಬಹುದು. ಬಾಂಗ್ಲಾದೇಶ ಪರ ಆಡಿರುವ 122 ಟಿ20 ಪಂದ್ಯಗಳಲ್ಲಿ ಶಕೀಬ್ 2440 ರನ್ ಹಾಗೂ 146 ವಿಕೆಟ್ ಪಡೆದಿದ್ದಾರೆ.

4 / 6
ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಲೆಜೆಂಡರಿ ಓಪನರ್ ಡೇವಿಡ್ ವಾರ್ನರ್ ಈಗಾಗಲೇ ಟೆಸ್ಟ್ ಮತ್ತು ಏಕದಿನ ಮಾದರಿಗಳಿಂದ ನಿವೃತ್ತಿಯಾಗಿದ್ದಾರೆ. 37ರ ಹರೆಯದ ವಾರ್ನರ್ ಟಿ20 ವಿಶ್ವಕಪ್ ಬಳಿಕ ಟಿ20ಯಿಂದ ನಿವೃತ್ತಿಯಾಗುವ ಎಲ್ಲ ಸಾಧ್ಯತೆಗಳಿವೆ. ವಾರ್ನರ್ ಇದುವರೆಗೆ ಆಸ್ಟ್ರೇಲಿಯಾ ಪರ 103 ಟಿ20 ಪಂದ್ಯಗಳಲ್ಲಿ 3099 ರನ್ ಗಳಿಸಿದ್ದಾರೆ.

5 / 6
ವಿರಾಟ್ ಕೊಹ್ಲಿ: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ನಂತರ ಕ್ರಿಕೆಟ್‌ನ ಅತ್ಯಂತ ಕಡಿಮೆ ಸ್ವರೂಪದಿಂದ ನಿವೃತ್ತರಾಗಬಹುದು. ಇದಕ್ಕೆ ಕಾರಣ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಆಧ್ಯತೆ ನೀಡುವುದು. ಇದುವರೆಗೆ ಭಾರತ ಪರ 117 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ 4037 ರನ್ ಬಾರಿಸಿದ್ದಾರೆ.

6 / 6
ಏಂಜೆಲೊ ಮ್ಯಾಥ್ಯೂಸ್: 36 ವರ್ಷದ ಶ್ರೀಲಂಕಾದ ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಕೂಡ ಟಿ20 ವಿಶ್ವಕಪ್ ನಂತರ ನಿವೃತ್ತಿಯ ಬಗ್ಗೆ ಯೋಚಿಸಬಹುದು. ಈಗಾಗಲೇ ಲಂಕಾ ತಂಡದಲ್ಲಿ ಕಡಿಮೆ ಅವಕಾಶಗಳನ್ನು ಪಡೆಯುತ್ತಿರುವ ಮ್ಯಾಥ್ಯೂಸ್​ಗೆ ಟಿ20 ಮಾದರಿಗೆ ವಿದಾಯ ಹೇಳಲು ಇದು ಸರಿಯಾದ ಸಮಯ. ಶ್ರೀಲಂಕಾ ಪರ 87 ಟಿ20 ಪಂದ್ಯಗಳನ್ನಾಡಿರುವ ಮ್ಯಾಥ್ಯೂಸ್ 1354 ರನ್ ಹಾಗೂ 45 ವಿಕೆಟ್ ಪಡೆದಿದ್ದಾರೆ.