- Kannada News Photo gallery Cricket photos Suresh Raina only Indian to hits a century in T20 World Cup
T20 World Cup: ರೋಹಿತ್, ಕೊಹ್ಲಿ ಅಲ್ಲ; ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಏಕೈಕ ಭಾರತೀಯ ಯಾರು ಗೊತ್ತಾ?
T20 World Cup: ಇದುವರೆಗೆ ಟಿ20 ವಿಶ್ವಕಪ್‌ನಲ್ಲಿ 8 ಆವೃತ್ತಿಗಳು ಮುಕ್ತಾಯಗೊಂಡಿವೆ. ಈ ಎಂಟೂ ಆವೃತ್ತಿಗಳಲ್ಲೂ ಹಲವು ದಾಖಲೆಗಳು ನಿರ್ಮಾಣವಾಗಿವೆ. ಆದಾಗ್ಯೂ, ಕ್ರಿಕೆಟ್‌ನ ಈ ಕಡಿಮೆ ಸ್ವರೂಪದ ವಿಶ್ವಕಪ್‌ನಲ್ಲಿ ಕೇವಲ 11 ಶತಕಗಳು ಮಾತ್ರ ದಾಖಲಾಗಿವೆ. ಈ ಪಟ್ಟಿಯಲ್ಲಿ ಕೇವಲ ಒಬ್ಬ ಭಾರತೀಯನ ಹೆಸರಿರುವುದು ಅಚ್ಚರಿಯ ಸಂಗತಿಯಾಗಿದೆ.
Updated on: May 30, 2024 | 10:02 PM

9ನೇ ಆವೃತ್ತಿಯ ಟಿ20 ವಿಶ್ವಕಪ್ ಜೂನ್ 1 ರಿಂದ ಆತಿಥೇಯ ಅಮೆರಿಕ ಮತ್ತು ಕೆನಡಾ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ದೊಡ್ಡ ಟೂರ್ನಿಯಾಗಲಿದೆ. ಈ ಬಾರಿ ಒಟ್ಟು 20 ತಂಡಗಳು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದು, ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.

ಇದುವರೆಗೆ ಟಿ20 ವಿಶ್ವಕಪ್‌ನಲ್ಲಿ 8 ಆವೃತ್ತಿಗಳು ಮುಕ್ತಾಯಗೊಂಡಿವೆ. ಈ ಎಂಟೂ ಆವೃತ್ತಿಗಳಲ್ಲೂ ಹಲವು ದಾಖಲೆಗಳು ನಿರ್ಮಾಣವಾಗಿವೆ. ಆದಾಗ್ಯೂ, ಕ್ರಿಕೆಟ್‌ನ ಈ ಕಡಿಮೆ ಸ್ವರೂಪದ ವಿಶ್ವಕಪ್‌ನಲ್ಲಿ ಕೇವಲ 11 ಶತಕಗಳು ಮಾತ್ರ ದಾಖಲಾಗಿವೆ. ಈ ಪಟ್ಟಿಯಲ್ಲಿ ಕೇವಲ ಒಬ್ಬ ಭಾರತೀಯನ ಹೆಸರಿರುವುದು ಅಚ್ಚರಿಯ ಸಂಗತಿಯಾಗಿದೆ.

ಆ ಭಾರತದ ಆಟಗಾರ ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಅಲ್ಲ. ಬದಲಿಗೆ ಮಿಸ್ಟರ್ ಐಪಿಎಲ್ ಖ್ಯಾತಿಯ ಬ್ಯಾಟ್ಸ್‌ಮನ್ ಸುರೇಶ್ ರೈನಾ. ರೈನಾ 2 ಮೇ 2010 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದ್ದರು.

ಈ ಪಂದ್ಯದಲ್ಲಿ 60 ಎಸೆತಗಳನ್ನು ಎದುರಿಸಿದ್ದ ರೈನಾ, 168.33 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ 101 ರನ್ ಬಾರಿಸಿದ್ದರು. ಇದರಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಸಹ ಸೇರಿದ್ದವು. ಅಂದಿನಿಂದ ಇಲ್ಲಿಯವರೆಗೆ 5 ಟಿ20 ವಿಶ್ವಕಪ್‌ಗಳು ನಡೆದಿವೆ, ಆದರೆ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಶತಕ ಗಳಿಸಲು ಸಾಧ್ಯವಾಗಿಲ್ಲ.

ಉಳಿದಂತೆ ಟಿ20 ವಿಶ್ವಕಪ್‌ನಲ್ಲಿ ದಾಖಲಾಗಿರುವ 11 ಶತಕಗಳ ಬಗ್ಗೆ ಹೇಳುವುದಾದರೆ.. ಟಿ20 ವಿಶ್ವಕಪ್‌ನಲ್ಲಿ 2 ಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್ ಎಂದರೆ ಅದು ಕ್ರಿಸ್ ಗೇಲ್. ಗೇಲ್ 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದರು.

ಇವರಲ್ಲದೆ ಸುರೇಶ್ ರೈನಾ, ಮಹೇಲಾ ಜಯವರ್ಧನೆ, ಬ್ರೆಂಡನ್ ಮೆಕಲಮ್, ಅಲೆಕ್ಸ್ ಹೇಲ್ಸ್, ಅಹ್ಮದ್ ಶೆಹಜಾದ್, ತಮೀಮ್ ಇಕ್ಬಾಲ್, ಜೋಸ್ ಬಟ್ಲರ್, ರಿಲೆ ರೂಸೋ ಮತ್ತು ಗ್ಲೆನ್ ಫಿಲಿಪ್ಸ್ ತಲಾ 1 ಶತಕ ಸಿಡಿಸಿದ್ದಾರೆ.




