ICC T20I Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ 70 ಸ್ಥಾನ ಮೇಲೇರಿದ ತಿಲಕ್ ವರ್ಮಾ

|

Updated on: Jan 30, 2025 | 7:42 AM

ICC T20I Rankings 2025: ಐಸಿಸಿ ಟಿ20 ಬ್ಯಾಟರ್​ಗಳ ನೂತನ ಶ್ರೇಯಾಂಕ ಪಟ್ಟಿ ಪ್ರಕಟಿಸಿದ್ದು, ಈ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೂವರು ಬ್ಯಾಟರ್​ಗಳು ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಭಾರತ ತಂಡದ ಯುವ ಬ್ಯಾಟರ್ ತಿಲಕ್ ವರ್ಮಾ ಈ ಬಾರಿ 70 ಸ್ಥಾನಗಳ ಜಿಗಿತ ಕಾಣುವ ಮೂಲಕ ಟಾಪ್-3 ಗೆ ಎಂಟ್ರಿ ಕೊಟ್ಟಿದ್ದಾರೆ.

1 / 5
ಐಸಿಸಿ ಟಿ20 ಬ್ಯಾಟರ್​ಗಳ ನೂತನ ರ‍್ಯಾಂಕಿಂಗ್​ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಕೂಡ ಆಸ್ಟ್ರೇಲಿಯಾದ ಎಡಗೈ ದಾಂಡಿಗ ಟ್ರಾವಿಸ್ ಹೆಡ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇನ್ನು ಟೀಮ್ ಇಂಡಿಯಾದ ಯುವ ಬ್ಯಾಟರ್ ತಿಲಕ್ ವರ್ಮಾ ಬರೋಬ್ಬರಿ 70 ಸ್ಥಾನ ಜಿಗಿತ ಕಾಣುವ ಮೂಲಕ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Twitter
2 / 5
ನವೆಂಬರ್ 10, 2024 ರಲ್ಲಿ ಐಸಿಸಿ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್​ನಲ್ಲಿ 72ನೇ ಸ್ಥಾನದಲ್ಲಿದ್ದ ತಿಲಕ್ ವರ್ಮಾ ಭರ್ಜರಿ ಪ್ರದರ್ಶನ ನೀಡುವ ಮೂಲಕ ಇದೀಗ 2ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ 832 ಅಂಕಗಳನ್ನು ಹೊಂದಿರುವ ತಿಲಕ್ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಟ್ರಾವಿಸ್ ಹೆಡ್ (855) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಬಹುದು.

3 / 5
ಇನ್ನು ಈ ಪಟ್ಟಿಯಲ್ಲಿ ಇಂಗ್ಲೆಂಡ್ ದಾಂಡಿಗ ಫಿಲ್ ಸಾಲ್ಟ್ (782) ಮೂರನೇ ಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರ್ಯ ಒಟ್ಟು 763 ಅಂಕಗಳನ್ನು ಪಡೆದಿದ್ದಾರೆ.

4 / 5
ಇಂಗ್ಲೆಂಡ್​ನ ಜೋಸ್ ಬಟ್ಲರ್ (749), ಪಾಕಿಸ್ತಾನದ ಬಾಬರ್ ಆಝಂ (712), ಶ್ರೀಲಂಕಾದ ಪಾತುಮ್ ನಿಸ್ಸಂಕಾ (707), ಹಾಗೂ ಪಾಕಿಸ್ತಾನದ ಮೊಹಮ್ಮದ್ ರಿಝ್ವಾನ್ (704) ಕ್ರಮವಾಗಿ 5,6,7 ಮತ್ತು 8ನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

5 / 5
ಹಾಗೆಯೇ 9ನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ಜೈಸ್ವಾಲ್ ಒಟ್ಟು 685 ಅಂಕಗಳನ್ನು ಹೊಂದಿದ್ದಾರೆ. ಇನ್ನು ಟಾಪ್-10 ನಲ್ಲಿ ಕೊನೆಯ ಸ್ಥಾನ ಅಲಂಕರಿಸಿರುವುದು ಶ್ರೀಲಂಕಾದ ಕುಸಾಲ್ ಪೆರೇರಾ (675).

Published On - 7:41 am, Thu, 30 January 25