TNPL 2023: 8 ಸಿಕ್ಸ್, 7 ಫೋರ್​: ಅಜಿತೇಶ್ ಸ್ಪೋಟಕ ಶತಕ, ರಾಯಲ್ ಕಿಂಗ್ಸ್​ಗೆ ರೋಚಕ ಜಯ

| Updated By: ಝಾಹಿರ್ ಯೂಸುಫ್

Updated on: Jun 17, 2023 | 6:03 PM

Ajitesh Guruswamy: ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಅಜಿತೇಶ್ ತಂಡದ ಮೊತ್ತವನ್ನು 10 ಓವರ್​ಗಳಲ್ಲಿ 70 ರ ಗಡಿದಾಟಿಸಿದ್ದರು. ಇದಾದ ಬಳಿಕ ಬಿರುಸಿನ ಬ್ಯಾಟಿಂಗ್​ ಮೂಲಕ ಅಬ್ಬರಿಸಲಾರಂಭಿಸಿದರು.

1 / 8
TNPL 2023: ತಮಿಳುನಾಡು ಪ್ರೀಮಿಯರ್ ಲೀಗ್​ನ 7ನೇ ಸೀಸನ್​ನಲ್ಲಿ ಭರ್ಜರಿ ಶತಕ ಸಿಡಿಸಿ ಅಜಿತೇಶ್ ಗುರುಸ್ವಾಮಿ ಅಬ್ಬರಿಸಿದ್ದಾರೆ. ಲೈಕಾ ಕೋವೈ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೆಲ್ಲೈ ರಾಯಲ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.

2 / 8
ಅದರಂತೆ ಇನಿಂಗ್ಸ್ ಆರಂಭಿಸಿದ ಲೈಕಾ ಕೋವೈ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಬಿ. ಸಚಿನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ನಡೆಸಿದರು.

3 / 8
ನೆಲ್ಲೈ ರಾಯಲ್ ಕಿಂಗ್ಸ್ ಬೌಲರ್​ಗಳನ್ನು ಬೆಂಡೆತ್ತಿದ ಸಾಯಿ ಸುದರ್ಶನ್ 4 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಕೇವಲ 52 ಎಸೆತಗಳಲ್ಲಿ 90 ರನ್ ಬಾರಿಸಿದರು. ಅದರಂತೆ ಲೈಕಾ ಕೋವೈ ಕಿಂಗ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 181 ರನ್ ಪೇರಿಸಿತು.

4 / 8
182 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ನೆಲ್ಲೈ ರಾಯಲ್ ಕಿಂಗ್ಸ್ ತಂಡದ ಕೂಡ ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಜಿತೇಶ್ ಗುರುಸ್ವಾಮಿ ತಂಡಕ್ಕೆ ಆಸರೆಯಾಗಿ ನಿಂತರು.

5 / 8
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಅಜಿತೇಶ್ ತಂಡದ ಮೊತ್ತವನ್ನು 10 ಓವರ್​ಗಳಲ್ಲಿ 70 ರ ಗಡಿದಾಟಿಸಿದ್ದರು. ಇದಾದ ಬಳಿಕ ಬಿರುಸಿನ ಬ್ಯಾಟಿಂಗ್​ ಮೂಲಕ ಅಬ್ಬರಿಸಲಾರಂಭಿಸಿದರು. ಪರಿಣಾಮ ಕೊನೆಯ 7 ಎಸೆತಗಳಲ್ಲಿ 21 ರನ್​ಗಳ ಅವಶ್ಯಕತೆಯಿತ್ತು.

6 / 8
ಈ ಹಂತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಅಜಿತೇಶ್ ಗುರುಸ್ವಾಮಿ ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿದರು. ಅದರಂತೆ ಕೊನೆಯ ಓವರ್​ನಲ್ಲಿ 15 ರನ್​ಗಳ ಟಾರ್ಗೆಟ್ ಪಡೆಯಿತು. ಈ ಹಂತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸುವ ಮೂಲಕ ಅಜಿತೇಶ್ ಪಂದ್ಯವನ್ನು ಮತ್ತಷ್ಟು ರೋಚಕತೆಗೆ ಕೊಂಡೊಯ್ದರು.

7 / 8
ಆದರೆ 60 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ 112 ರನ್ ಬಾರಿಸಿದ್ದ ಅಜಿತೇಶ್ ಗುರುಸ್ವಾಮಿ ಅಂತಿಮ ಹಂತದಲ್ಲಿ ರನೌಟ್ ಆದರು. ಇತ್ತ ಕೊನೆಯ 2 ಎಸೆತಗಳಲ್ಲಿ 7 ರನ್​ಗಳ ಟಾರ್ಗೆಟ್ ಪಡೆದ ನೆಲ್ಲೈ ರಾಯಲ್ ಕಿಂಗ್ಸ್ ಪರ ಎಂ ಮೊಹಮ್ಮದ್ ಸಿಕ್ಸ್ ಬಾರಿಸಿದರು.

8 / 8
ಅಲ್ಲದೆ ಕೊನೆಯ ಎಸೆತದಲ್ಲಿ 1 ರನ್ ಓಡುವ ಮೂಲಕ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ  ರೋಚಕ ಜಯ ತಂದುಕೊಟ್ಟರು. ಇನ್ನು ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಅಜಿತೇಶ್ ಗುರುಸ್ವಾಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.