MLC 2023: ಮಿಲ್ಲರ್, ರಾಯುಡು, ಡುಪ್ಲೆಸಿಸ್: TSK ತಂಡದ 7 ವಿದೇಶಿ ಆಟಗಾರರು ಇವರೇ
Texas Super Kings Squad: ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಬಹುತೇಕ ಆಟಗಾರರನ್ನೇ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆ ಮಾಡಿರುವುದು ವಿಶೇಷ.
Updated on: Jun 17, 2023 | 3:58 PM

MLC 2023: ಅಮೆರಿಕದಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಗಾಗಿ ಸಿಎಸ್ಕೆ ಫ್ರಾಂಚೈಸಿಯ ಟೆಕ್ಸಾಸ್ ಸೂಪರ್ ಕಿಂಗ್ಸ್ (TSK) ತನ್ನ ವಿದೇಶಿ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.

15 ಸದ್ಯರ ಈ ತಂಡದಲ್ಲಿ ಒಟ್ಟು 7 ವಿದೇಶಿ ಆಟಗಾರರಿಗೆ ಸ್ಥಾನ ನೀಡಲಾಗಿದೆ. ವಿಶೇಷ ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಬಹುತೇಕ ಆಟಗಾರರನ್ನೇ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಇಲ್ಲಿ TSK (ಟೆಕ್ಸಾಸ್ ಸೂಪರ್ ಕಿಂಗ್ಸ್) ತಂಡದ ನಾಯಕರಾಗಿ ಸಿಎಸ್ಕೆ ತಂಡದ ಮಾಜಿ ಆಟಗಾರ ಫಾಫ್ ಡುಪ್ಲೆಸಿಸ್ ಕಾಣಿಸಿಕೊಳ್ಳಲಿದ್ದಾರೆ.

ಹಾಗೆಯೇ ಈ ಬಾರಿಯ ಐಪಿಎಲ್ನೊಂದಿಗೆ ಸಿಎಸ್ಕೆ ತಂಡಕ್ಕೆ ವಿದಾಯ ಹೇಳಿದ್ದ ಅಂಬಾಟಿ ರಾಯುಡು ಕೂಡ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯಲು ಒಪ್ಪಂದ ಮಾಡಿಕೊಂಡಿದ್ದಾರೆ.

ಇವರಲ್ಲದೆ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುವ ಸೌತ್ ಆಫ್ರಿಕಾ ಆಟಗಾರ ಡೇವಿಡ್ ಮಿಲ್ಲರ್ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಟೆಕ್ಸಾಸ್ ಪರ ಆಡಲಿರುವುದು ವಿಶೇಷ.

ಇನ್ನು ಪ್ರಸ್ತುತ ಸಿಎಸ್ಕೆ ತಂಡ ಭಾಗವಾಗಿರುವ ಆರಂಭಿಕ ಆಟಗಾರ ನ್ಯೂಜಿಲೆಂಡ್ ಡೆವೊನ್ ಕಾನ್ವೆ ಮತ್ತೊಮ್ಮೆ ಸಿಎಸ್ಕೆ ಫ್ರಾಂಚೈಸಿಯ ಹೊಸ ತಂಡದಲ್ಲಿ ಕಣಕ್ಕಿಳಿಯಲಿದ್ದಾರೆ.

ಹಾಗೆಯೇ ನ್ಯೂಜಿಲೆಂಡ್ ಆಟಗಾರ ಮಿಚೆಲ್ ಸ್ಯಾಂಟ್ನರ್ ಕೂಡ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಸ್ಯಾಂಟ್ನರ್ ಕೂಡ ಪ್ರಸ್ತುತ ಸಿಎಸ್ಕೆ ತಂಡದ ಆಟಗಾರ ಎಂಬುದು ವಿಶೇಷ.

ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಸಿಎಸ್ಕೆ ಮಾಲೀಕತ್ವದ ಜೋಬರ್ಗ್ ಸೂಪರ್ ಕಿಂಗ್ಸ್ ಪರ ಆಡಿದ್ದ ಜೆರಾಲ್ಡ್ ಕೋಟ್ಜಿ ಕೂಡ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.

ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಆಸ್ಟ್ರೇಲಿಯಾ ಆಟಗಾರ ಡೇನಿಯಲ್ ಸ್ಯಾಮ್ಸ್ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಟಿಎಸ್ಕೆ ಪರ ಕಣಕ್ಕಿಳಿಯಲಿದ್ದಾರೆ.

ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಆಗಿರುವ ಡ್ವೇನ್ ಬ್ರಾವೊ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.
