TNPL 2023: 5 ಪಂದ್ಯ 4 ಅರ್ಧಶತಕ: ಮುಂದುವರೆದ ಸಾಯಿ ಸುದರ್ಶನ್ ಆರ್ಭಟ

Edited By:

Updated on: Jun 25, 2023 | 10:58 PM

Sai Sudharsan: ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಾಯಿ ಸುದರ್ಶನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ವಿಶೇಷ ಎಂದರೆ ಕಳೆದ 5 ಪಂದ್ಯಗಳಲ್ಲಿ ಇದು ಅವರ 4ನೇ ಅರ್ಧಶತಕ.

1 / 8
TNPL 2023: ತಮಿಳುನಾಡು ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಿಂಡಿಗಲ್ ಡ್ರಾಗನ್ಸ್ ತಂಡವು ಲೈಕಾ ಕೋವೈ ಕಿಂಗ್ಸ್​ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು.

TNPL 2023: ತಮಿಳುನಾಡು ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಿಂಡಿಗಲ್ ಡ್ರಾಗನ್ಸ್ ತಂಡವು ಲೈಕಾ ಕೋವೈ ಕಿಂಗ್ಸ್​ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು.

2 / 8

ಅದರಂತೆ ಇನಿಂಗ್ಸ್ ಆರಂಭಿಸಿದ ಲೈಕಾ ಕೋವೈ ಕಿಂಗ್ಸ್ ತಂಡಕ್ಕೆ ಸುಜಯ್ (31) ಹಾಗೂ ಸುರೇಶ್ ಕುಮಾರ್ (29) ಉತ್ತಮ ಆರಂಭ ಒದಗಿಸಿದ್ದರು. ಆರಂಭಿಕರ ನಿರ್ಗಮನದ ಬಳಿಕ ಕ್ರೀಸ್​ಗೆ ಆಗಮಿಸಿದ ಸಾಯಿ ಸುದರ್ಶನ್ ಎಂದಿನಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

3 / 8

ಸ್ಪೋಟಕ ಇನಿಂಗ್ಸ್ ಆಡಿದ ಸುದರ್ಶನ್ ದಿಂಡಿಗಲ್ ಡ್ರಾಗನ್ಸ್ ಬೌಲರ್​ಗಳನ್ನು ಮನಸೊ ಇಚ್ಛೆ ದಂಡಿಸಿದರು. ಪರಿಣಾಮ ಯುವ ಎಡಗೈ ದಾಂಡಿಗನ ಬ್ಯಾಟ್​ನಿಂದ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳು ಮೂಡಿಬಂದವು.

4 / 8

ಅಲ್ಲದೆ ಕೇವಲ 41 ಎಸೆತಗಳಲ್ಲಿ 83 ರನ್ ಬಾರಿಸಿದ ಸಾಯಿ ಸುದರ್ಶನ್ ಕೊನೆಯ ಓವರ್​ನ ಅಂತಿಮ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಸಾಯಿಯ ಈ ಭರ್ಜರಿ ಅರ್ಧಶತಕದ ನೆರವಿನಿಂದ ಲೈಕಾ ಕೋವೈ ಕಿಂಗ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 206 ರನ್​ ಪೇರಿಸಿತು.

5 / 8

207 ರನ್​ಗಳ ಕಠಿಣ ಗುರಿ ಪಡೆದ ದಿಂಡಿಗಲ್ ಡ್ರಾಗನ್ಸ್ ಶಿವಂ ಸಿಂಗ್ 42 ಎಸೆತಗಳಲ್ಲಿ 61 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ವಿಫಲರಾದರು. ಪರಿಣಾಮ ದಿಂಡಿಗಲ್ ಡ್ರಾಗನ್ಸ್ ತಂಡವು 19.1 ಓವರ್​ಗಳಲ್ಲಿ 147 ರನ್​ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಲೈಕಾ ಕೋವೈ ಕಿಂಗ್ಸ್ 59 ರನ್​ಗಳ ಜಯ ಸಾಧಿಸಿತು.

6 / 8

ಇತ್ತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಾಯಿ ಸುದರ್ಶನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ವಿಶೇಷ ಎಂದರೆ ಕಳೆದ 5 ಪಂದ್ಯಗಳಲ್ಲಿ ಇದು ಅವರ 4ನೇ ಅರ್ಧಶತಕ.

7 / 8

ಇದಕ್ಕೂ ಮುನ್ನ ಐಡ್ರೀಮ್ ತಿರುಪ್ಪೂರ್ ತಮಿಳನ್ಸ್ ವಿರುದ್ಧ ಕೇವಲ 45 ಎಸೆತಗಳಲ್ಲಿ 86 ರನ್ ಬಾರಿಸಿದ್ದರು. ಹಾಗೆಯೇ ನೆಲ್ಲೈ ರಾಯಲ್ ಕಿಂಗ್ಸ್ ವಿರುದ್ದ 52 ಎಸೆತಗಳಲ್ಲಿ 90 ರನ್ ಚಚ್ಚಿದ್ದರು.

8 / 8

ಇದಲ್ಲದೆ ಚೆಪಾಕ್ ಸೂಪರ್ ಗಿಲ್ಲಿಸ್ ವಿರುದ್ಧ 43 ಎಸೆತಗಳಲ್ಲಿ ಅಜೇಯ 64 ರನ್ ಬಾರಿಸಿದ್ದರು. ಇದೀಗ ದಿಂಡಿಗಲ್ ಡ್ರಾಗನ್ಸ್ ವಿರುದ್ಧ 83 ರನ್​ ಬಾರಿಸುವ ಮೂಲಕ ಸಾಯಿ ಸುದರ್ಶನ್ ಮತ್ತೊಮ್ಮೆ ಮಿಂಚಿದ್ದಾರೆ.

Loading...
Unable to load recommendations.
Follow Us