ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 2 ರಂದು ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. 2019 ರ ವಿಶ್ವಕಪ್ ನಂತರ ಉಭಯ ತಂಡಗಳು ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಇನ್ನು ಬದ್ಧವೈರಿಗಳ ಈ ಕಾಳಗದಲ್ಲಿ ಯಾವ ಬ್ಯಾಟರ್ ಹೆಚ್ಚು ರನ್ ಗಳಿಸಿದ್ದಾರೆ ಎಂಬುದನ್ನು ನೋಡುವುದಾದರೆ..
ಶೋಯೆಬ್ ಮಲಿಕ್: ಏಷ್ಯಾಕಪ್ ಪಂದ್ಯಗಳಲ್ಲಿ ಅಗ್ರ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಶೋಯೆಬ್ ಮಲಿಕ್ ಹೆಸರಿನಲ್ಲಿದೆ. ಅವರು ಐದು ಪಂದ್ಯಗಳಲ್ಲಿ 107 ರ ಸರಾಸರಿಯಲ್ಲಿ 428 ರನ್ ಬಾರಿಸಿದ್ದಾರೆ, ಇದರಲ್ಲಿ ಎರಡು ಅದ್ಭುತ ಶತಕಗಳು ಸೇರಿವೆ.
ರೋಹಿತ್ ಶರ್ಮಾ: ಪಾಕಿಸ್ತಾನ ವಿರುದ್ಧದ ಏಳು ಪಂದ್ಯಗಳಲ್ಲಿ ರೋಹಿತ್ ಇದುವರೆಗೆ 73.40 ಸರಾಸರಿಯಲ್ಲಿ ನಾಲ್ಕು ಅರ್ಧಶತಕ ಮತ್ತು ಒಂದು ಶತಕದೊಂದಿಗೆ 367 ರನ್ ಬಾರಿಸಿದ್ದಾರೆ.
ಯೂನಿಸ್ ಖಾನ್: ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಆಡಿರುವ ನಾಲ್ಕು ಪಂದ್ಯಗಳಲ್ಲಿ ಯೂನಿಸ್ ಖಾನ್ 79.33 ಸರಾಸರಿಯಲ್ಲಿ ಎರಡು ಅರ್ಧಶತಕ ಮತ್ತು ಒಂದು ಶತಕದೊಂದಿಗೆ 238 ರನ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ: ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳಲ್ಲಿ 206 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಕೊಹ್ಲಿ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ 183 ರನ್ ಕೂಡ ಇದೇ ಏಷ್ಯನ್ ಪಂದ್ಯಾವಳಿಯಲ್ಲಿ, ಇದೇ ಪಾಕಿಸ್ತಾನದ ವಿರುದ್ಧ ಸಿಡಿದಿತ್ತು.
ಮೊಹಮ್ಮದ್ ಹಫೀಜ್: ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಎರಡು ಪಂದ್ಯಗಳನ್ನು ಆಡಿರುವ ಹಫೀಜ್ 90 ರ ಸರಾಸರಿಯಲ್ಲಿ 180 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಮತ್ತು ಶತಕವೂ ಸೇರಿದೆ.