ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಸೂಪರ್-12 ಪಂದ್ಯಗಳು ಅಕ್ಟೋಬರ್ 22 ರಿಂದ ನಡೆಯಲಿದೆ. ಈ ಬಾರಿ, ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ T20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬೌಲಿಂಗ್ ವಿಷಯದಲ್ಲಿ, ಈ ಬಾರಿ ಟೀಂ ಇಂಡಿಯಾ ಸ್ವಲ್ಪ ದುರ್ಬಲವಾಗಿದ್ದು, ತಂಡಕ್ಕೆ ಯುವ ಬೌಲರ್‌ಗಳೇ ಆಸರೆಯಾಗಿದ್ದಾರೆ. ಟೀಂ ಇಂಡಿಯಾ ಮಾತ್ರವಲ್ಲದೆ ಇತರೆ ತಂಡಗಳು ಕೂಡ ಯುವ ಆಟಗಾರರೊಂದಿಗೆ ಕಣಕ್ಕೆ ಇಳಿಯುತ್ತಿವೆ. ಅಂತಹ ಕೆಲವು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.
ಅಯಾನ್ ಖಾನ್ (ಯುಎಇ, 16 ವರ್ಷ).. ಯುಎಇ ಪರ ಆಡುತ್ತಿರುವ 16 ವರ್ಷದ ಅಯಾನ್ ಖಾನ್ ಈ ಬಾರಿ 2022ರ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅಯಾನ್ ಇದುವರೆಗೆ ಯುಎಇ ಪರ ಕೇವಲ 2 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 147.05 ಸ್ಟ್ರೈಕ್ ರೇಟ್‌ನಲ್ಲಿ 25 ರನ್ ಗಳಿಸಿದ್ದಾರೆ.
ನಸೀಮ್ ಶಾ (ಪಾಕಿಸ್ತಾನ, 19 ವರ್ಷ).. ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾಗೆ ಈಗ ಕೇವಲ 19 ವರ್ಷ. ಇತ್ತೀಚೆಗೆ ನಡೆದ ಏಷ್ಯಾಕಪ್ನಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ನಸೀಮ್ ಪಾಕಿಸ್ತಾನದ ಪರವಾಗಿ ಒಟ್ಟು 13 ಟೆಸ್ಟ್ ಪಂದ್ಯಗಳು, 3 ಏಕದಿನ ಮತ್ತು 6 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಮೊಹಮ್ಮದ್ ಸಲೀಂ (ಅಫ್ಘಾನಿಸ್ತಾನ, 20 ವರ್ಷ).. ಅಫ್ಘಾನಿಸ್ತಾನದ ಮೊಹಮ್ಮದ್ ಸಲೀಂ ಅಫ್ಘಾನಿಸ್ತಾನದ ರಾಷ್ಟ್ರೀಯ ತಂಡಕ್ಕೆ ಇನ್ನೂ ಪದಾರ್ಪಣೆ ಮಾಡಿಲ್ಲ. ಈ ವೇಗದ ಬೌಲರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸಲೀಂ ಇದುವರೆಗೆ ಒಟ್ಟು 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಅವರು 27.51 ಸರಾಸರಿಯಲ್ಲಿ 41 ವಿಕೆಟ್ ಪಡೆದಿದ್ದಾರೆ. 2022 ರಲ್ಲಿ ಆಡಿದ ಶೋಪೆಜಾ ಲೀಗ್‌ನಲ್ಲಿ, ಅವರು ಕೇವಲ 6.63 ರ ಎಕಾನಮಿಯೊಂದಿಗೆ 9 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದರು.
ಟ್ರಿಸ್ಟಾನ್ ಸ್ಟಬ್ಸ್ (ದಕ್ಷಿಣ ಆಫ್ರಿಕಾ, 22 ವರ್ಷ).. 22 ವರ್ಷದ ಟ್ರಿಸ್ಟಾನ್ ಸ್ಟಬ್ಸ್ ಇದೀಗ ವಿಶ್ವ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದ್ದಾರೆ. ಟ್ರಿಸ್ಟಾನ್ ಅತ್ಯಧಿಕ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಲು ಹೆಸರುವಾಸಿಯಾಗಿದ್ದು, ಅವರು ಇದುವರೆಗೆ ದಕ್ಷಿಣ ಆಫ್ರಿಕಾ ಪರ ಒಟ್ಟು 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅದರಲ್ಲಿ ಅವರು 191.98 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 142 ರನ್ ಗಳಿಸಿದ್ದಾರೆ.
ಅರ್ಷ್‌ದೀಪ್ ಸಿಂಗ್ (ಭಾರತ, 23 ವರ್ಷ).. 2022ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ವೇಗದ ಬೌಲರ್ ಅರ್ಷ್‌ದೀಪ್ ಸಿಂಗ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಪರ ಇದುವರೆಗೂ ಉತ್ತಮ ಪ್ರದರ್ಶನ ನೀಡುತ್ತಿರುವ ಅರ್ಷದೀಪ್ ಸಿಂಗ್ ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಮತ್ತು ಹಳೆಯ ಚೆಂಡಿನಲ್ಲಿ ನಿಖರವಾದ ಯಾರ್ಕರ್‌ಗಳನ್ನು ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅರ್ಷದೀಪ್ ಇದುವರೆಗೆ ಟೀಂ ಇಂಡಿಯಾ ಪರ ಒಟ್ಟು 13 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 19.78 ರ ಸರಾಸರಿಯಲ್ಲಿ 19 ವಿಕೆಟ್ಗಳನ್ನು ಪಡೆದಿದ್ದಾರೆ.