- Kannada News Photo gallery Cricket photos Trinbago Knight Riders Name Nicholas Pooran as New Captain
CPL 2025: ನೂತನ ಸೀಸನ್ ಆರಂಭಕ್ಕೂ ಮುನ್ನ ನಾಯಕನನ್ನು ಬದಲಿಸಿದ ನೈಟ್ ರೈಡರ್ಸ್
CPL 2025: ಆಗಸ್ಟ್ 14 ರಂದು ಆರಂಭವಾಗುವ CPL 2025ರಲ್ಲಿ, ಶಾರುಖ್ ಖಾನ್ ಮಾಲೀಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ತಮ್ಮ ನಾಯಕ ಕೀರನ್ ಪೊಲಾರ್ಡ್ ಅವರನ್ನು ಬದಲಿಸಿ ನಿಕೋಲಸ್ ಪೂರನ್ ಅವರನ್ನು ನೂತನ ನಾಯಕರನ್ನಾಗಿ ನೇಮಕ ಮಾಡಿದೆ. ಪೂರನ್ ಅವರು T20 ಕ್ರಿಕೆಟ್‌ನಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್ ಆಗಿದ್ದು, IPL ಮತ್ತು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿಯೂ ನಾಯಕತ್ವ ವಹಿಸಿದ ಅನುಭವ ಹೊಂದಿದ್ದಾರೆ.
Updated on: Aug 14, 2025 | 10:40 PM

ಆಗಸ್ಟ್ 14 ರಂದು ವೆಸ್ಟ್ ಇಂಡೀಸ್‌ನಲ್ಲಿ (ಆಗಸ್ಟ್ 15 ರ ಬೆಳಿಗ್ಗೆ ಭಾರತದಲ್ಲಿ) ಪ್ರಾರಂಭವಾಗುವ ಸಿಪಿಎಲ್ 2025 ಸೀಸನ್ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಶಾರುಖ್ ಖಾನ್ ಒಡೆತನದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತನ್ನ ತಂಡದ ನಾಯಕನನ್ನು ಬದಲಿಸಿದೆ. ನಾಲ್ಕು ಬಾರಿ ಸಿಪಿಎಲ್ ಚಾಂಪಿಯನ್ ಟ್ರಿನ್‌ಬಾಗೊ 6 ಸೀಸನ್‌ಗಳ ನಂತರ ನಾಯಕತ್ವವನ್ನು ಬದಲಾಯಿಸಿದೆ.

ಟಿ20 ಸ್ವರೂಪದಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ನಿಕೋಲಸ್ ಪೂರನ್ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿದೆ. ವಾಸ್ತವವಾಗಿ 2019 ರಿಂದ ಈ ತಂಡದ ನಾಯಕರಾಗಿದ್ದ ಮತ್ತು 2020 ರಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದ ಅನುಭವಿ ಕೆರಿಬಿಯನ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಬದಲಿಗೆ ಪೂರನ್ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

29 ವರ್ಷದ ಎಡಗೈ ವಿಂಡೀಸ್ ಬ್ಯಾಟ್ಸ್‌ಮನ್ ಪೂರನ್ ಕೆಲವು ತಿಂಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಇದರಿಂದಾಗಿ ಅವರು ತಮ್ಮ ಪೂರ್ಣ ಸಮಯವನ್ನು ಫ್ರಾಂಚೈಸಿ ಕ್ರಿಕೆಟ್‌ಗೆ ಮೀಸಲಿಡಬಹುದು. ಇದಕ್ಕಾಗಿ ಅವರು ಈಗ ಟಿಕೆಆರ್‌ನ ನಾಯಕತ್ವದ ರೂಪದಲ್ಲಿ ಪ್ರತಿಫಲವನ್ನು ಪಡೆದಿದ್ದಾರೆ.

ಪೂರನ್ ಟಿ20 ಲೀಗ್‌ಗಳಲ್ಲಿ ನಾಯಕತ್ವದ ಅನುಭವವನ್ನೂ ಹೊಂದಿರುವ ಪೂರನ್, ಈಗಾಗಲೇ ಕೆಲವು ಐಪಿಎಲ್ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕತ್ವ ವಹಿಸಿದ್ದಾರೆ. ಹಾಗೆಯೇ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ, ಅವರು ಎಂಐ ನ್ಯೂಯಾರ್ಕ್ (ಮುಂಬೈ ಇಂಡಿಯನ್ಸ್ ಫ್ರಾಂಚೈಸಿ) ನ ನಾಯಕರಾಗಿದ್ದು, ಈ ಸೀಸನ್‌ನಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದಾರೆ.

ವಿಶೇಷವೆಂದರೆ ಪೂರನ್ ಈ ಫ್ರಾಂಚೈಸಿಯೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2013 ರಲ್ಲಿ ಸಿಪಿಎಲ್‌ನ ಮೊದಲ ಸೀಸನ್‌ನಲ್ಲಿ, ಅವರು ಟ್ರಿನ್‌ಬಾಗೊ ಪರ ಪಾದಾರ್ಪಣೆ ಮಾಡಿದರು. ಆಗ ಅವರಿಗೆ 17 ವರ್ಷ ವಯಸ್ಸಾಗಿತ್ತು ಆದರೆ 2 ಸೀಸನ್‌ಗಳ ನಂತರ, ಅವರು 2016 ರಿಂದ ಬಾರ್ಬಡೋಸ್ ರಾಯಲ್ಸ್ ಪರ ಆಡಲು ಪ್ರಾರಂಭಿಸಿದರು.

ಅಲ್ಲಿ 3 ಸೀಸನ್‌ಗಳನ್ನು ಆಡಿದ ನಂತರ, ಪೂರನ್ 2019 ರಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವನ್ನು ಸೇರಿಕೊಂಡರು. ಈ ತಂಡದ ಪರ 3 ಸೀಸನ್‌ಗಳನ್ನು ಅಡಿದ್ದ ಪೂರನ್ 2022 ರಲ್ಲಿ ಟಿಕೆಆರ್ ತಂಡವನ್ನು ಸೇರಿಕೊಂಡರು. ಸಿಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಪೂರನ್ ಆಡಿರುವ 114 ಪಂದ್ಯಗಳಲ್ಲಿ 3 ವಿಭಿನ್ನ ತಂಡಗಳ ಪರ 28 ಸರಾಸರಿ ಮತ್ತು 152 ಸ್ಟ್ರೈಕ್ ರೇಟ್‌ನಲ್ಲಿ 2447 ರನ್ ಗಳಿಸಿದ್ದಾರೆ.




