INDW vs SLW: 59 ರನ್​ಗೆ ಲಂಕಾ ಕಟ್ಟಿ ಹಾಕಿದ ಶಫಾಲಿ ಪಡೆ: ಅಂಡರ್-19 ವಿಶ್ವಕಪ್​ನಲ್ಲಿ ಭಾರತೀಯ ಮಹಿಳೆಯರ ಭರ್ಜರಿ ಕಮ್​ಬ್ಯಾಕ್

| Updated By: Vinay Bhat

Updated on: Jan 23, 2023 | 9:06 AM

India vs Sri Lanka U19 Women’s T20 World Cup: ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್​ನಲ್ಲಿ ನಡೆದ ಪಂದ್ಯದಲ್ಲಿ ಶಫಾಲಿ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕಾ ಹೀನಾಯ ಸೋಲು ಕಂಡಿತು. ಈ ಗೆಲುವಿನ ಮೂಲಕ ಭಾರತ ಸೂಪರ್ 6 ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

1 / 9
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ವನಿತಾ ತಂಡ ಗುಂಪು ಹಂತದ ಎಲ್ಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಸೂಪರ್ 6 ಹಂತಕ್ಕೆ ತೇರ್ಗಡೆ ಆಗಿತ್ತು. ಆದರೆ, ಸೂಪರ್ ಸಿಕ್ಸ್​ನ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ಮಹಿಳೆಯರ ವಿರುದ್ಧ ಸೋಲು ಕಂಡು ಹಿನ್ನಡೆ ಅನುಭವಿಸಿತು.

2 / 9
ಇದೀಗ ಶ್ರೀಲಂಕಾ ವಿರುದ್ಧ ಆಡಿದ ದ್ವಿತೀಯ ಪಂದ್ಯದಲ್ಲಿ ಬೊಂಬಾಟ್ ಕಮ್​ಬ್ಯಾಕ್ ಮಾಡಿರುವ ಭಾರತ ಮಹಿಳಾ ತಂಡ 7 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿದೆ.

3 / 9
ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್​ನಲ್ಲಿ ನಡೆದ ಪಂದ್ಯದಲ್ಲಿ ಶಫಾಲಿ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕಾ ಹೀನಾಯ ಸೋಲು ಕಂಡಿತು. ಈ ಗೆಲುವಿನ ಮೂಲಕ ಭಾರತ ಸೂಪರ್ 6 ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

4 / 9
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಂಕಾ ಅರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಟೈಟಾಸ್ ಸಾಧು ಅವರ ಮೊದಲ ಓವರ್​ನ ಮೊದಲ ಎಸೆತದಲ್ಲೇ ನೆಥ್ಮಿ ಸೇನರತ್ನೆ ಔಟಾದರು.

5 / 9
ಇನ್ನಿಂಗ್ಸ್​ನ ದ್ವಿತೀಯ ಓವರ್​ನಲ್ಲಿ ಸುಮುದು ನಿಸಂಸಲ(2) ನಿರ್ಗಮಿಸಿದರು. ತಂಡದ ಪರ ನಾಯಕಿ ವಿಶ್ಮಿ ಗುಣರತ್ನೆ 28 ಎಸೆತಗಳಲ್ಲಿ 25 ರನ್ ಗಳಿಸಿದ್ದೇ ಹೆಚ್ಚು. ಉಳಿದ ಬ್ಯಾಟರ್​​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ.

6 / 9
ಶ್ರೀಲಂಕಾ ಅಂಡರ್-19 ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 59 ರನ್​ಗಳನ್ನಷ್ಟೆ ಕಲೆಹಾಕಿತು. ಭಾರತ ಪರ ಪಾರ್ಶವಿ ಚೋಪ್ರಾ 4 ಓವರ್​ನಲ್ಲಿ 1 ಮೇಡನ್ ಹಾಗೂ ಕೇವಲ 5 ರನ್ ನೀಡಿ 4 ವಿಕೆಟ್ ಕಿತ್ತರು. ಮನ್ನತ್ ಕಶ್ಯಪ್ 2, ಟೈಟಾಸ್ ಸಾಧು ಹಾಗೂ ಅರ್ಚನಾ ದೇವಿ ತಲಾ 1 ವಿಕೆಟ್ ಪಡೆದರು.

7 / 9
ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ 3 ವಿಕೆಟ್ ಕಳೆದುಕೊಂಡಿತಾದರೂ ತಂಡಕ್ಕೆ ಯಾವುದೇ ಹಿನ್ನಡೆ ಆಗಲಿಲ್ಲ. ನಾಯಕಿ ಶಫಾಲಿ ವರ್ಮಾ 15 ರನ್​ಗೆ ಔಟಾದರೆ, ಶ್ವೇತಾ ಸೆಹ್ರಾವತ್ 13 ರನ್ ಗಳಿಸಿದರು.

8 / 9
ರಿಚ್ಚಾ ಘೋಷ್ 4 ರನ್​ಗೆ ನಿರ್ಗಮಿಸಿದರು. ಸೌಮ್ಯ ತಿವಾರಿ 15 ಎಸೆತಗಳಲ್ಲಿ ಅಜೇಯ 28 ರನ್ ಕಲೆಹಾಕಿ ವಿನ್ನಿಂಗ್ ಶಾಟ್ ಹೊಡೆದರು.

9 / 9
ಭಾರತ ಮಹಿಳಾ ತಂಡ ಕೇವಲ 7.2 ಓವರ್​​ಗಳಲ್ಲೇ 3 ವಿಕೆಟ್ ನಷ್ಟಕ್ಕೆ 60 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಲಂಕಾ ಪರ ದೇವ್​ಮಿ ವಿಹಂಗಾ 3 ವಿಕೆಟ್ ಪಡೆದರು.

Published On - 9:06 am, Mon, 23 January 23