16 ಸಿಕ್ಸರ್, 4 ಫೋರ್: ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್

| Updated By: ಝಾಹಿರ್ ಯೂಸುಫ್

Updated on: Sep 10, 2021 | 9:28 PM

USA cricketer Jaskaran Malhotra: ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟ್ಸ್​ಮನ್ ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಓವರ್​ನಲ್ಲಿ 6 ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

1 / 5
ಭಾರತೀಯ ಮೂಲದ ಅಮೆರಿಕ ಕ್ರಿಕೆಟಿಗ ಜಸ್ಕರನ್ ಮಲ್ಹೋತ್ರಾ  (Jaskaran Malhotra) ಏಕದಿನ  ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.  ಪಪುವಾ ನ್ಯೂ ಗಿನಿಯಾ (Papua New Guinea) ವಿರುದ್ದ ನಡೆದ ಅಂತಾರಾಷ್ಟ್ರೀಯ ಪಂದ್ಯದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಈ ಮೂಲಕ ಹರ್ಷಲ್ ಗಿಬ್ಸ್ ನಂತರ ಏಕದಿನ ಕ್ರಿಕೆಟ್​ನಲ್ಲಿ ಒಂದು ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

2 / 5
ಅಮೆರಿಕ-ಪಪುವಾ ನ್ಯೂ ಗಿನಿಯಾ ನಡುವಣ 2ನೇ ಏಕದಿನ ಪಂದ್ಯದಲ್ಲಿ ಜಸ್ಕರನ್​ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಮೊದಲ ಇನಿಂಗ್ಸ್​ನ 50ನೇ ಓವರ್  ಎಸೆದ ಗೌಡಿ ಟೋಕಾರ ಪ್ರತಿಯೊಂದು ಎಸೆತಗಳನ್ನು ಸಿಕ್ಸರ್​ಗೆ ಅಟ್ಟಿ ಸಿಕ್ಸರ್ ಸರದಾರ ಎನಿಸಿಕೊಂಡರು. ಒಟ್ಟು 124 ಎಸೆತಗಳನ್ನು ಎದುರಿಸಿ ಸ್ಪೋಟಕ ಇನಿಂಗ್ಸ್ ಆಡಿದ  ಜಸ್ಕರನ್  16 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ ಅಜೇಯ 173 ರನ್ ಬಾರಿಸಿದರು. ಅಂದರೆ ಫೋರ್-ಸಿಕ್ಸ್​​ಗಳ ಮೂಲಕ 20 ಎಸೆತಗಳಲ್ಲಿ ಅವರು 112 ರನ್ ಚಚ್ಚಿದ್ದರು.

3 / 5
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಏಕದಿನ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದರು. 2007 ರಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ನಡೆದ ಏಕದಿನ ವಿಶ್ವಕಪ್‌ನಲ್ಲಿ ಗಿಬ್ಸ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಹಾಗೆಯೇ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟ್ಸ್​ಮನ್ ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಓವರ್​ನಲ್ಲಿ 6 ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಹಾಗೆಯೇ ವೆಸ್ಟ್ ಇಂಡೀಸ್ ನ ಕೀರನ್ ಪೊಲಾರ್ಡ್ ಶ್ರೀಲಂಕಾ ವಿರುದ್ಧದ ಟಿ20 ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದ್ದರು. ಇದೀಗ ಸಿಕ್ಸರ್ ಸರದಾರರ ಪಟ್ಟಿಗೆ ಜಸ್ಕರನ್ ಮಲ್ಹೋತ್ರಾ ಸೇರ್ಪಡೆಯಾಗಿದ್ದಾರೆ.

4 / 5
ಅಷ್ಟೇ ಅಲ್ಲದೆ ಯುಎಸ್​ಎ (ಅಮೆರಿಕ) ಪರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೂಡಿಬಂದ ಮೊದಲ ಶತಕ ಕೂಡ ಇದಾಗಿದೆ. ಈ ಮೂಲಕ ಅಮೆರಿಕ ಪರ ಚೊಚ್ಚಲ ಒನ್​ಡೆ ಸೆಂಚುರಿ ಬಾರಿಸಿದ ದಾಖಲೆ ಕೂಡ  ಜಸ್ಕರನ್ ಮಲ್ಹೋತ್ರಾ ಪಾಲಾಗಿದೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ರನ್ ಬಾರಿಸಿದ ವಿಶ್ವ ದಾಖಲೆಯನ್ನು ಮಲ್ಹೋತ್ರಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು. ಇದೀಗ 5ನೇ ಕ್ರಮಾಂಕದಲ್ಲಿ 173 ರನ್ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ ಜಸ್ಕರನ್ ಮಲ್ಹೋತ್ರಾ.

5 / 5
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ ತಂಡ 271 ರನ್​ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಪಪುವಾ ತಂಡ 137 ರನ್​ಗೆ ಆಲೌಟ್ ಆಗುವ ಮೂಲಕ 134 ರನ್​ಗಳಿಂದ ಸೋಲನುಭವಿಸಿತು.

Published On - 3:02 pm, Fri, 10 September 21