
ಟಿ20 ಕ್ರಿಕೆಟ್ನ ನ್ಯೂ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾರಿಗೂ ಸಾಧ್ಯವಾಗದಂತಹ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 237.31ರ ಸ್ಟ್ರೈಕ್ ರೇಟ್ನಲ್ಲಿ ಆರ್ಭಟಿಸುವ ಮೂಲಕ. ಈ ಆರ್ಭಟದೊಂದಿಗೆ ವೈಭವ್ ಹೊಸ ಇತಿಹಾಸ ಬರೆದಿದ್ದಾರೆ. (PC: IPL)

ಮುಲ್ಲನ್ಪುರ್ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 96 ರನ್ ಬಾರಿಸಿದ್ದರು. ಈ 96 ರನ್ಗಳೊಂದಿಗೆ ವೈಭವ್ ಐಪಿಎಲ್ನಲ್ಲಿ 700 ರನ್ಗಳನ್ನು ಪೂರೈಸಿದ್ದಾರೆ. (PC: IPL)

ಈ 700 ರನ್ಗಳೊಂದಿಗೆ ಯುವ ದಾಂಡಿಗ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಟಿ20 ಟೂರ್ನಿಯಲ್ಲಿ ಬ್ಯಾಟರ್ರೊಬ್ಬರು 200+ ಸ್ಟ್ರೈಕ್ ರೇಟ್ನಲ್ಲಿ 700+ ರನ್ ಕಲೆಹಾಕಿರುವುದು ಇದೇ ಮೊದಲು. (PC: IPL)

ಇದಕ್ಕೂ ಮುನ್ನ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ನಲ್ಲಿ, ಅತೀ ಹೆಚ್ಚು ರನ್ ಕಲೆಹಾಕಿದ ಭರ್ಜರಿ ದಾಖಲೆ ಸೌತ್ ಆಫ್ರಿಕಾದ ರೈಲಿ ರೊಸ್ಸೊವ್ ಹೆಸರಿನಲ್ಲಿತ್ತು. 2022ರ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ರೊಸ್ಸೊವ್ 192.28 ಸ್ಟ್ರೈಕ್ ರೇಟ್ನಲ್ಲಿ 623 ರನ್ಗಳಿಸಿದ್ದು ಟಿ20 ಕ್ರಿಕೆಟ್ನ ಸರ್ವಶ್ರೇಷ್ಠ ದಾಖಲೆಯಾಗಿತ್ತು. (PC: thecricketer)

ಆದರೆ ಇದೀಗ 15 ವರ್ಷದ ವೈಭವ್ ಸೂರ್ಯವಂಶಿ 237.31ರ ಸ್ಟ್ರೈಕ್ ರೇಟ್ನಲ್ಲಿ ಬರೋಬ್ಬರಿ 776 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಟೂರ್ನಿ ಇತಿಹಾಸದಲ್ಲೇ 200+ ಸ್ಟ್ರೈಕ್ ರೇಟ್ನಲ್ಲಿ 700+ ರನ್ ಕಲೆಹಾಕಿದ ವಿಶ್ವದ ಏಕೈಕ ಬ್ಯಾಟರ್ ಎಂಬ ನ್ಯೂ ವರ್ಲ್ಡ್ ರೆಕಾರ್ಡ್ ಅನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. (PC: IPL)