ವೀರೇಂದ್ರ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ವೈಭವ್ ಸೂರ್ಯವಂಶಿ

Updated on: Sep 11, 2026 | 9:31 PM

ಭಾರತ-ಅಫ್ಘಾನಿಸ್ತಾನ T20 ಸರಣಿಗೆ 15ರ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಈ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕರೆ, ಅವರು ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ T20 ಸಿಕ್ಸರ್ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ. ವೈಭವ್ ಈಗಾಗಲೇ ತಮ್ಮ 40 T20 ಪಂದ್ಯಗಳಲ್ಲಿ 148 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಯುವ ಪ್ರತಿಭೆಯ ಮೇಲೆ ಕ್ರಿಕೆಟ್ ಜಗತ್ತಿನ ಕಣ್ಣು ನೆಟ್ಟಿದೆ.

1 / 5
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 13 ರಂದು ಆರಂಭವಾಗಲಿದೆ. ಈ ಸರಣಿಯ ಎಲ್ಲಾ ಪಂದ್ಯಗಳು ನವದೆಹಲಿಯಲ್ಲಿ ನಡೆಯಲಿವೆ. ಈ ಸರಣಿಗಾಗಿ 15 ವರ್ಷದ ವೈಭವ್ ಸೂರ್ಯವಂಶಿಯನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲಿರಲಿದೆ. ಆದಾಗ್ಯೂ ವೈಭವ್​ಗೆ ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ(PC-PTI).

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 13 ರಂದು ಆರಂಭವಾಗಲಿದೆ. ಈ ಸರಣಿಯ ಎಲ್ಲಾ ಪಂದ್ಯಗಳು ನವದೆಹಲಿಯಲ್ಲಿ ನಡೆಯಲಿವೆ. ಈ ಸರಣಿಗಾಗಿ 15 ವರ್ಷದ ವೈಭವ್ ಸೂರ್ಯವಂಶಿಯನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲಿರಲಿದೆ. ಆದಾಗ್ಯೂ ವೈಭವ್​ಗೆ ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ(PC-PTI).

2 / 5

ಒಂದು ವೇಳೆ ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಆಡುವ ಅವಕಾಶ ಪಡೆದರೆ, ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ದಾಖಲೆ ಮುರಿಯಲಿದ್ದಾರೆ. ಆದಾಗ್ಯೂ ಸೂರ್ಯವಂಶಿ ತವರು ನೆಲದಲ್ಲಿ ಇನ್ನೂ ಟಿ20ಪಂದ್ಯವನ್ನು ಆಡಿಲ್ಲ. ಇದುವರೆಗೆ ಆಡಿರುವ ಆರು ಟಿ20 ಪಂದ್ಯಗಳನ್ನು ವೈಭವ್ ವಿದೇಶ ನೆಲದಲ್ಲಿ ಆಡಿದ್ದಾರೆ(PC-PTI).

3 / 5

ಈ 6 ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಇದುವರೆಗೆ ಒಟ್ಟು 14 ಸಿಕ್ಸರ್‌ಗಳನ್ನು ಸಹ ಹೊಡೆದಿದ್ದಾರೆ. ಏತನ್ಮಧ್ಯೆ, ಸೆಹ್ವಾಗ್ ಭಾರತ ಪರ 19 ಟಿ20 ಪಂದ್ಯಗಳನ್ನು ಆಡಿದ್ದು, 21.88 ಸರಾಸರಿ ಮತ್ತು 145.38 ಸ್ಟ್ರೈಕ್ ರೇಟ್‌ನಲ್ಲಿ 394 ರನ್ ಗಳಿಸಿದ್ದಾರೆ. ಇದರಲ್ಲಿ 16 ಸಿಕ್ಸರ್‌ಗಳು ಸೇರಿವೆ. ಈ ಸರಣಿಯಲ್ಲಿ ವೈಭವ್, ಮೂರು ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ಸೆಹ್ವಾಗ್ ಅವರನ್ನು ಹಿಂದಿಕ್ಕಲ್ಲಿದ್ದಾರೆ(PC-PTI).

4 / 5

ಇನ್ನು ಭಾರತದ ಪರ ಅತ್ಯಧಿಕ ಸಿಕ್ಸರ್​ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದು, ಇಲ್ಲಿಯವರೆಗೆ 205 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸೂರ್ಯಕುಮಾರ್ ಯಾದವ್ 179 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ 126 ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 124 ಸಿಕ್ಸರ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ 104 ಸಿಕ್ಸರ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ(PC-PTI).

5 / 5

ಹಾಗೆಯೇ ಐಪಿಎಲ್​ನಲ್ಲೂ ಅಬ್ಬರಿಸಿರುವ ಸೂರ್ಯವಂಶಿ ಐಪಿಎಲ್ 2026 ರಲ್ಲಿ ದಾಖಲೆಯ 72 ಸಿಕ್ಸರ್‌ಗಳನ್ನು ಬಾರಿಸಿದ್ದರು. ತಮ್ಮ ಟಿ20 ವೃತ್ತಿಜೀವನದಲ್ಲಿ ಇದುವರೆಗೆ ಕೇವಲ 40 ಪಂದ್ಯಗಳನ್ನಾಡಿರುವ ವೈಭವ್ 148 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮತ್ತೊಂದೆಡೆ ವೀರೇಂದ್ರ ಸೆಹ್ವಾಗ್ ತಮ್ಮ ಟಿ20 ವೃತ್ತಿಜೀವನದಲ್ಲಿ ಒಟ್ಟು 159 ಪಂದ್ಯಗಳನ್ನು ಆಡಿದ್ದು,147 ಸಿಕ್ಸರ್‌ಗಳನ್ನು ಬಾರಿಸಿದ್ದರು(PC-PTI).

Published On - 9:31 pm, Fri, 11 September 26

Loading...
Unable to load recommendations.
Follow Us