Vijay Hazare Trophy: 18 ಎಸೆತಗಳಲ್ಲಿ 92 ರನ್! ಚಂಡೀಗಢ ವಿರುದ್ಧ 151 ರನ್ ಚಚ್ಚಿದ ವೆಂಕಟೇಶ್ ಅಯ್ಯರ್
TV9 Web | Updated By: ಪೃಥ್ವಿಶಂಕರ
Updated on:
Dec 12, 2021 | 4:24 PM
Vijay Hazare Trophy: ವೆಂಕಟೇಶ್ ಅಯ್ಯರ್ 113 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ 151 ರನ್ ಗಳಿಸಿದರು. ಇದು ಅವರ ಲಿಸ್ಟ್ ಎ ವೃತ್ತಿಜೀವನದ ನಾಲ್ಕನೇ ಶತಕವಾಗಿದೆ.
1 / 5
ವೆಂಕಟೇಶ್ ಅಯ್ಯರ್ ವಿಜಯ್ ಹಜಾರೆ ಟ್ರೋಫಿ 2021 ರಲ್ಲಿ ಶತಕ ಬಾರಿಸಿದ್ದಾರೆ. ಮಧ್ಯಪ್ರದೇಶದ ಪರವಾಗಿ ಅವರು ಚಂಡೀಗಢ ವಿರುದ್ಧ 151 ರನ್ ಗಳಿಸಿದರು. ಇದರೊಂದಿಗೆ ಎಂಪಿ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 331 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ 113 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ 151 ರನ್ ಗಳಿಸಿದರು. ಇದು ಅವರ ಲಿಸ್ಟ್ ಎ ವೃತ್ತಿಜೀವನದ ನಾಲ್ಕನೇ ಶತಕವಾಗಿದೆ. ಇವರಲ್ಲದೆ, ಈ ಪಂದ್ಯದಲ್ಲಿ ಆದಿತ್ಯ ಶ್ರೀವಾಸ್ತವ ಎಂಪಿ ಪರ 70 ರನ್ ಗಳಿಸಿದ್ದರು. ಕೊನೆಯ ಓವರ್‌ನಲ್ಲಿ ಪುನೀತ್ ಎಂಟು ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 27 ರನ್ ಗಳಿಸಿ ಬಿರುಸಿನ ಆಟವಾಡಿದರು. ಚಂಡೀಗಢ ಪರ ಜಗಜಿತ್ ಸಿಂಗ್ ಸಂಧು ಮೂರು ವಿಕೆಟ್ ಪಡೆದರು. ಸಂದೀಪ್ ಶರ್ಮಾ ಎರಡು ವಿಕೆಟ್ ಪಡೆದರು.
2 / 5
ಮಧ್ಯಪ್ರದೇಶ ಕೇವಲ 56 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅಭಿಷೇಕ್ ಭಂಡಾರಿ (17), ಕುಲದೀಪ್ ಗೇಹಿ (0), ರಜತ್ ಪಾಟಿದಾರ್ (2) ಮತ್ತು ಶುಭಂ ಶರ್ಮಾ (19) ರನ್ ಗಳಿಸಿದ ನಂತರ ಅಗ್ಗವಾಗಿ ಔಟಾಗಿದ್ದರು. ಆದರೆ ನಂತರ ಆದಿತ್ಯ ಮತ್ತು ವೆಂಕಟೇಶ್ ಐದನೇ ವಿಕೆಟ್‌ಗೆ 122 ರನ್ ಸೇರಿಸಿ ತಂಡವನ್ನು ದೊಡ್ಡ ಸ್ಕೋರ್‌ನ ಹಾದಿಗೆ ತಂದರು. ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ ಆದಿತ್ಯ ಔಟಾದರು. ನಂತರ ವೆಂಕಟೇಶ್ ಅವರು ಪಾರ್ಥ ಸಾಹ್ನಿ (24) ಅವರೊಂದಿಗೆ ಆರನೇ ವಿಕೆಟ್‌ಗೆ 85 ರನ್‌ಗಳ ಅಬ್ಬರದ ಜೊತೆಯಾಟ ನಡೆಸಿದರು. ಇನಿಂಗ್ಸ್‌ನ 48ನೇ ಓವರ್‌ನಲ್ಲಿ ಮಧ್ಯಪ್ರದೇಶ 26 ರನ್ ಗಳಿಸಿತು. ಇದರಲ್ಲಿ ದೇವಿಂದರ್ ಸಿಂಗ್ ಎಸೆತಗಳಲ್ಲಿ ವೆಂಕಟೇಶ್ ಅಯ್ಯರ್ ಸತತ ಮೂರು ಸಿಕ್ಸರ್ ಬಾರಿಸಿದರು.
3 / 5
ವೆಂಕಟೇಶ್ ಅಯ್ಯರ್ ಕಳೆದ ಪಂದ್ಯದಲ್ಲಿ ಶತಕ ವಂಚಿತರಾಗಿದ್ದರು ಆದರೆ ಇಂದು ಅವರು ತಮ್ಮ ಕೆಲಸವನ್ನು ಮಾಡಿದ್ದಾರೆ. ಅವರು ತಮ್ಮ ನಾಲ್ಕನೇ ಲಿಸ್ಟ್ ಎ ಶತಕವನ್ನು 87 ಎಸೆತಗಳಲ್ಲಿ ಪೂರ್ಣಗೊಳಿಸಿದರು. ವೆಂಕಟೇಶ್ ಬೌಂಡರಿ ಬಾರಿಸುವ ಮೂಲಕ 100 ರನ್ ಗಡಿ ದಾಟಿದರು. ಇಂದು ಅವರು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಬಿರುಸಿನ ಬ್ಯಾಟಿಂಗ್ ಮಾಡಿ ಚಂಡೀಗಢದ ಬೌಲರ್ಗಳನ್ನು ಚೆನ್ನಾಗಿ ಬೆಂಡೆತ್ತಿದರು. ಈ ಇನ್ನಿಂಗ್ಸ್ ಮೂಲಕ ಮತ್ತೊಮ್ಮೆ ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕದ ಸ್ಥಾನಕ್ಕೆ ನಾನು ಸೂಕ್ತ ಎಂಬುದನ್ನು ಸಾಭೀತು ಮಾಡಿದರು.
4 / 5
ವೆಂಕಟೇಶ್ ಅಯ್ಯರ್ ಇದೀಗ ಸ್ಟ್ರಾಂಗ್ ಫಾರ್ಮ್ ನಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕ ಬಾರಿಸಿದ್ದಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ಈ ಎಲ್ಲಾ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ನಾಲ್ಕು, ಐದು ಮತ್ತು ಆರನೇ ಕ್ರಮಾಂಕದಲ್ಲಿ ಆಡಿದ್ದಾರೆ. ಈ ಮೂಲಕ ಟೀಂ ಇಂಡಿಯಾದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಋತುವಿಗೂ ಮುನ್ನ ವೆಂಕಟೇಶ್ ಅಯ್ಯರ್ ಆರಂಭಿಕರಾಗಿ ಆಡುತ್ತಿದ್ದರು. ಒಮ್ಮೆ ಮಾತ್ರ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ನಂತರ 47ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ವೆಂಕಟೇಶ್ ಅಯ್ಯರ್ ನಾಲ್ಕು ಪಂದ್ಯಗಳಲ್ಲಿ 20 ಸಿಕ್ಸರ್ ಬಾರಿಸಿದ್ದಾರೆ. ಆರು ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.
5 / 5
ವೆಂಕಟೇಶ್ ಅಯ್ಯರ್ ಈ ವರ್ಷದ ಆರಂಭದಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಉತ್ತಮವಾಗಿ ಆಡಿದ್ದರು. ನಂತರ ಅವರು ಎಂಪಿ ಪರ 198 ರನ್‌ಗಳ ಇನಿಂಗ್ಸ್ ಆಡಿದರು. ನಂತರ ಕೆಕೆಆರ್‌ಗಾಗಿ ಐಪಿಎಲ್ 2021 ರ ದ್ವಿತೀಯಾರ್ಧದಲ್ಲಿ, ಅವರು ಆರಂಭಿಕ ಹಂತದಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಇಲ್ಲಿ ಅವರು ಫಿನಿಶರ್ ಆಗಿ ಆಡಿದರು. ಈಗ ಅವರು ಲಿಸ್ಟ್ ಎ (50 ಓವರ್) ಕ್ರಿಕೆಟ್‌ನಲ್ಲಿ ಆಡುತ್ತಿರುವ ರೀತಿಯಲ್ಲಿ, ಅವರು ಭಾರತೀಯ ಏಕದಿನ ತಂಡದಲ್ಲಿಯೂ ಸ್ಥಾನ ಪಡೆಯುವುದು ಖಚಿತವೆಂದು ತೋರುತ್ತದೆ.