Vijay Hazare Trophy: ಪಿಯೂಷ್ ಚಾವ್ಲಾ ಅರ್ಧಶತಕ ವ್ಯರ್ಥ; ಬಲಿಷ್ಠ ಗುಜರಾತ್ ಮಣಿಸಿದ ಹಿಮಾಚಲ ಪ್ರದೇಶ
TV9 Web | Updated By: ಪೃಥ್ವಿಶಂಕರ
Updated on:
Dec 11, 2021 | 10:36 PM
Vijay Hazare Trophy: ಕೇವಲ 50 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡ ಗುಜರಾತ್ ತಂಡದ ಪರ ಪಿಯೂಷ್ ಚಾವ್ಲಾ 61 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡ 65 ರನ್ ಗಳಿಸಿದರು.
1 / 4
ವಿಜಯ್ ಹಜಾರೆ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶವು ಹೆಚ್ಚು ಅನುಭವಿ ಮತ್ತು ಬಲಿಷ್ಠ ಗುಜರಾತ್ ತಂಡವನ್ನು 97 ರನ್‌ಗಳಿಂದ ಸೋಲಿಸಿತು. ಡಿಸೆಂಬರ್ 11ರ ಶನಿವಾರ ಮುಂಬೈನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡದಲ್ಲಿದ್ದ ಇಬ್ಬರು ಆಟಗಾರರು ಅಬ್ಬರಿಸಿದರು. ಈ ಇಬ್ಬರೂ ಆಟಗಾರರು ಮುಖ್ಯವಾಗಿ ಬೌಲರ್‌ಗಳಾಗಿದ್ದು ಬ್ಯಾಟ್‌ನಿಂದಲೂ ಕೊಡುಗೆ ನೀಡುತ್ತಿದ್ದಾರೆ. ಈ ಪಂದ್ಯದಲ್ಲೂ ಇದೇ ರೀತಿಯಾಗಿತ್ತು, ಅಲ್ಲಿ ಇಬ್ಬರೂ ತಮ್ಮ ತಂಡಗಳಿಗೆ ಅರ್ಧ ಶತಕಗಳನ್ನು ಗಳಿಸಿದರು ಮತ್ತು ನಂತರ ವಿಕೆಟ್‌ಗಳನ್ನು ಪಡೆದರು.
2 / 4
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಮತ್ತು ಮಾಜಿ ಮಧ್ಯಮ ವೇಗಿ ರಿಷಿ ಧವನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಗುಜರಾತ್ ಪರ ಆಡುತ್ತಿರುವ ಪಿಯೂಷ್ ಚಾವ್ಲಾ ಮೊದಲ ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ 10 ಓವರ್‌ಗಳಲ್ಲಿ 57 ರನ್ ನೀಡಿ 2 ವಿಕೆಟ್ ಪಡೆದರು. ಇವರಲ್ಲದೆ ತಂಡದ ಪರ ಚಿಂತನ್ ಗಜ 4 ವಿಕೆಟ್ ಪಡೆದರು.
3 / 4
ಹಿಮಾಚಲ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 310 ರನ್‌ಗಳ ಪ್ರಬಲ ಸ್ಕೋರ್ ಮಾಡಿತು. ತಂಡದ ಪರ ಪ್ರಶಾಂತ್ ಚೋಪ್ರಾ (73) ಮತ್ತು ಅಮಿತ್ ಕುಮಾರ್ (72) ಅರ್ಧಶತಕ ಬಾರಿಸಿದರೂ ನಾಯಕ ಧವನ್ ರನ್ ದೋಚಿದರು. ಟೀಂ ಇಂಡಿಯಾ ಪರ 4 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ರಿಷಿ ಧವನ್ ಕೇವಲ 36 ಎಸೆತಗಳಲ್ಲಿ 57 ರನ್ ಗಳಿಸಿದ್ದರು.
4 / 4
ನಂತರ ಪಿಯೂಷ್ ಚಾವ್ಲಾ ಅವರ ಸರದಿ ಬಂದಿತು, ಅವರು ಗುಜರಾತ್‌ನ ಕಳಪೆ ಬ್ಯಾಟಿಂಗ್ ನಂತರ ತನ್ನ ಹೆಗಲ ಮೇಲೆ ರನ್ ಗಳಿಸುವ ಜವಾಬ್ದಾರಿಯನ್ನು ಹೊರಬೇಕಾಯಿತು. ಕೇವಲ 50 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡ ಗುಜರಾತ್ ತಂಡದ ಪರ ಪಿಯೂಷ್ ಚಾವ್ಲಾ 61 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡ 65 ರನ್ ಗಳಿಸಿದರು. ಆದರೆ, ಅವರ ಇನ್ನಿಂಗ್ಸ್ ಕೂಡ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಹಿಮಾಚಲ ಪರ ರಿಷಿ ಧವನ್ 52 ರನ್ ನೀಡಿ 2 ವಿಕೆಟ್ ಕಬಳಿಸಿದರು. ಗುಜರಾತ್ ತಂಡ ಕೇವಲ 213 ರನ್ ಗಳಿಸಲಷ್ಟೇ ಶಕ್ತವಾಗಿ 97 ರನ್ ಗಳಿಂದ ಸೋಲನುಭವಿಸಿತು.