Ruturaj Gaikwad: ಎರಡೇ ದಿನದಲ್ಲಿ ಎರಡನೇ ಶತಕ! ಆಫ್ರಿಕಾ ಪ್ರವಾಸದಲ್ಲಿ ರುತುರಾಜ್​ಗೆ ಸಿಗುತ್ತಾ ಅವಕಾಶ?

| Updated By: ಪೃಥ್ವಿಶಂಕರ

Updated on: Dec 09, 2021 | 9:34 PM

Vijay Hazare Trophy 2021: ಈ ವರ್ಷ ಋತುರಾಜ್‌ಗೆ ತುಂಬಾ ಉತ್ತಮವಾಗಿದೆ. ಅವರು ಐಪಿಎಲ್ 2021 ರಲ್ಲಿ 636 ರನ್ ಗಳಿಸಿದ ಅತ್ಯಧಿಕ ಸ್ಕೋರರ್ ಆಗಿದ್ದರು. ಇದರ ಹೊರತಾಗಿ, ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಹಾರಾಷ್ಟ್ರ ಪರ 259 ರನ್ ಗಳಿಸಿದರು.

1 / 4
ವಿಜಯ್ ಹಜಾರೆ ಟ್ರೋಫಿ ಆರಂಭವಾಗಿದ್ದು, ಈ ಮೂಲಕ ಭಾರತದ ಯುವ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಇಲ್ಲಿಯೂ ತಮ್ಮ ಪ್ರಚಂಡ ಬ್ಯಾಟಿಂಗ್ ಲೈನ್ ಅಪ್ ಮುಂದುವರೆಸಿದ್ದಾರೆ. ಐಪಿಎಲ್ 2021 ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯ ನಂತರ, ರುತುರಾಜ್ ಈ ಪಂದ್ಯಾವಳಿಯಲ್ಲೂ ರನ್ ಮಳೆಯನ್ನು ಪ್ರಾರಂಭಿಸಿದ್ದಾರೆ. ಮಹಾರಾಷ್ಟ್ರ ತಂಡದ ನಾಯಕರಾಗಿರುವ ರುತುರಾಜ್ ಸತತ ಎರಡು ಪಂದ್ಯಗಳಲ್ಲಿ ಎರಡು ಶತಕ ಬಾರಿಸಿದ್ದಾರೆ.

2 / 4
ಐಪಿಎಲ್‌ನಲ್ಲಿ ಎಂಎಸ್ ಧೋನಿ ಅವರ ತಂಡ ಚೆನ್ನೈ ಸೂಪರ್ ಕಿಂಗ್ಸ್‌ ಪರ ವಿಶ್ವಾಸ ಮೂಡಿಸಿರುವ ರುತುರಾಜ್, ಡಿಸೆಂಬರ್ 9 ಗುರುವಾರದಂದು ವಿಜಯ್ ಹಜಾರೆ ಟ್ರೋಫಿಯಲ್ಲಿ ಛತ್ತೀಸ್‌ಗಢ ವಿರುದ್ಧ ತಂಡಕ್ಕಾಗಿ ಅತ್ಯುತ್ತಮ ಶತಕ ಬಾರಿಸಿದರು. ಛತ್ತೀಸ್‌ಗಢ ನೀಡಿದ 276 ರನ್‌ಗಳ ಗುರಿಗೆ ಉತ್ತರವಾಗಿ ಮಹಾರಾಷ್ಟ್ರಕ್ಕೆ ಆರಂಭಿಕರಾದ ರುತುರಾಜ್ 105 ಎಸೆತಗಳಲ್ಲಿ ಶತಕ ಪೂರೈಸಿದರು. ರುತುರಾಜ್ ಸಿಕ್ಸರ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

3 / 4
ಒಂದು ದಿನದ ಹಿಂದೆ, ಈ 24 ವರ್ಷದ ಬ್ಯಾಟ್ಸ್‌ಮನ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲೂ ಶತಕ ಗಳಿಸಿದ್ದರು. ನಂತರ ರುತುರಾಜ್ ಮಧ್ಯಪ್ರದೇಶ ವಿರುದ್ಧ 136 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

4 / 4
ಈ ವರ್ಷ ಋತುರಾಜ್‌ಗೆ ತುಂಬಾ ಉತ್ತಮವಾಗಿದೆ. ಅವರು ಐಪಿಎಲ್ 2021 ರಲ್ಲಿ 636 ರನ್ ಗಳಿಸಿದ ಅತ್ಯಧಿಕ ಸ್ಕೋರರ್ ಆಗಿದ್ದರು. ಇದರ ಹೊರತಾಗಿ, ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಹಾರಾಷ್ಟ್ರ ಪರ 259 ರನ್ ಗಳಿಸಿದರು. ಈ ವರ್ಷ, ರುತುರಾಜ್ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ಪರ ಟಿ20ಗೆ ಪಾದಾರ್ಪಣೆ ಮಾಡಿದರು. ಇದೀಗ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಡೆಯಲಿರುವ ಏಕದಿನ ಸರಣಿಗೆ ತಂಡದ ಆಯ್ಕೆಗೂ ಮುನ್ನ ಇಂತಹ ಪ್ರದರ್ಶನದ ಮೂಲಕ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.