ಕೊಹ್ಲಿಯ ಶತಕಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಾಗಿ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ..! ಫೋಟೋ ನೋಡಿ

Edited By:

Updated on: Jan 18, 2023 | 12:36 PM

ಕೊಹ್ಲಿಯ 71ನೇ ಶತಕಕ್ಕಾಗಿ ಕಾಯುತ್ತಿದ್ದ ಅಮನ್ ಅಗರ್ವಾಲ್ ಎಂಬ ಅಭಿಮಾನಿ, ಕೊಹ್ಲಿ 74ನೇ ಶತಕ ಸಿಡಿಸಿದ ದಿನದಂದೇ ಹಸೆಮಣೆ ಏರಿದ್ದಾರೆ.

1 / 5
ವಿರಾಟ್ ಕೊಹ್ಲಿಯ 71 ನೇ ಶತಕವನ್ನು ಕಣ್ತುಂಬಿಕೊಂಡ ಬಳಿಕವೇ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಬ್ಯಾನರ್ ಹಿಡಿದು ಫೇಮಸ್ ಆಗಿದ್ದ ಕೊಹ್ಲಿಯ ಅಭಿಮಾನಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ.

ವಿರಾಟ್ ಕೊಹ್ಲಿಯ 71 ನೇ ಶತಕವನ್ನು ಕಣ್ತುಂಬಿಕೊಂಡ ಬಳಿಕವೇ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಬ್ಯಾನರ್ ಹಿಡಿದು ಫೇಮಸ್ ಆಗಿದ್ದ ಕೊಹ್ಲಿಯ ಅಭಿಮಾನಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ.

2 / 5

ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 166 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡುವುದರೊಂದಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದ 74ನೇ ಸೆಂಚುರಿ ಪೂರ್ಣಗೊಳಿಸಿದರು.

3 / 5

ಇದರೊಂದಿಗೆ ಕೊಹ್ಲಿಯ 71ನೇ ಶತಕಕ್ಕಾಗಿ ಕಾಯುತ್ತಿದ್ದ ಅಮನ್ ಅಗರ್ವಾಲ್ ಎಂಬ ಅಭಿಮಾನಿ, ಕೊಹ್ಲಿ 74ನೇ ಶತಕ ಸಿಡಿಸಿದ ದಿನದಂದೇ ಹಸೆಮಣೆ ಏರಿದ್ದಾರೆ. ಕೊಹ್ಲಿಯ ಶತಕದ ಸಂಭ್ರಮದ ಫೋಟೋದೊಂದಿಗೆ ತಾನು ಮದುಮಗನಾಗಿರುವ ಫೋಟೋವನ್ನು ಅಮನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

4 / 5

ಇತ್ತೀಚೆಗೆ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ವಿರಾಟ್, 2019 ರ ನಂತರ ಇನ್ನೊಂದು ಶತಕ ಸಿಡಿಸಲು ಬರೋಬ್ಬರಿ 3 ವರ್ಷ ಕಾಯಬೇಕಾಯಿತು.

5 / 5

2019 ರ ನವೆಂಬರ್‌ನಲ್ಲಿ ಕೋಲ್ಕತ್ತಾದಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಕೊಹ್ಲಿ ಅವರ 70 ನೇ ಶತಕ ಸಿಡಿಸಿದ್ದರು. ಆ ನಂತರ ಕೊಹ್ಲಿಯ 71 ನೇ ಶತಕಕ್ಕಾಗಿ ಕಾಯುತ್ತಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಂತಿಮವಾಗಿ 2022 ರ ಏಷ್ಯಾಕಪ್ ಟಿ20 ಪಂದ್ಯದಲ್ಲಿ ಕೊಹ್ಲಿ ಬ್ಯಾಟ್ ಆಗಸ ನೋಡುವುದನ್ನು ಕಣ್ತುಂಬಿಕೊಂಡಿದ್ದರು.

TV9 Web

TV9 Kannada

Read More
Loading...
Unable to load recommendations.
Follow Us