ಶಕೀಬ್ ಅಲ್ ಹಸನ್​ಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

|

Updated on: Oct 01, 2024 | 5:58 PM

Shakib al Hasan - Virat Kohli: ಬಾಂಗ್ಲಾದೇಶ್ ತಂಡದ ಶ್ರೇಷ್ಠ ಆಲ್​ರೌಂಡರ್ ಶಕೀಬ್ ಅಲ್ ಹಸನ್​ ಭಾರತದಲ್ಲಿ ತಮ್ಮ ಕೊನೆಯ ಪಂದ್ಯವಾಡಿದ್ದಾರೆ. ಕಾನ್ಪುರ ಟೆಸ್ಟ್ ಪಂದ್ಯದೊಂದಿಗೆ ವಿದೇಶಿ ಸರಣಿ ಮುಗಿಸಿರುವ ಶಕೀಬ್ ಅಲ್ ಹಸನ್​ಗೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿ ಬೀಳ್ಕೊಟ್ಟಿದ್ದಾರೆ.

1 / 5
ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ವಿಶೇಷ ಎಂದರೆ ಈ ಸರಣಿಯು ಬಾಂಗ್ಲಾದೇಶ್ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ ಅವರ ಕೊನೆಯ ವಿದೇಶಿ ಟೆಸ್ಟ್ ಸರಣಿ.

2 / 5
ಅಂದರೆ ಈಗಾಗಲೇ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಘೋಷಿಸಿರುವ ಶಕೀಬ್ ಅಲ್ ಹಸನ್ ಇನ್ಮುಂದೆ ಯಾವುದೇ ವಿದೇಶಿ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದ ಮೂಲಕ ರೆಡ್ ಬಾಲ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ.

3 / 5
ಹೀಗಾಗಿಯೇ ಭಾರತದ ವಿರುದ್ಧದ ಟೆಸ್ಟ್ ಸರಣಿಯು ಶಕೀಬ್ ಅಲ್ ಹಸನ್ ಪಾಲಿಗೆ ತುಂಬಾ ಮಹತ್ವದ್ದಾಗಿತ್ತು. ಇದಾಗ್ಯೂ ಈ ಸರಣಿಯಲ್ಲಿ ಬಾಂಗ್ಲಾದೇಶ್​ ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಸೋಲಿನೊಂದಿಗೆ ವಿದೇಶಿ ಸರಣಿ ಕೊನೆಗೊಳಿಸುತ್ತಿರುವ ಶಕೀಬ್​ಗೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್​ ಅನ್ನು ಗಿಫ್ಟ್ ಮಾಡಿದ್ದಾರೆ.

4 / 5
ಪಂದ್ಯದ ಬಳಿಕ ಶಕೀಬ್ ಅಲ್ ಹಸನ್ ಜೊತೆ ಕುಶಲೋಪರಿ ನಡೆಸಿದ ವಿರಾಟ್ ಕೊಹ್ಲಿ ತಮ್ಮ ವಿಶೇಷ ಬ್ಯಾಟ್​ ಅನ್ನು ಉಡುಗೊರೆಯಾಗಿ ನೀಡಿದರು. ಈ ಮೂಲಕ ಬಾಂಗ್ಲಾದೇಶ್ ತಂಡದ ಶ್ರೇಷ್ಠ ಆಲ್​ರೌಂಡರ್​ನನ್ನು ಉಡುಗೊರೆಯೊಂದಿಗೆ ಕಿಂಗ್ ಕೊಹ್ಲಿ ಬೀಳ್ಕೊಟ್ಟರು.

5 / 5
ಬಾಂಗ್ಲಾದೇಶ್ ಪರ ಈವರೆಗೆ 71 ಟೆಸ್ಟ್ ಪಂದ್ಯಗಳನ್ನಾಡಿರುವ ಶಕೀಬ್ ಅಲ್ ಹಸನ್ ಒಟ್ಟು 4609 ರನ್ ಕಲೆಹಾಕಿದ್ದಾರೆ. ಹಾಗೆಯೇ 121 ಟೆಸ್ಟ್​ ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು 15675 ಎಸೆತಗಳಲ್ಲಿ 246	 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದೀಗ ತಮ್ಮ 37ನೇ ವಯಸ್ಸಿನಲ್ಲಿ ಶಕೀಬ್ ಅಲ್ ಹಸನ್ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅದರಂತೆ ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ಕೊನೆಯ ಪಂದ್ಯವಾಡುವ ಮೂಲಕ ರೆಡ್ ಬಾಲ್ ಕ್ರಿಕೆಟ್​ಗೆ ಗುಡ್ ಬೈ ಹೇಳಲಿದ್ದಾರೆ.