Virat Kohli: 6,6,6… ಟಿ20 ಕ್ರಿಕೆಟ್ನಲ್ಲಿ ಟ್ರಿಪಲ್ ಸಿಕ್ಸರ್ ಬಾರಿಸಿದ ಕಿಂಗ್ ಕೊಹ್ಲಿ..! ಹೀಗೊಂದು ಕಾಕತಾಳೀಯ
TV9 Web | Updated By: ಪೃಥ್ವಿಶಂಕರ
Updated on:
Sep 09, 2022 | 7:28 PM
Virat Kohli: ನಿನ್ನೆಯ ಶತಕದೊಂದಿಗೆ ವಿರಾಟ್ ಕೊಹ್ಲಿ ಟಿ20 ವೃತ್ತಿಜೀವನದಲ್ಲಿ ಆರನೇ ಶತಕ ದಾಖಲಿಸಿದ್ದಾರೆ. ತಮ್ಮ ಶತಕವನ್ನು ಸಿಕ್ಸರ್‌ನೊಂದಿಗೆ ಪೂರ್ಣಗೊಳಿಸಿದ ಕೊಹ್ಲಿ, ಅದೇ ಸಮಯದಲ್ಲಿ 6 ವರ್ಷಗಳ ನಂತರ ಟಿ20 ಕ್ರಿಕೆಟ್ನಲ್ಲಿ ತಮ್ಮ ಅತ್ಯಧಿಕ ಸ್ಕೋರ್ ಅನ್ನು ಬದಲಾಯಿಸಿದರು.
1 / 5
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ಅವಕಾಶ ಸಿಗುವುದು ಖಚಿತ. ಒಂದು ವೇಳೆ ಕೊಹ್ಲಿ ಈ ಮೂರು ಪಂದ್ಯಗಳಿಂದ ಕೇವಲ 98 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ 11,000 ರನ್ ಗಳಿಸಿದ ದಾಖಲೆ ಬರೆಯಲಿದ್ದಾರೆ.
2 / 5
ವಿರಾಟ್ ಕೊಹ್ಲಿ ಏಷ್ಯಾಕಪ್ 2022 ರಲ್ಲಿ ಭರ್ಜರಿ ಫಾರ್ಮ್ಗೆ ಮರಳಿದ್ದಾರೆ. 3 ವರ್ಷಗಳಿಂದ ಕಾಯುತ್ತಿದ್ದ ಶತಕದ ಆಸೆಯನ್ನು ಪೂರೈಸಿಕೊಂಡ ಕೊಹ್ಲಿ, ಈ ಟೂರ್ನಿಯಲ್ಲಿ 2 ಅರ್ಧ ಶತಕ ಹಾಗೂ 1 ಶತಕ ಸಿಡಿಸಿದ್ದರು. ಇದೀಗ ಆಸ್ಟ್ರೇಲಿಯ ವಿರುದ್ಧ ತನ್ನ ಶಕ್ತಿ ಪ್ರದರ್ಶನಕ್ಕೆ ಕೊಹ್ಲಿ ಸಜ್ಜಾಗಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ವಿಶೇಷ ದಾಖಲೆಯನ್ನೂ ಮಾಡುವ ಹೊಸ್ತಿನಲಿದ್ದಾರೆ.
3 / 5
ವಿರಾಟ್ ಕೊಹ್ಲಿ ಅವರ T20 ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಈಗ 122 ರನ್ ಆಗಿದೆ. ಇದಕ್ಕೂ ಮುನ್ನ 2016ರಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 113 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
4 / 5
ಆಸ್ಟ್ರೇಲಿಯಾ ವಿರುದ್ಧದ ಟಿ20ಯಲ್ಲಿ ಕೊಹ್ಲಿ 59.83 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರೆ, ಅವರ ಸ್ಟ್ರೈಕ್ ರೇಟ್ 146.23 ಆಗಿದೆ.
5 / 5
ಕೊಹ್ಲಿ ತಮ್ಮ ಕೊನೆಯ T20 ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 8, 2020 ರಂದು ಸಿಡ್ನಿಯಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ವಿರಾಟ್ 85 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದ್ದರು.
Published On - 7:28 pm, Fri, 9 September 22