AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಫ್ಟಿ ಮತ್ತು ಫಿಫ್ಟಿ ಪ್ಲಸ್: 2 ದಾಖಲೆಗಳ ಮೇಲೆ ಕೊಹ್ಲಿ ಕಣ್ಣು!

India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿ ಜುಲೈ 14 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದರೆ, ದ್ವಿತೀಯ ಪಂದ್ಯವು ಜುಲೈ 16 ರಂದು ಕಾರ್ಡಿಫ್​ನಲ್ಲಿ ಜರುಗಲಿದೆ. ಹಾಗೆಯೇ ಈ ಸರಣಿಯ ಕೊನೆಯ ಮ್ಯಾಚ್ ಜುಲೈ 19 ರಂದು ಲಾರ್ಡ್ಸ್​ ಮೈದಾನದಲ್ಲಿ ನಡೆಯಲಿದೆ.

ಝಾಹಿರ್ ಯೂಸುಫ್
|

Updated on: Jul 14, 2026 | 2:37 PM

Share
ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿ ಇಂದಿನಿಂದ (ಜುಲೈ 14) ಶುರುವಾಗಲಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯದ ಮೂಲಕ ವಿರಾಟ್ ಕೊಹ್ಲಿ 2 ಭರ್ಜರಿ ದಾಖಲೆಗಳನ್ನು ಬರೆಯಬಹುದು. ಅದು ಕೂಡ ಒಂದೇ ಅರ್ಧಶತಕದೊಂದಿಗೆ. ಹಾಗಿದ್ರೆ ಕೊಹ್ಲಿ ಮುಂದಿರುವ ದಾಖಲೆಗಳಾವುವು ಎಂದು ನೋಡುವುದಾದರೆ... (PC: BCCI)

1 / 5
ಇಂಗ್ಲೆಂಡ್ ವಿರುದ್ಧದ ಏಕದಿನ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ 37 ಪಂದ್ಯಗಳಿಂದ 1,455 ರನ್ ಗಳಿಸಿದ್ದಾರೆ. ಸದ್ಯ 38 ಇನ್ನಿಂಗ್ಸ್‌ಗಳಿಂದ 1,397 ರನ್ ಹೊಂದಿರುವ ಕೊಹ್ಲಿ, ಮೊದಲ ಮ್ಯಾಚ್​ನಲ್ಲಿ 59 ರನ್ ಗಳಿಸಿದರೆ ಸಚಿನ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದ್ದಾರೆ. (PC: BCCI)

2 / 5
ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಬಾರಿ 50 ಪ್ಲಸ್ (ಅರ್ಧಶತಕ ಅಥವಾ ಶತಕ) ರನ್ ಗಳಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಕೊಹ್ಲಿಗೆ ಕೇವಲ ಒಂದು ಅರ್ಧಶತಕದ ಅಗತ್ಯವಿದೆ. ಸದ್ಯ ಈ ದಾಖಲೆ ರಾಹುಲ್ ದ್ರಾವಿಡ್ (25) ಹೆಸರಿನಲ್ಲಿದ್ದು, ಮೊದಲ ಪಂದ್ಯದಲ್ಲಿ ಕೊಹ್ಲಿ 50+ ರನ್ ಕಲೆಹಾಕಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. (PC: BCCI)

3 / 5
ಹಾಗೆಯೇ ಈ ಪಂದ್ಯದಲ್ಲಿ 68 ರನ್ ಬಾರಿಸಿದರೆ ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ (648) ಅಗ್ರಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ (581) ದ್ವಿತೀಯ ಸ್ಥಾನದಲ್ಲಿದ್ದಾರೆ. (PC: BCCI)

4 / 5
ಒಂದು ವೇಳೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್​ನಿಮದ 103 ರನ್​ಗಳ ಭರ್ಜರಿ ಶತಕದ ಇನಿಂಗ್ಸ್ ಮೂಡಿಬಂದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ವಿರುದ್ಧ 1,500 ರನ್‌ಗಳ ಮೈಲಿಗಲ್ಲು ತಲುಪಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. (PC: BCCI)

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ

ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ

RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ

‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?

ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ

ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ

ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ

ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ

ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ

ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ