Virat Kohli: ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿಗೆ ಈಗ ಸಿಗುತ್ತಿರುವ ಸಂಬಳ ಎಷ್ಟು ಗೊತ್ತೇ?

| Updated By: Vinay Bhat

Updated on: Dec 10, 2021 | 8:54 AM

Virat Kohli Remuneration: ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೈಬಿಟ್ಟು ರೋಹಿತ್ ಶರ್ಮಾ ಅವರಿಗೆ ಈ ಜವಾಬ್ದಾರಿ ನೀಡಲಾಗಿದ್ದು ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಇದರ ನಡುವೆ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಅವರ ಈಗಿನ ಸಂಬಳ ಎಷ್ಟು ಎಂದು ಅನೇಕರು ಹುಡುಕಾಡುತ್ತಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

1 / 9
ಭಾರತೀಯ ಕ್ರಿಕೆಟ್ ತಂಡದಲ್ಲಿ ಮಹತ್ದ ಬೆಳವಣಿಗೆಗಳು ನಡೆಯುತ್ತಿದೆ. ಹೊಸ ಕೋಚ್, ನೂತನ ನಾಯಕನನ್ನು ಆಯ್ಕೆ ಮಾಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿದ್ದು ಪ್ರಯೋಗಕ್ಕೆ ಇಳಿದಂತೆ ಕಾಣುತ್ತಿದೆ. ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೈಬಿಟ್ಟು ರೋಹಿತ್ ಶರ್ಮಾ ಅವರಿಗೆ ಈ ಜವಾಬ್ದಾರಿ ನೀಡಲಾಗಿದ್ದು ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

2 / 9
ರೋಹಿತ್, ಕೊಹ್ಲಿ

ರೋಹಿತ್, ಕೊಹ್ಲಿ

3 / 9
ಇದರ ನಡುವೆ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಅವರ ಈಗಿನ ಸಂಬಳ ಎಷ್ಟು ಎಂದು ಅನೇಕರು ಹುಡುಕಾಡುತ್ತಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

4 / 9
ಬಿಸಿಸಿಐ ಜೊತೆಗೆ ವಿರಾಟ್ ಕೊಹ್ಲಿ A+ ಒಪ್ಪಂದವನ್ನು ಹೊಂದಿದ್ದಾರೆ. ಈ ಮೂಲಕ ಅವರು ವಾರ್ಷಿಕವಾಗಿ 7 ಕೋಟಿ ರೂಪಾಯಿ ಮೊತ್ತವನ್ನು ಪಡೆಯುತ್ತಾರೆ. ಹೀಗಾಗಿ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ ಸಂಬಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವಂತೆ.

5 / 9
ಇನ್ನು ಬಿಸಿಸಿಐನಿಂದ ರೋಹಿತ್ ಶರ್ಮಾ ಅವರ ಸ್ಯಾಲರಿಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ. ಕೊಹ್ಲಿ ಮತ್ತು ವೇಗಿ ಜಸ್​ಪ್ರೀತ್ ಬುಮ್ರಾ ಜೊತೆಗೆ A+ ಒಪ್ಪಂದವನ್ನು ಹೊಂದುವ ಮೂಲಕ ರೋಹಿತ್ ಕೂಡ ವಾರ್ಷಿಕವಾಗಿ 7 ಕೋಟಿ ರೂಪಾಯಿ ಮೊತ್ತವನ್ನು ಪಡೆಯುತ್ತಾರೆ. ಹೀಗಾಗಿ ನಾಯಕನಾಗಿ ಯಾವುದೇ ಇತರೆ ಹಣವನ್ನು ಇವರು ಪಡೆಯುವುದಿಲ್ಲ ಎಂದು ಹೇಳಲಾಗಿದೆ.

6 / 9
ವಿರಾಟ್ ಕೊಹ್ಲಿ ಜಾಗದಲ್ಲಿ ಸೀಮಿತ ಓವರ್​ಗಳ ನಾಯಕತ್ವ ಪಡೆದುಕೊಂಡ ಬಗ್ಗೆ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ಕೊಹ್ಲಿ ಈಗಲೂ ನಮ್ಮ ನಾಯಕನಾಗಿದ್ದಾರೆ. ಅವರ ಅನುಭವ, ಬ್ಯಾಟಿಂಗ್ ನಮಗೆ ಅತೀ ಅಗತ್ಯ. ಅದು ಯಾವುದನ್ನೂ ಕಳೆದುಕೊಳ್ಳಲಾರೆವು ಎಂದು ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ.

7 / 9
“ಕೊಹ್ಲಿ ಈಗಲೂ ನಮ್ಮ ನಾಯಕ. ಎಷ್ಟೋ ಸಂದರ್ಭಗಳಲ್ಲಿ ಅವರು ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ತಂಡದಲ್ಲಿ ಅವರ ಉಪಸ್ಥಿತಿ ತುಂಬಾ ಮುಖ್ಯ. ಕೊಹ್ಲಿಯಂತಹ ಆಟಗಾರ ತಂಡಕ್ಕೆ ಯಾವತ್ತೂ ಮುಖ್ಯ” - ರೋಹಿತ್ ಶರ್ಮಾ.

8 / 9
ಇನ್ನು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ಬಗ್ಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, “ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ಪ್ರವಾಸದ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದರು. ಆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಬಿಸಿಸಿಐ ಕೊಹ್ಲಿಗೆ ಮನವಿ ಮಾಡಿತ್ತು. ಆದರೆ, ಕೊಹ್ಲಿ ಇದಕ್ಕೆ ಕಿವಿಗೊಡದೆ ಟಿ20 ಟೀಮ್ನ ನಾಯಕತ್ವ ಬಿಟ್ಟು ಕೆಳಗಿಳಿಯುವ ನಿರ್ಧಾರ ಘೋಷಿಸಿದರು ಎಂದು ಹೇಳಿದ್ದಾರೆ.

9 / 9
ಸೀಮಿತ ಓವರ್​ಗಳ ಎರಡು ಮಾದರಿ ಕ್ರಿಕೆಟ್​ಗೆ ಇಬ್ಬರಿಬ್ಬರು ನಾಯಕರು ಇರುವುದು ಸಮಂಜಸ ಎನಿಸುವುದಿಲ್ಲ. ಟಿ20 ಮತ್ತು ಏಕದಿನಕ್ಕೆ ಎರಡಕ್ಕೂ ಒಬ್ಬರೇ ನಾಯಕರಿರಬೇಕು. ಹೀಗಾಗಿ, ಟಿ20 ಜೊತೆಗೆ ಓಡಿಐ ತಂಡದ ನಾಯಕತ್ವ ಎರಡನ್ನೂ ರೋಹಿತ್ ಶರ್ಮಾ ಅವರೊಬ್ಬರಿಗೇ ನೀಡಬೇಕೆಂದು ಬಿಸಿಸಿಐ ಮತ್ತು ಆಯ್ಕೆಗಾರರ ಸಮಿತಿ ಒಮ್ಮತದಿಂದ ನಿರ್ಧಾರ ತೆಗೆದುಕೊಂಡಿತು ಎಂಬುದು ಗಂಗೂಲಿ ಮಾತು.