- Kannada News Photo gallery Cricket photos Virat Kohli, Rohit Sharma, Shubman Gill and other India Cricket Team Players has left for Dominica
IND vs WI 1st Test: ಮೊದಲ ಟೆಸ್ಟ್ಗೆ ಭಾರತ ಸಜ್ಜು: 5 ದಿನಗಳ ಅಭ್ಯಾಸ ಮುಗಿಸಿ ಡೊಮಿನಿಕಾಗೆ ತೆರಳಿದ ಟೀಮ್ ಇಂಡಿಯಾ
Team India: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಸೇರಿದಂತೆ ಇತರೆ ಭಾರತೀಯ ಪ್ಲೇಯರ್ಸ್ ತಮ್ಮ ಸ್ಟೈಲಿಶ್ ಜೆಟ್-ಬ್ಲ್ಯಾಕ್ ಅಡಿಡಾಸ್ ಪ್ರ್ಯಾಕ್ಟೀಸ್ ಜೆರ್ಸಿಗಳನ್ನು ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಕೊಂಡರು.
Updated on: Jul 08, 2023 | 10:00 AM

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಜುಲೈ 12 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಎರಡು ವಾರಗಳ ಮುಂಚಿತಾಗಿ ಕೆರಿಬಿಯನ್ ನಾಡಿಗೆ ತೆರಳಿದ್ದ ಟೀಮ್ ಇಂಡಿಯಾ ಬಾರ್ಬಡೋಸ್ನಲ್ಲಿ ಅಭ್ಯಾಸ ನಡೆಸುತ್ತಿತ್ತು.

ಇದೀಗ ಟೀಮ್ ಇಂಡಿಯಾ ಆಟಗಾರರು ಅಭ್ಯಾಸವನ್ನು ಮುಗಿಸಿ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಡೊಮಿನಿಕಾಗೆ ತೆರಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತೀಯ ಆಟಗಾರರು ವಿಮಾನ ನಿಲ್ದಾಣದಿಂದ ತೆರಳುತ್ತಿರುವ ಫೋಟೋವನ್ನು ಹಂಚಿಕೊಂಡಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಸೇರಿದಂತೆ ಇತರೆ ಭಾರತೀಯ ಪ್ಲೇಯರ್ಸ್ ತಮ್ಮ ಸ್ಟೈಲಿಶ್ ಜೆಟ್-ಬ್ಲ್ಯಾಕ್ ಅಡಿಡಾಸ್ ಪ್ರ್ಯಾಕ್ಟೀಸ್ ಜೆರ್ಸಿಗಳನ್ನು ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಕೊಂಡರು.

ಬಾರ್ಬಡೋಸ್ನ ಶಿಬಿರದಲ್ಲಿ ಟೀಮ್ ಇಂಡಿಯಾ ಆಟಗಾರರು ಸಾಕಷ್ಟು ಬೆವರು ಹರಿಸಿದ್ದಾರೆ. ವೆಸ್ಟ್ ಇಂಡೀಸ್ ವಾತಾವರಣಕ್ಕೆ ಹೊಂದಿಕೊಳ್ಳುವ ಜೊತೆಗೆ ದ್ರಾವಿಡ್ ನೇತತೃತ್ವದಲ್ಲಿ ದೌರ್ಬಲ್ಯಗಳನ್ನು ಬಗೆಹರಿಸಿದ್ದಾರೆ.

ಟೆಸ್ಟ್ ತಂಡದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ಸ್ಥಾನವನ್ನು ಬಹುತೇಕ ಖಚಿತ ಪಡಿಸಿಕೊಂಡಿದ್ದಾರೆ. ಇವರು ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ 76 ಎಸೆತಗಳಲ್ಲಿ 54 ರನ್ ಗಳಿಸಿದರು. ಇದೀಗ ಮೊದಲ ಟೆಸ್ಟ್ನಲ್ಲಿ ರೋಹಿತ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.

ಜುಲೈ 12 ರಿಂದ 16 ವರೆಗೆ ಮೊದಲ ಟೆಸ್ಟ್ ನಡೆಯಲಿದೆ. ಬಳಿಕ ಜುಲೈ 20ರಿಂದ 24ರ ವರೆಗೆ ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ದ್ವಿತೀಯ ಟೆಸ್ಟ್ ಆಯೋಜಿಸಲಾಗಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ನವದೀಪ್ ಸೈನಿ.

ಮೊದಲ ಟೆಸ್ಟ್ಗೆ ವೆಸ್ಟ್ ಇಂಡೀಸ್ ತಂಡ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್ (ಉಪನಾಯಕ), ಅಲಿಕ್ ಅಥಾನಾಜೆ, ಟಗೆನರೈನ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಕಿರ್ಕೆ ಕೆಮರ್ ರೋಚ್, ಜೋಮೆಲ್ ವಾರಿಕನ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಮರ್ಕ್ರಿ ಜೋಸೆಫ್. ಪ್ರಯಾಣ ಮೀಸಲು: ಟೆವಿನ್ ಇಮ್ಲಾಚ್, ಅಕೀಮ್ ಜೋರ್ಡಾನ್.
