Virat Kohli: ಭಾರತ ತೊರೆಯಲು ನಿರ್ಧರಿಸಿದ ವಿರಾಟ್ ಕೊಹ್ಲಿ..!

Updated on: Dec 19, 2024 | 1:29 PM

Virat Kohli: ಟೀಮ್ ಇಂಡಿಯಾ ಆಟಗಾರ ಕಳೆದ ಕೆಲ ವರ್ಷಗಳಿಂದ ಲಂಡನ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಪ್ರತಿ ಸರಣಿ ಅಥವಾ ಟೂರ್ನಿಯ ಬಳಿಕ ಅವರು ಲಂಡನ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರು ಭಾರತವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಕೊಹ್ಲಿಯ ಬಾಲ್ಯದ ಕೋಚ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

1 / 5
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಭಾರತವನ್ನು ತೊರೆದು ಲಂಡನ್​ನಲ್ಲಿ ನೆಲೆಸಲಿದ್ದಾರೆ ಎಂದು ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಬಹಿರಂಗ ಪಡಿಸಿದ್ದಾರೆ. ಸದ್ಯ ಕಿಂಗ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿದ್ದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡುತ್ತಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಭಾರತವನ್ನು ತೊರೆದು ಲಂಡನ್​ನಲ್ಲಿ ನೆಲೆಸಲಿದ್ದಾರೆ ಎಂದು ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಬಹಿರಂಗ ಪಡಿಸಿದ್ದಾರೆ. ಸದ್ಯ ಕಿಂಗ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿದ್ದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡುತ್ತಿದ್ದಾರೆ.

2 / 5

ಈ ಸರಣಿಯ ಬಳಿಕ ಭಾರತಕ್ಕೆ ಹಿಂತಿರುಗಲಿರುವ ವಿರಾಟ್ ಕೊಹ್ಲಿ ಕುಟುಂಬ ಸಮೇತರಾಗಿ ಲಂಡನ್​ಗೆ ಶಿಫ್ಟ್ ಆಗಲಿದ್ದಾರೆ. ಅಂದರೆ ಭಾರತವನ್ನು ತೊರೆದು ಇಂಗ್ಲೆಂಡ್​ನಲ್ಲೇ ನೆಲೆಸಲಿದ್ದಾರೆ ಎಂದು ರಾಜ್ ಕುಮಾರ್ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

3 / 5

ವಿರಾಟ್ ಕೊಹ್ಲಿ ಪ್ರತಿ ದೊಡ್ಡ ಟೂರ್ನಿ ಮತ್ತು ಸರಣಿಯ ನಂತರ ಲಂಡನ್‌ನಲ್ಲಿ ಸಮಯ ಕಳೆಯಲು ಹೋಗುತ್ತಿದ್ದರು. ಈ ಬಗ್ಗೆ ಕೋಚ್ ರಾಜ್‌ಕುಮಾರ್ ಶರ್ಮಾ ಅವರಲ್ಲಿ ಕೇಳಿದಾಗ, ವಿರಾಟ್ ಕೊಹ್ಲಿ ಭಾರತವನ್ನು ಶಾಶ್ವತವಾಗಿ ತೊರೆದು ಲಂಡನ್‌ನಲ್ಲಿ ನೆಲೆಸಲು ಯೋಚಿಸುತ್ತಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಅವರು ಲಂಡನ್​ಗೆ ತಮ್ಮ ವಾಸ ಸ್ಥಾನವನ್ನು ಬದಲಿಸಲಿದ್ದಾರೆ ಎಂದು ಹೇಳಿದ್ದಾರೆ.

4 / 5

ಇದಾಗ್ಯೂ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಜೊತೆ ಮುಂದುವರೆಯಲಿದ್ದು, ಸದ್ಯಕ್ಕಂತು ನಿವೃತ್ತಿ ನೀಡುವುದಿಲ್ಲ ಎಂದು ರಾಜ್ ಕುಮಾರ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇನ್ನೂ 5 ವರ್ಷಗಳ ಕಾಲ ಅವರು ಮೈದಾನದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಕೊಹ್ಲಿ ನಿವೃತ್ತಿ ನೀಡಲಿದ್ದಾರೆ ಎಂಬ ವದಂತಿಯನ್ನು ಅವರ ಬಾಲ್ಯದ ಕೋಚ್ ತಳ್ಳಿ ಹಾಕಿದ್ದಾರೆ.

5 / 5

ಸದ್ಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿರುವ ವಿರಾಟ್ ಕೊಹ್ಲಿ ಮೆಲ್ಬೋರ್ನ್ ಟೆಸ್ಟ್​ ಪಂದ್ಯಕ್ಕಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸರಣಿಯ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟ್​ನಿಂದ ಒಂದು ಶತಕ ಮೂಡಿಬಂದಿದೆ. ಇದಾಗ್ಯೂ ಅವರು ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಕಲೆಹಾಕಿರುವುದು 126 ರನ್​ಗಳು ಮಾತ್ರ. ಹೀಗಾಗಿಯೇ ಮೆಲ್ಬೋರ್ನ್ ಟೆಸ್ಟ್​​ನಲ್ಲಿ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಮರಳಿ ಕಂಡುಕೊಳ್ಳಬೇಕಿದೆ.

Loading...
Unable to load recommendations.
Follow Us