Virat Kohli: 7 ಶತಕಗಳು, 14 ಅರ್ಧಶತಕಗಳು: ಆಸ್ಟ್ರೇಲಿಯಾಗೆ ಕಿಂಗ್ ಕೊಹ್ಲಿಯದ್ದೇ ಭಯ..!

| Updated By: ಝಾಹಿರ್ ಯೂಸುಫ್

Updated on: Jun 05, 2023 | 8:29 PM

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವು ಜೂನ್ 7 ರಿಂದ ಶುರುವಾಗಲಿದ್ದು, ಅಂತಿಮ ಹಣಾಹಣಿಯಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.

1 / 8
WTC Final 2023: ಟೀಮ್ ಇಂಡಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡವು ಭರ್ಜರಿ ತಯಾರಿಯಲ್ಲಿದ್ದಾರೆ. ಈ ತಯಾರಿ ನಡುವೆ ವಿರಾಟ್ ಕೊಹ್ಲಿಗಾಗಿ ವಿಶೇಷ ರಣತಂತ್ರಗಳನ್ನು ಕೂಡ ಹೆಣೆಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಿಂಗ್ ಕೊಹ್ಲಿಯ ಕಂಬ್ಯಾಕ್.

2 / 8
ಹೌದು, 2019 ರಿಂದ 2021 ರವರೆಗೆ ಮರೆಯಾಗಿದ್ದ ಕಿಂಗ್ ಕೊಹ್ಲಿಯ ಫಾರ್ಮ್​ ಇದೀಗ ಮತ್ತೆ ಬಂದಿದೆ. ಇದುವೇ ಈಗ ಆಸ್ಟ್ರೇಲಿಯಾ ತಂಡವನ್ನು ಚಿಂತೆಗೀಡು ಮಾಡಿದೆ. ಏಕೆಂದರೆ ಕಳೆದ ಒಂದು ವರ್ಷದಲ್ಲಿ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

3 / 8
ಅಂದರೆ ವಿರಾಟ್ ಕೊಹ್ಲಿ 2022ರ ಏಷ್ಯಾಕಪ್​ ಮೂಲಕ ಫಾರ್ಮ್​ ಕಂಡುಕೊಂಡಿದ್ದರು. ಅದರಲ್ಲೂ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿ ಶತಕದ ಬರವನ್ನು ನೀಗಿಸಿದ್ದರು. ಇದಾದ ಬಳಿಕ ಕಿಂಗ್ ಕೊಹ್ಲಿ ಹಿಂತಿರುಗಿ ನೋಡಿಲ್ಲ ಎನ್ನಬಹುದು.

4 / 8
ಏಕೆಂದರೆ ಏಷ್ಯಾಕಪ್​ನಲ್ಲಿ ಫಾರ್ಮ್​ ಕಂಡುಕೊಂಡ ಬಳಿಕ ವಿರಾಟ್ ಕೊಹ್ಲಿ ಒಟ್ಟು 48 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 52 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ ಕಲೆಹಾಕಿರುವುದು ಬರೋಬ್ಬರಿ 2235 ರನ್​ಗಳು. ಅಂದರೆ ಕೊಹ್ಲಿ ಪ್ರತಿ ಪಂದ್ಯಗಳಲ್ಲಿ 53.21 ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.

5 / 8
ಇದರ ನಡುವೆ 7 ಭರ್ಜರಿ ಶತಕಗಳನ್ನು ಬಾರಿಸಿದರೆ, 14 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಂದರೆ 2019 ರಿಂದ 2022 ರವರೆಗೆ 3 ವರ್ಷ ಶತಕದ ಬರ ಎದುರಿಸಿದ್ದ ಕೊಹ್ಲಿ ಒಂದೇ ವರ್ಷದೊಳಗೆ ಒಟ್ಟು 7 ಸೆಂಚುರಿಗಳನ್ನು ಸಿಡಿಸಿ ಅಬ್ಬರಿಸಿರುವುದು ವಿಶೇಷ.

6 / 8
ಅದರಲ್ಲೂ ಈ ಒಂದು ವರ್ಷದೊಳಗೆ ವಿರಾಟ್ ಕೊಹ್ಲಿ ಅತೀ ಹೆಚ್ಚು ಸ್ಕೋರ್​ಗಳಿಸಿದ್ದು ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ. ಈ ವರ್ಷ ಮಾರ್ಚ್​ನಲ್ಲಿ ಅಹಮದಾಬಾದ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ನಲ್ಲಿ ಕಿಂಗ್ ಕೊಹ್ಲಿ ಶತಕ ಬಾರಿಸಿ ವಿರಾಟ ದರ್ಶನ ತೋರಿಸಿದ್ದರು.

7 / 8
ಅಂದು ಆಸ್ಟ್ರೇಲಿಯಾ ಬೌಲರ್​ಗಳನ್ನು ಚೆಂಡಾಡಿದ್ದ ಕೊಹ್ಲಿ ಮೊದಲ ಇನಿಂಗ್ಸ್​ನಲ್ಲಿ 186 ರನ್ ಬಾರಿಸಿ ಅಬ್ಬರಿಸಿದ್ದರು. ಈ ಅಬ್ಬರವನ್ನು ನೋಡಿ ಆಸೀಸ್ ಬೌಲರ್​ಗಳೇ ಇದೀಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗಾಗಿ ಸಜ್ಜಾಗುತ್ತಿದ್ದಾರೆ.

8 / 8
ಅಂದರೆ ಕಿಂಗ್ ಕೊಹ್ಲಿಯ ಅದ್ಭುತ ಫಾರ್ಮ್​ ಆಸ್ಟ್ರೇಲಿಯಾ ಪಾಲಿಗೆ ಕಂಟಕವಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ನಿರ್ಣಾಯಕ ಪಂದ್ಯದಲ್ಲಿ ಅತ್ಯದ್ಭುತ ಇನಿಂಗ್ಸ್ ಆಡುವ ವಿರಾಟ್ ಕೊಹ್ಲಿಯನ್ನು ಕಟ್ಟಿಹಾಕಲು ಆಸ್ಟ್ರೇಲಿಯಾ ಬೌಲರ್​ಗಳು ವಿಶೇಷ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ತಂತ್ರಗಳಿಗೆ ಕಿಂಗ್ ಕೊಹ್ಲಿಯ ಪ್ರತಿತಂತ್ರ ಹೇಗಿರಲಿದೆ ಎಂಬುದು ಜೂನ್ 7 ರಿಂದ ಗೊತ್ತಾಗಲಿದೆ.