Virat Kohli: RCB ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಕಿಂಗ್ ಕೊಹ್ಲಿ
TV9 Web | Updated By: ಝಾಹಿರ್ ಯೂಸುಫ್
Updated on:
Oct 13, 2021 | 11:46 PM
IPL 2021 RCB: ಮುಂದಿನ ಸೀಸನ್ನಲ್ಲಿ ಮೆಗಾ ಹರಾಜು ನಡೆಯಲಿದೆ. ಇತ್ತ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ಕಾರಣ ಕೊಹ್ಲಿಯನ್ನು ಆರ್ಸಿಬಿ ಉಳಿಸಿಕೊಳ್ಳಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
1 / 5
ಸೋಲಿನೊಂದಿಗೆ ಆರ್ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ. 140 ಮ್ಯಾಚ್ಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ ತಂಡಕ್ಕೆ 66 ಗೆಲುವು ತಂದುಕೊಟ್ಟಿದ್ದರು. ಇದೀಗ ಆರ್ಸಿಬಿ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದಾರೆ.
2 / 5
ಅತ್ತ ಮುಂದಿನ ಸೀಸನ್ನಲ್ಲಿ ಮೆಗಾ ಹರಾಜು ನಡೆಯಲಿದೆ. ಇತ್ತ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ಕಾರಣ ಕೊಹ್ಲಿಯನ್ನು ಆರ್ಸಿಬಿ ಉಳಿಸಿಕೊಳ್ಳಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆ ಖುದ್ದು ಕೊಹ್ಲಿ ಉತ್ತರ ನೀಡಿದ್ದಾರೆ.
3 / 5
ಕೆಕೆಆರ್ ವಿರುದ್ದ ಸೋಲಿನ ಬಳಿಕ ಮಾತನಾಡಿರುವ ಕೊಹ್ಲಿ, ನನ್ನ ತಂಡಕ್ಕಾಗಿ ನಾಯಕನಾಗಿ ಏನು ಮಾಡಬೇಕು ಎಲ್ಲವನ್ನೂ ಮಾಡಿದ್ದೇನೆ. ಇನ್ಮುಂದೆ ಆಟಗಾರನಾಗಿ ಐಪಿಎಲ್ನಲ್ಲಿ ಕಾಣಿಸಲಿದ್ದೇನೆ. ಅದು ಬೇರೆ ಯಾವ ತಂಡದಲ್ಲೂ ಅಲ್ಲ. ಇದೇ ಆರ್ಸಿಬಿ ತಂಡದಲ್ಲೇ ಇರಲಿದ್ದೇನೆ.
4 / 5
ವಿರಾಟ್ ಕೊಹ್ಲಿ: ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇದು ಕೊಹ್ಲಿ ಸಾರಥ್ಯದಲ್ಲಿ ನಡೆಯಲಿರುವ ಕೊನೆಯ ಟಿ20 ವಿಶ್ವಕಪ್ ಎಂಬುದು ವಿಶೇಷ. ಅಂದರೆ ಈ ಬಾರಿಯ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಟೀಮ್ ಇಂಡಿಯಾ ಟಿ20 ತಂಡಕ್ಕೆ ರಾಜೀನಾಮೆ ನೀಡಲಿದ್ದಾರೆ.
5 / 5
ಇದರೊಂದಿಗೆ ಇತರೆ ಫ್ರಾಂಚೈಸಿಗಳು ಕೊಹ್ಲಿ ದೊಡ್ಡ ಮೊತ್ತದ ಆಫರ್ ನೀಡಿದರೂ ಕೊಹ್ಲಿ ಆರ್ಸಿಬಿ ಬಿಟ್ಟು ಹೋಗುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ. ಅಷ್ಟೇ ಅಲ್ಲದೆ ತಮ್ಮ ನಿವೃತ್ತಿವರೆಗೂ ಆರ್ಸಿಬಿ ಪರ ಮಾತ್ರ ಆಡುತ್ತೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ ಎಂದೇ ಹೇಳಬಹುದು.
Published On - 5:38 pm, Tue, 12 October 21